Tirupati ಲಡ್ಡಿಗೆ ತುಪ್ಪ ಖರೀದಿ ಪ್ರಕ್ರಿಯೆ ತನಿಖೆಗೆ ಎಸ್‌ಐಟಿ: ಆಂಧ್ರ ಮುಖ್ಯಮಂತ್ರಿ
Team Udayavani, Sep 23, 2024, 6:40 AM IST
ಅಮರಾವತಿ: ತಿರುಪತಿ ಲಡ್ಡುಗೆ ಬಳಸುವ ತುಪ್ಪದ ಶುದ್ಧತೆ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ(ಎಸ್‌ಐಟಿ) ರಚನೆ ಮಾಡುವ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಭಾನುವಾರ ಘೋಷಿಸಿದ್ದಾರೆ.
ಜಗನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ತುಪ್ಪ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ಉಲ್ಲಂಘಿ ಸಲಾಗಿದೆ. ಜತೆಗೆ ಟಿಟಿಡಿ ಮಂಡಳಿಯ ನೇಮಕಾತಿಯಲ್ಲೂ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ.
ಹಿಂದೂ ನಿಯಮಗಳಲ್ಲಿ ನಂಬಿಕೆ ಇಲ್ಲದವರನ್ನು ಮಂಡಳಿಗೆ ನೇಮಕ ಮಾಡಲಾಗಿತ್ತು. ಜಗನ್ ಸರ್ಕಾರದ ಅವಧಿಯಲ್ಲಿ ಟಿಟಿಡಿಗೆ ನೇಮಕ ಮಾಡುವುದು ಒಂದು ದಂಧೆಯಾಗಿತ್ತು ಎಂದು ದೂರಿದ್ದಾರೆ.
ಐ.ಜಿ. ಮಟ್ಟದ ಅಧಿಕಾರಿ ಎಸ್‌ಐಟಿಯ ನೇತೃತ್ವ ವಹಿಸಲಿದ್ದಾರೆ ಎಂದು ನಾಯ್ಡು ಹೇಳಿದ್ದಾರೆ.
ಎಸ್‌ಐಟಿ ತನಿಖೆಗಾಗಿ ಸುಪ್ರೀಂನಲ್ಲಿ ಪಿಐಎಲ್: ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ದೇಗುಲಗಳಿಗೆ ಸರ್ಕಾರಿ ಆಡಳಿತ ಬೇಡ: ಸದ್ಗುರು
ತಿರುಪತಿ ಲಡ್ಡು ಪ್ರಸಾದದಲ್ಲಿ ಬೀಫ್ನ ಅಂಶ ಬಳಕೆ ಮಾಡಲಾಗಿದೆ ಎಂಬ ವಿಚಾರ ಅತ್ಯಂತ ಅಸಹ್ಯಕರವಾಗಿದೆ ಎಂದು ಸದ್ಗುರು ವಾಸು ದೇವ್ ಹೇಳಿದ್ದಾರೆ. ದೇಗುಲಗಳ ಆಡಳಿತ ವನ್ನು ಭಕ್ತರು ನಿರ್ವಹಿಸಬೇಕು. ಸರ್ಕಾರ ಅಲ್ಲ. ಎಲ್ಲಿ ಭಕ್ತಿ ಇಲ್ಲವೇ ಅಲ್ಲಿ ಪಾವಿತ್ರ್ಯತೆಯನ್ನು ನಿರಿಕ್ಷಿಸು ವುದೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
Adani Group: ಲಂಚ, ಸತ್ಯ ಮರೆಮಾಚಿದ ಕಾರಣಕ್ಕೆ ಗೌತಮ್ ಅದಾನಿ ವಿರುದ್ದ ಅಮೆರಿಕದಲ್ಲಿ ಕೇಸು
MUST WATCH
ಹೊಸ ಸೇರ್ಪಡೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.