ಪ್ಯಾರಡೈಸ್‌ನಲ್ಲಿ ಸಿನ್ಹಾ, ಹರ್ಷ; ವಿದೇಶಿ ಹೂಡಿಕೆ ಮಾಹಿತಿ ಬಯಲು
Team Udayavani, Nov 7, 2017, 6:00 AM IST
ಹೊಸದಿಲ್ಲಿ: ಪನಾಮಾ ಪೇಪರ್ಸ್ ಮೂಲಕ ಇಡೀ ಜಗತ್ತನ್ನೇ ನಡುಗಿಸಿದ್ದ ಅಂತಾ ರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ, ಈಗ ಪ್ರಪಂಚದ ಸೂಪರ್ ರಿಚ್, ವಿಐಪಿ ಮತ್ತು ವಿವಿಐಪಿಗಳ ನಿದ್ದೆಗೆಡಿಸಿದೆ.
ಸುಮಾರು 19 ತೆರಿಗೆ ಸ್ವರ್ಗ ದೇಶಗಳ ಪಟ್ಟಿ ಮಾಡಿರುವ ಈ ಒಕ್ಕೂಟ, ಈ ತನಿಖಾ ವರದಿ ಗಾರಿಕೆಗೆ “ಪ್ಯಾರಡೈಸ್ ಪೇಪರ್ಸ್’ ಎಂಬ ಹೆಸರನ್ನೂ ಇಟ್ಟುಕೊಂಡಿದೆ. ಈ ತೆರಿಗೆದಾರರ ಸ್ವರ್ಗದಂಥ ದೇಶಗಳಲ್ಲಿ ಹೂಡಿಕೆ ಮಾಡಿರುವವರಲ್ಲಿ ಭಾರತದ 714 ಮಂದಿಯೂ ಸೇರಿದ್ದು, ಪ್ರಮುಖ ವಾಗಿ ಕೇಂದ್ರ ಸಚಿವ ಜಯಂತ್ ಸಿನ್ಹಾ ಅವರ ಹೆಸರು ಕೇಳಿಬಂದಿದೆ.
ಇನ್ನುಳಿದಂತೆ ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಲಿ ಅವರ ಪುತ್ರ ಹರ್ಷ ಮೊಲಿ, ಬಿಜೆಪಿ ಸಂಸದ ಆರ್.ಕೆ. ಸಿನ್ಹಾ, ಕಾರ್ಪೊರೇಟ್ ಲಾಬಿಗಾರ್ತಿ ನೀರಾ ರಾಡಿಯಾ, ಬಾಲಿವುಡ್‌ನ ಬಿಗ್‌ಬಿ ಅಮಿತಾಭ್ ಬಚ್ಚನ್, ಅಶೋಕ್ ಗೆಹೊÉàಟ್, ಸಚಿನ್ ಪೈಲಟ್, ಕಾರ್ತಿ ಚಿದಂಬರಂ, ವಯಲಾರ್ ರವಿ ಪುತ್ರ ರವಿ ಕೃಷ್ಣಾ ಮತ್ತು ಸಾಲ ಕಟ್ಟದೆ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ವಿಜಯ ಮಲ್ಯ ಸಹಿತ ನಾನಾ ಗಣ್ಯಾತಿಗಣ್ಯರ ಹೆಸರೂ ಈ ಪಟ್ಟಿಯಲ್ಲಿ ಬಹಿರಂಗವಾಗಿದೆ.
