ಚೆನ್ನೈ – ಮೈಸೂರು ಸೇರಿದಂತೆ 6 ಮಾರ್ಗಗಳಲ್ಲಿ ಹೈಸ್ಪೀಡ್ ರೈಲು
Team Udayavani, Jan 30, 2020, 1:33 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ಹೊಸದಿಲ್ಲಿ: ಚೆನ್ನೈ-ಬೆಂಗಳೂರು- ಮೈಸೂರು ಸಹಿತ ದೇಶದ ಆರು ರೈಲು ಮಾರ್ಗಗಳಲ್ಲಿ ಹೈಸ್ಪೀಡ್ ರೈಲು ಓಡಿಸಲು ಚಿಂತನೆ ನಡೆಸಲಾಗುತ್ತಿದೆ. ಯೋಜನೆ ಅನುಷ್ಠಾನ ಗೊಳಿಸುವ ಬಗೆಗಿನ ವಿಸ್ತೃತ ಕಾರ್ಯಸಾಧ್ಯತಾ ವರದಿ (ಡಿಪಿಆರ್) ಒಂದು ವರ್ಷದ ಅವಧಿಯಲ್ಲಿ ಸಿದ್ಧಗೊಳ್ಳಲಿದೆ ಎಂದು ರೈಲ್ವೇ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್ ತಿಳಿಸಿದ್ದಾರೆ.
ದಿಲ್ಲಿ – ನೋಯ್ಡಾ – ಆಗ್ರಾ – ಲಕ್ನೋ – ವಾರಾಣಸಿ, ದಿಲ್ಲಿ – ಜೈಪುರ-ಉದಯಪುರ – ಅಹದಾಬಾದ್, ಮುಂಬಯಿ – ನಾಸಿಕ್ – ನಾಗ್ಪುರ್, ಮುಂಬಯಿ – ಪುಣೆ – ಹೈದರಾಬಾದ್, ದಿಲ್ಲಿ – ಚಂಡೀಗಢ – ಲುಧಿಯಾನ – ಜಲಂಧರ್ – ಅಮೃತಸರ ಇತರ ಮಾರ್ಗಗಳು.
ಟ್ಯಾಗ್ ಅಳವಡಿಕೆ: ರೈಲು ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್‌ಎಫ್ಐಡಿ) ಟ್ಯಾಗ್‌ಗಳನ್ನು ಅಳವಡಿಸಲಾಗುತ್ತದೆ. 2021ರ ಒಳಗಾಗಿ 3,50, 000 ಕೋಚ್‌ಗಳಿಗೆ ಮತ್ತು ವ್ಯಾಗನ್‌ಗಳಿಗೆ ಅಳವಡಿಸಲಾಗುತ್ತದೆ ಎಂದು ಬುಧವಾರ ರೈಲ್ವೇ ಮಂಡಳಿಯ ರೋಲಿಂಗ್ ಸ್ಟಾಕ್ ವಿಭಾಗದ ಸದಸ್ಯ ರಾಜೇಶ್ ಅಗರ್ವಾಲ್ ಹೇಳಿದ್ದಾರೆ.
ಅದಕ್ಕಾಗಿ 112 ಕೋಟಿ ರೂ. ವೆಚ್ಚವಾಗಲಿದೆ. ಸದ್ಯ 22 ಸಾವಿರ ವ್ಯಾಗನ್ ಮತ್ತು 1,200 ಕೋಚ್‌ಗಳಿಗೆ ಈಗಾಗಲೇ ವ್ಯವಸ್ಥೆಯನ್ನು ಅಳವಡಿ ಸಲಾಗಿದೆ ಎಂದಿದ್ದಾರೆ. ರೈಲು ಪ್ರತಿಗಂಟೆಗೆ 182 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿದ್ದರೂ ಬಾರ್ ಕೋಡ್ ಸ್ಕ್ಯಾನ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.