Modi3.0ರಲ್ಲೇ ಏಕ ಚುನಾವಣೆ: ಕೇಂದ್ರ ಸರಕಾರಕ್ಕೆ 100 ದಿನ ಹಿನ್ನೆಲೆಯಲ್ಲಿ ಅಮಿತ್ ಶಾ ಘೋಷಣೆ
ಏಕ ಚುನಾವಣೆಗೆ ಮಿತ್ರಪಕ್ಷಗಳಾದ ಜೆಡಿಯು, ಎಲ್‌ಜೆಪಿ ಬೆಂಬಲ
Team Udayavani, Sep 18, 2024, 7:10 AM IST
ಹೊಸದಿಲ್ಲಿ: ಪ್ರಧಾನಿ ಮೋದಿ ನೇತೃತ್ವದ ಸರಕಾರದ 3ನೇ ಅವಧಿಯಲ್ಲಿಯೇ “ಒಂದು ದೇಶ, ಒಂದು ಚುನಾವಣೆ’ಯನ್ನು ಜಾರಿಮಾಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
3ನೇ ಅವಧಿಯ ಮೋದಿ ಸರಕಾರಕ್ಕೆ 100 ದಿನ ತುಂಬಿದ ಹಿನ್ನೆಲೆಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಈ ಸರಕಾರದ ಅವಧಿ ಮುಕ್ತಾಯವಾಗುವುದರೊಳಗೆ ಏಕ ಚುನಾವಣ ಪದ್ಧತಿಯನ್ನು ಜಾರಿ ಮಾಡುತ್ತೇವೆ. ಈ ಲೋಕಸಭೆ ಚುನಾವಣೆಗೆ ಇದು ಬಿಜೆಪಿ ನೀಡಿದ್ದ ಪ್ರಮುಖ ಭರವಸೆಯಾಗಿತ್ತು. ಇದನ್ನು ನಾವು ಜಾರಿ ಮಾಡುತ್ತೇವೆ ಎಂದರು.
ಒಂದು ದೇಶ, ಒಂದು ಚುನಾವಣೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಎನ್‌ಡಿಎ ಮಿತ್ರ ಪ ಕ್ಷಗಳಾದ ಜೆಡಿಯು ಮತ್ತು ಎಲ್‌ಜೆಪಿ ಘೋಷಿ ಸಿದ ಬೆನ್ನಲ್ಲೇ ಅಮಿತ್ ಶಾ ಅವರ ಈ ಹೇಳಿಕೆ ಮಹತ್ವ ಪಡೆದಿದೆ.
ಸ್ವಾತಂತ್ರ್ಯೋತ್ಸವ ಭಾಷಣದಲ್ಲೂ ಪ್ರಧಾನಿ ಮೋದಿ ಏಕ ಚುನಾವಣೆ ಯನ್ನು ಜಾರಿ ಮಾಡುವುದಾಗಿ ಘೋಷಣೆ ಮಾಡಿದ್ದರು.
ಅಲ್ಲದೆ ಇದಕ್ಕಾಗಿ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದಲ್ಲಿ ಸಮಿತಿಯನ್ನು ಕೂಡ ರಚನೆ ಮಾಡಲಾಗಿತ್ತು. ವರದಿ ಸಲ್ಲಿಸಿದ ಈ ಸಮಿತಿ 18 ಸಂವಿಧಾನ ತಿದ್ದುಪಡಿಗಳನ್ನು ಮಾಡುವಂತೆ ಸೂಚಿಸಿತ್ತು.
ಶೀಘ್ರ ಜನಗಣತಿ ಆರಂಭ
ದೇಶಾದ್ಯಂತ ಜನಗಣತಿ ನಡೆಸುವುದಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ಶೀಘ್ರವೇ ಘೋಷಣೆ ಹೊರಡಿಸಲಿದೆ ಎಂದು ಅಮಿತ್ ಶಾ ಹೇಳಿದರು. ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಜನಗಣತಿ ವಿಳಂಬವಾಗಿದ್ದು, ಶೀಘ್ರವೇ ಅದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ನಾವು ಸಾರ್ವ ಜನಿಕರ ಮುಂದೆ ಮಂಡಿಸುತ್ತೇವೆ ಎಂದು ಹೇಳಿದರು.