ಆಂಗ್ಲ ಪತ್ರಿಕೆ ಇಂಡಿಯನ್ ಎಕ್ಸ್‌ಪ್ರೆಸ್ ಕೂಡ ಈ ತನಿಖಾ ತಂಡದಲ್ಲಿದ್ದು, ಪಟ್ಟಿ ಪ್ರಕಟ ಮಾಡು ತ್ತಿದ್ದಂತೆ ದೇಶದಲ್ಲಿ ರಾಜಕೀಯವಾಗಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಪ್ರಮುಖವಾಗಿ ಕೇಂದ್ರ ದಲ್ಲಿ ನಾಗರಿಕ ವಿಮಾನಯಾನ ಸಹಾಯಕ ಸಚಿವರಾಗಿರುವ ಜಯಂತ್ ಸಿನ್ಹಾ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸಿವೆ. ಜತೆಗೆ, ಬಹು ಆಯಾಮ ಗಳ ತನಿಖೆ ನಡೆಸುವಂತೆಯೂ ಕಾಂಗ್ರೆಸ್ ಸಹಿತ ಇತರ ವಿಪಕ್ಷಗಳು ಒತ್ತಾಯಿಸಿವೆ. ಈ ನಡುವೆ, ಪ್ಯಾರಡೈಸ್ ಪೇಪರ್ಸ್‌ನಲ್ಲಿ ತಳುಕು ಹಾಕಿ ಕೊಂಡಿರುವ ಎಲ್ಲ ಗಣ್ಯಾತಿಗಣ್ಯರ ವಿರುದ್ಧ ತನಿಖೆ ನಡೆಸುವುದಾಗಿ ಕೇಂದ್ರ ಸರಕಾರದ ಮೂಲಗಳು ಹೇಳಿವೆ.
ಹರ್ಷ ಮೊಲಿ ಹೆಸರೂ ಪತ್ತೆ: ವೀರಪ್ಪ ಮೊಲಿ ಕೇಂದ್ರ ಸಚಿವರಾಗಿದ್ದ ಸಮಯದಲ್ಲಿ ಅವರ ಪುತ್ರ ಹರ್ಷ ಮೊಲಿ ತನ್ನ ಮೋಕ್ಷ ಯುಗ ಅಕ್ಸೆಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಗೆ ಯೂನಿಟಸ್ ಗ್ರೂಪ್ ಎಂಬ ಸಂಸ್ಥೆಯ ವಿದೇಶ
ದಲ್ಲಿರುವ ಅಂಗಸಂಸ್ಥೆಗಳಿಂದ ಹೂಡಿಕೆ ಪಡೆದಿ ದ್ದಾರೆ. ಯುಐಪಿ, ಎಮ್‌ವೈಎ, ಎಲ್‌ಎಲ್‌ಸಿ ಮತ್ತು ಎಂವೈಎ ಯೂನಿಟಸ್ ಇಂಪ್ಯಾಕ್ಟ್ ಪಾಟ್ನìರ್ಸ್ ಸಹಿತ ಹಲವು ಕಂಪೆನಿಗಳನ್ನು ಆ್ಯಪಲ್‌ಬಿ ಎಂಬ ಕಾನೂನು ಸಲಹಾ ಸಂಸ್ಥೆಯ ಮೂಲಕ ವಿದೇಶದಲ್ಲಿ ಸ್ಥಾಪಿಸಲಾಗಿದೆ.
2012ರ ಮಾರ್ಚ್ 15ರಂದು 4.5 ಕೋಟಿ ರೂ. ಅನ್ನು ಮೋಕ್ಷ ಯುಗ ಕಂಪೆನಿಯಲ್ಲಿ ಹೂಡಿಕೆ ಮಾಡಲು ಯುಐಪಿ, ಎಂವೈಎ, ಎಲ್‌ಎಲ್‌ಸಿ ಎಂಬ ಕಂಪೆನಿಯು ಅನುಮೋದಿಸಿದೆ. ಆದರೆ ಈ ಕಂಪೆನಿಯಲ್ಲಿ 2014ರಲ್ಲಿ 14 ಷೇರುದಾರ ರಿದ್ದು, ಎಲ್ಲ ಷೇರುದಾರರೂ ಅತ್ಯಂತ ಕಡಿಮೆ ಪ್ರಮಾಣದ ಪಾಲುದಾರಿಕೆ ಹೊಂದಿದ್ದಾರೆ. ಹೀಗಾಗಿ ಅನಾಮಿಕ ವ್ಯಕ್ತಿಗಳು ಈ ಹೂಡಿಕೆಯ ಹಿಂದೆ ಇದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.
