ಅಯೋಧ್ಯೆ ಶ್ರೀರಾಮನಿಗೆ ಶಿಯಾ ಮಂಡಳಿ ಬೆಳ್ಳಿ ಬಾಣ
Team Udayavani, Oct 18, 2017, 6:25 AM IST
ಲಕ್ನೋ: ವಿವಾದದ ಕೇಂದ್ರಬಿಂದು ವಾಗಿ ಗಮನ ಸೆಳೆದಿದ್ದ ಅಯೋಧ್ಯೆ ಈಗ ಅಚ್ಚರಿಯ ಸಾಮರಸ್ಯದ ಬೆಳವಣಿಗೆಯೊಂದಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ಸರಯೂ ನದಿ ತೀರದಲ್ಲಿ ಉತ್ತರಪ್ರದೇಶ ಸರಕಾರವು ನಿರ್ಮಿ ಸಲು ಉದ್ದೇಶಿಸಿರುವ 100 ಮೀಟರ್ ಎತ್ತರದ ಶ್ರೀರಾಮನ ವಿಗ್ರಹಕ್ಕೆ ಗೌರವದದ್ಯೋತಕವಾಗಿ 10 ಬೆಳ್ಳಿಯ ಬಾಣಗಳನ್ನು ಉಡುಗೊರೆ ನೀಡುವುದಾಗಿ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ ಘೋಷಿಸಿದೆ.
ಸರಯೂ ನದಿ ತೀರದಲ್ಲಿ ರಾಮನ ವಿಗ್ರಹ ಸ್ಥಾಪಿಸುವ ಸರಕಾರದ ನಿರ್ಧಾರವನ್ನು ಸ್ವಾಗತಿಸಿರುವ ಶಿಯಾ ಮಂಡಳಿ, “ಈ ನಿರ್ಧಾರ ಪ್ರಶ್ನಾತೀತ. ನಾವು ಆ ವಿಗ್ರಹಕ್ಕೆ ಬೆಳ್ಳಿಯ ಬಾಣಗಳನ್ನು ನೀಡುತ್ತಿದ್ದೇವೆ. ಇದು ಶಿಯಾ ಸಮುದಾಯಕ್ಕೆ ಶ್ರೀರಾಮನ ಬಗ್ಗೆ ಇರುವ ಗೌರವದ ದ್ಯೋತಕ’ ಎಂದಿದೆ.
ಈ ಕುರಿತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಪತ್ರ ಬರೆದಿರುವ ವಕ್ಫ್ ಮಂಡಳಿ ಅಧ್ಯಕ್ಷ ವಸೀಂ ರಿಜ್ವಿ, “ಶ್ರೀರಾಮನ ವಿಗ್ರಹ ಸ್ಥಾಪಿಸುವುದರಿಂದ ಉತ್ತರಪ್ರದೇಶವು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡುತ್ತದೆ. ಈ ಭಾಗದ ನವಾಬರು ಯಾವಾಗಲೂ ಅಯೋಧ್ಯೆಯ ದೇವಸ್ಥಾನಗಳನ್ನು ಗೌರವಿಸುತ್ತಿದ್ದರು. ಹನುಮಾನ್ ಗಹಿìಗೆ ಇಲ್ಲಿ ಭೂಮಿ ನೀಡಿದ್ದೂ ನವಾಬ್ ಶುಜಾ-ಉದ್-ದೌಲಾ ಅವರೇ’ ಎಂದಿದ್ದಾರೆ.
ಶ್ರೀರಾಮನ ವಿಗ್ರಹ ನಿರ್ಮಾಣ ಪ್ರಸ್ತಾವ ವನ್ನು ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಜಿಲಾನಿ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ವಿರೋಧಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
Rajasthan:ಪೊಲೀಸ್ ಭದ್ರತೆಗೆ ಆದ 9 ಲಕ್ಷ ರೂ.ಬಿಲ್ ಪಾವತಿಸಿ: ರಾಜಸ್ಥಾನ ರೈತನಿಗೆ ನೋಟಿಸ್
ED: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಫ್ಲ್ಯಾಟ್ ಇ.ಡಿ.ವಶಕ್ಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.