ರೈಲ್ವೆ ಅಪಘಾತಗಳ ತನಿಖೆ
ದೇಶದಲ್ಲಿ ನಡೆಯುತ್ತಿರುವ ರೈಲ್ವೇ ಅಪಘಾತಗಳಿಗೆ ಸಂಬಂಧಿಸಿ ಸಂಪೂರ್ಣ ತನಿಖೆ ನಡೆಸಲಾಗುತ್ತದೆ. ರೈಲ್ವೇ ಅವಘಡಗಳು ಕಳವಳಕಾರಿಯಾಗಿವೆ. ಹೀಗಾಗಿ ಇದರ ಮೂಲದ ಬಗ್ಗೆ ನಾವು ತನಿಖೆ ನಡೆಸುತ್ತೇವೆ. 100 ದಿನಗಳಲ್ಲಿ 38 ಅಪಘಾತಗಳಾಗಿವೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ ಇವೆಲ್ಲವೂ ಸಣ್ಣಪುಟ್ಟ ಅಪಘಾತಗಳು ಎಂದರು.
100 ದಿನದಲ್ಲಿ 3 ಲಕ್ಷ ಕೋ.ರೂ. ಬಿಡುಗಡೆ
ಮೋದಿ ಸರಕಾರದ 3ನೇ ಅವಧಿಯಲ್ಲಿ ಮೊದಲ 100 ದಿನಗಳಲ್ಲೇ ವಿವಿಧ ಯೋಜನೆಗಳಿಗಾಗಿ 3 ಲಕ್ಷ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. 25 ಸಾವಿರ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗುತ್ತದೆ. ಮಹಾರಾಷ್ಟ್ರ
ದಲ್ಲಿ ವಧಾವನ್ ಬಂದರು ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ ಖಾರಿಫ್ ಬೆಳೆಗೆ ಬೆಂಬಲ ಬೆಲೆ ಒದಗಿಸುವುದು ಸರಕಾರದ ಆದ್ಯತೆಯಾಗಿದೆ ಎಂದು ಶಾ ಹೇಳಿದರು.
ಏಕ ಚುನಾವಣೆಗೆ
ಜೆಡಿಯು, ಎಲ್‌ಜೆಪಿ ಬೆಂಬಲ
ಒಂದು ದೇಶ, ಒಂದು ಚುನಾವಣೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಜೆಡಿಯು ಮತ್ತು ಎಲ್‌ಜೆಪಿ ಘೊಷಣೆ ಮಾಡಿವೆ. ಏಕ ಚುನಾವಣೆ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತದೆ. ಇದು ಪದೇ ಪದೆ ನಡೆಯುವ ಚುನಾವಣೆಗಳಿಗೆ ಮುಕ್ತಿ ನೀಡುವುದರಿಂದ ಕೇಂದ್ರ ಸರಕಾರ ಸ್ಥಿರ ಮತ್ತು ಸುಧಾರಣೆ ನೀತಿಗಳತ್ತ ಹೆಚ್ಚಿನ ಗಮನ ಹರಿಸಲಿದೆ ಎಂದು ಜೆಡಿಯು ಹೇಳಿದೆ.
ಪದೇ ಪದೆ ನಡೆಯುವ ಚುನಾವಣೆಗಳು ಸರಕಾರದ ವೆಚ್ಚವನ್ನು ಹೆಚ್ಚು ಮಾಡುತ್ತವೆ. ಅಲ್ಲದೆ ಯೋಜನೆಗಳ ಅನುಷ್ಠಾನಕ್ಕೆ ಭಾರೀ ನಷ್ಟವನ್ನುಂಟು ಮಾಡುತ್ತವೆ. ಇದು ದೇಶದ ಪ್ರಗತಿಗೆ ಅಡ್ಡಿ ಮಾಡುತ್ತದೆ. ಹೀಗಾಗಿ ಏಕ ಚುನಾವಣೆ ಜಾರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಎಲ್‌ಜೆಪಿ ಹೇಳಿದೆ.
ಜಾತಿಗಣತಿಗೆ ಕೇಂದ್ರ ಸರಕಾರ ಶೀಘ್ರವೇ ಘೋಷಣೆ ಹೊರಡಿಸ ಲಿದೆ.ಇದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ಯನ್ನು ನಾವು ಸಾರ್ವಜನಿಕರ ಮುಂದೆ ಇರಿಸುತ್ತೇವೆ.
– ಅಮಿತ್ ಶಾ, ಕೇಂದ್ರ ಗೃಹ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
Adani Group: ಲಂಚ, ಸತ್ಯ ಮರೆಮಾಚಿದ ಕಾರಣಕ್ಕೆ ಗೌತಮ್ ಅದಾನಿ ವಿರುದ್ದ ಅಮೆರಿಕದಲ್ಲಿ ಕೇಸು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.