ಆರೋಪ ತಳ್ಳಿಹಾಕಿದ ಹರ್ಷ: ಐಸಿಐಜೆ ವರದಿಗೆ ಪ್ರತಿಕ್ರಿಯಿಸಿರುವ ಹರ್ಷ ಮೊಲಿ, “ಕಾನೂನುಬದ್ಧ ಮೂಲಗಳಿಂದಲೇ ಹೂಡಿಕೆ ಸ್ವೀಕರಿಸಲಾಗಿದೆ. ಯೂನಿಟಸ್ ಈಕ್ವಿಟಿ ಫಂಡ್ ಮತ್ತು ಖೋಸ್ಲಾ ಇಂಪ್ಯಾಕ್ಟ್ ಮೂಲಕ ಹೂಡಿಕೆ ಪಡೆಯಲಾಗಿದ್ದು, ಇದು ನಮ್ಮ ತಂದೆ ಕೇಂದ್ರ ಸಚಿವರಾಗುವುದಕ್ಕಿಂತಲೂ ಮೊದಲೇ ನಡೆದ ವಹಿ ವಾಟು’ ಎಂದು ಹೇಳಿದ್ದಾರೆ. ಈ ಬಗ್ಗೆ ಕಂಪೆನಿಗಳ ರಿಜಿಸ್ಟ್ರಾರ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಫೈಲಿಂಗ್ ಮಾಡಲಾಗಿದೆ ಎಂದಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿ ಸಲು ಬಯಸಿದ್ದ ಹರ್ಷಗೆ ಕಾಂಗ್ರೆಸ್ ನಡೆಸಿದ್ದ ಪ್ರೈಮರೀಸ್‌ನಲ್ಲಿ ಟಿಕೆಟ್ ನಿರಾಕರಿಸಲಾಗಿತ್ತು. ಅವರು ಸಾಮಾಜಿಕ ಕಾರ್ಯಕರ್ತರಲ್ಲ ಎಂಬ ಕಾರಣ ನೀಡಿ ಟಿಕೆಟ್ ನೀಡಿರಲಿಲ್ಲ.
ಸಚಿವ ಜಯಂತ್ ಸಿನ್ಹಾ ಹೆಸರು ಪ್ರಸ್ತಾಪ: ಪ್ಯಾರಡೈಸ್ ಪೇಪರ್ಸ್‌ನಲ್ಲಿ ಕೇಂದ್ರ ಸಚಿವ ಜಯಂತ್ ಸಿನ್ಹಾ ಹೆಸರೂ ಪ್ರಸ್ತಾಪವಾಗಿದೆ. ಇವರು ಒಮಿªಯಾರ್ ನೆಟ್‌ವರ್ಕ್ ಎಂಬ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಈ ಒಮಿªಯಾರ್ ನೆಟ್‌ವರ್ಕ್ ಕಂಪೆನಿಯು ಡಿ.ಲೈಟ್ ಡಿಸೈನ್ ಎಂಬ ಅಮೆರಿಕದ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದು, ಇದು ಕೇಮನ್ ಐಲ್ಯಾಂಡ್‌ನಲ್ಲಿರುವ ಕಂಪೆನಿಯೊಂದರಲ್ಲಿ ಹೂಡಿಕೆ ಮಾಡಿದೆ ಎಂದು ಪ್ಯಾರಡೈಸ್ ಪೇಪರ್ಸ್
ನಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿನ್ಹಾ, ನಡೆದಿರುವ ವಹಿವಾಟುಗಳು ಕಾನೂನುಬದ್ಧವಾಗಿದೆ ಎಂದಿದ್ದಾರೆ. ಅಲ್ಲದೆ ಒಮಿªಯಾರ್ ನೆಟ್‌ವರ್ಕ್‌ನ ಪರವಾಗಿ ಮಾತ್ರ ನಾನು ಈ ವಹಿವಾಟು ನಡೆಸಿದ್ದೇನೆ. ಇದು ವೈಯಕ್ತಿಕ ಉದ್ದೇಶಕ್ಕೆ ನಡೆದ ವಹಿವಾಟು ಅಲ್ಲವೇ ಅಲ್ಲ. ಕೇಂದ್ರ ಸಚಿವನಾಗುತ್ತಿದ್ದಂತೆಯೇ ನಾನು ಈ ಡಿ ಲೈಟ್ ಮಂಡಳಿಗೆ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ.
ಏನಿದು ಪ್ಯಾರಡೈಸ್ ಪೇಪರ್ಸ್?
ಇದು ತನಿಖಾ ವರದಿಗಳ ಸಮಗ್ರ ಮಾಹಿತಿಯನ್ನೊಳಗೊಂಡ 13.4 ದಶಲಕ್ಷ ದಾಖಲೆಗಳ ಸಂಗ್ರಹ. ಇದರಲ್ಲಿ 6.8 ದಶಲಕ್ಷ ದಾಖಲೆಗಳು ಆ್ಯಪಲ್ ಬೇ ಎಂಬ ಕಾನೂನು ಸೇವಾ ಕಂಪೆನಿ ಹಾಗೂ ಕಾರ್ಪೊರೇಟ್ ಸೇವಾ ಸಂಸ್ಥೆಗೆ ಸಂಬಂಧಿಸಿದವುಗಳಾಗಿವೆ. ತೆರಿಗೆದಾರರ ಸ್ವರ್ಗವೆನಿಸಿರುವ 19 ದೇಶಗಳಲ್ಲಿ ಸರಕಾರಗಳ ಕಣ್ಣು ತಪ್ಪಿಸಿ ಇಡಲಾಗಿರುವ ಮತ್ತು ಅಕ್ರಮ ಕಂಪೆನಿಗಳಲ್ಲಿ ಹಣ ಹೂಡಿಕೆ ಮಾಡಿರುವ ಮಾಹಿತಿಯನ್ನು ಒಳಗೊಂಡಿದೆ. 1950 ರಿಂದ 2016ರ ವರೆಗಿನ ಮಾಹಿತಿಗಳು ಈ ಪೇಪರ್ಸ್‌ನಲ್ಲಿ ಇವೆ. ಅದರಲ್ಲೂ 1993ರಿಂದ 2014ರ ವರೆಗಿನ ಆ್ಯಪಲ್‌ಬೇ ಹೊಂದಿದ್ದ 1,20,000 ಗ್ರಾಹಕರು ಮತ್ತು ಕಂಪೆನಿಗಳ ಮಾಹಿತಿ ಸಿಕ್ಕಿದೆ. ಹೆಚ್ಚಿನ ಗ್ರಾಹಕರು ಅಮೆರಿಕ, ಚೀನ ಇಂಗ್ಲೆಂಡ್ ಮತ್ತು ಹಾಂಕಾಂಗ್ ದೇಶಕ್ಕೆ ಸೇರಿದವರಾಗಿದ್ದಾರೆ. ಭಾರತದ 714 ಮಂದಿ ಕೂಡ ಇದ್ದಾರೆ.
ಏನಿದು ಆ್ಯಪಲ್ ಬೇ?
ಇದು 19 ತೆರಿಗೆದಾರರ ಸ್ವರ್ಗದಂತಿರುವ ದೇಶಗಳಲ್ಲಿ ಕಂಪೆನಿ ಶುರು ಮಾಡಲು ಮತ್ತು ವ್ಯವಹಾರ ನಡೆಸಲು ಸಹಕಾರ ನೀಡುವ ಕಾನೂನು ಮತ್ತು ಕಾರ್ಪೊರೇಟ್ ಸೇವಾ ಸಂಸ್ಥೆ. ಈ ಸಂಸ್ಥೆಯ ಅಡಿಯಲ್ಲಿರುವ 25 ಸಾವಿರ ಕಂಪೆನಿಗಳ ಮಾಹಿತಿಗಳನ್ನು ಬಯಲಿಗೆಳೆಯಲಾಗಿದೆ. ಹೆಚ್ಚಾಗಿ ಬರ್ಮುಡಾ ಮತ್ತು ಕೆಮ್ಯಾನ್ಸ್ ಐಲೆಂಡ್ಸ್, ಬ್ರಿಟಿಷ್ ವರ್ಜಿನ್ ಐಲೆಂಡ್ ಸಹಿತ 19 ದೇಶಗಳಲ್ಲಿ ಈ ಕಂಪೆನಿಗಳನ್ನು ಶುರು ಮಾಡಲಾಗಿದೆ.
ಹೇಗೆ ನಡೆಯುತ್ತದೆ ಅಕ್ರಮ ವಹಿವಾಟು ?
ದೇಶದಲ್ಲಿನ ತೆರಿಗೆ ತಪ್ಪಿಸುವುದಕ್ಕಾಗಿ ವಿದೇಶಿ ಕಂಪೆನಿಗಳ ಮೂಲಕ ಹೂಡಿಕೆ ಮಾಡಲಾಗುತ್ತದೆ. ಆದರೆ ಈ ಹಣ ಭಾರತದ ಮೂಲದಿಂದಲೇ ಹೋಗುತ್ತದೆ. ಇದನ್ನು ರೌಂಡ್ ಟ್ರಿಪ್ಪಿಂಗ್ ಎಂದು ಕರೆಯಲಾಗುತ್ತದೆ. ಈ ಅಕ್ರಮವನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗದಂತೆ ವಿದೇಶದಲ್ಲಿ ಒಂದೇ ಕಂಪೆನಿಯ ಅಡಿಯಲ್ಲಿ ಹಲವು ಕಂಪೆನಿಗಳ ಜಾಲವನ್ನು ಸ್ಥಾಪಿಸಿ ಅವುಗಳ ಮೂಲಕ ಹೂಡಿಕೆ ಮಾಡಲಾಗಿದೆ ಎಂದು ದಾಖಲೆ ಸೃಷ್ಟಿಸಲಾಗುತ್ತದೆ. ಈ ಮೂಲಕ ತೆರಿಗೆ ಮತ್ತು ಕಂದಾಯ ಅಧಿಕಾರಿಗಳ ಕಣ್ಣು ತಪ್ಪಿಸಲಾಗುತ್ತದೆ. ಅಷ್ಟೇ ಅಲ್ಲ, ವಿದೇಶದಲ್ಲಿ ಸ್ಥಾಪಿಸಿದ ನಕಲಿ ಕಂಪೆನಿಗಳ ಷೇರು ಯಾವ ಸಂಸ್ಥೆಯಲ್ಲಿ ಎಷ್ಟು ಇರುತ್ತದೆ ಎಂಬುದನ್ನೂ ಸುಲಭವಾಗಿ ಪತ್ತೆಹಚ್ಚಲಾಗದಂತೆ ಹಲವು ಪದರಗಳನ್ನು ರಚಿಸಲಾಗಿರುತ್ತದೆ. ಸಾಮಾನ್ಯವಾಗಿ ವಿದೇಶದಲ್ಲಿ ನಕಲಿ ಕಂಪೆನಿಗಳನ್ನು ಸ್ಥಾಪಿಸಿ, ನಕಲಿ ನಿರ್ದೇಶಕರನ್ನೂ ನೇಮಿಸಲಾಗುತ್ತದೆ. ಈ ನಿರ್ದೇಶಕರ ಹೆಸರಿನಲ್ಲಿ ಕಪ್ಪು ಹಣ ಹೂಡಿಕೆ ಮಾಡಲಾಗುತ್ತದೆಯಾದರೂ ಭಾರತದಲ್ಲಿರುವ ಹೂಡಿಕೆ ಪಡೆದ ಆಡಳಿತ ಮಂಡಳಿಯೇ ಸಂಪೂರ್ಣ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು
Ambedkar; ಅವಮಾನ ಖಂಡಿಸಿ ಕಾಂಗ್ರೆಸ್ ಆಂದೋಲನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.