ಸಿಯಾಚಿನ್‌ ಚಾರಣ ಮಾಡಬೇಕೆ? ವ್ಯವಸ್ಥೆಗಳೇನಿವೆ?


Team Udayavani, Oct 29, 2019, 3:55 PM IST

siyachin

ಕಳೆದ ವಾರ ಭಾರತದ ಗಡಿಯ ತುತ್ತತುದಿಯಲ್ಲಿರುವ ಜಮ್ಮು-ಕಾಶ್ಮೀರದ ಲಡಾಕ್‌ ಪ್ರಾಂತ್ಯದ ಸಿಯಾಚಿನ್‌ ನೀರ್ಗಲ್ಲು ಪ್ರದೇಶ ತೆರವುಗೊಂಡಿದ್ದು, ಪ್ರವಾಸಿಗರಿಗೆ ಪ್ರವೇಶ ಮುಕ್ತವಾಗಲಿದೆ ಎಂಬ ಘೋಷಣೆ ಹೊರಬಿದ್ದಿತ್ತು. ಪ್ರವಾಸ ನಿಬಂಧನೆ ಪ್ರದೇಶವಾಗಿದ್ದ ಸಿಯಾಚಿನ್‌ಗೆ ಭೇಟಿ ನೀಡಲು ಅವಕಾಶ ಕಲ್ಪಿಸಿಕೊಡಲಾಗಿದ್ದು, ಈ ಹಿಂದೆ ಅಲ್ಲಿನ ಪರಿಸ್ಥಿತಿ ಹೇಗಿತ್ತು ಹಾಗೂ ಪ್ರವಾಸೋದ್ಯಮ ಸಿಯಾಚಿನ್‌ನ ನೀರ್ಗಲ್ಲು ಪ್ರದೇಶದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

21 ಸಾವಿರ ಅಡಿ ಎತ್ತರದಲ್ಲಿದೆ

ಸಿಯಾಚಿನ್‌ ನೀರ್ಗಲ್ಲು ಪ್ರದೇಶ ಸಮುದ್ರ ಮಟ್ಟದಿಂದ 21 ಸಾವಿರ ಅಡಿ ಎತ್ತರದಲ್ಲಿದ್ದು, ಭಾರತ ಹಾಗೂ ಪಾಕಿಸ್ಥಾನ ನಡುವಣ ಗಡಿ ನಿಯಂತ್ರಣ ರೇಖೆ ಇಲ್ಲಿ ಅಂತ್ಯವಾಗುವುತ್ತದೆ. ಜತೆಗೆ ಈ ಪ್ರದೇಶ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದಿಂದ 250 ಕಿ.ಮೀ. ದೂರದಲ್ಲಿದ್ದು, ಭಾರತದ ಗಡಿಯ ತುತ್ತತುದಿಯ ಭಾಗವಾಗಿದೆ.

ಎಲ್ಲಿ ನಿಬಂಧನೆ ಇಲ್ಲ

ಈ ಹಿಂದೆ ಸಿಯಾಚಿನ್‌ ಗ್ಲಾಸಿಯಾರ್‌ನ ಪ್ರವೇಶ ದ್ವಾರವಾಗಿರುವ ನುಬ್ರಾ ಕಣಿವೆ ಪ್ರದೇಶ ಹಾಗೂ ಸಿಯಾಚಿನ್‌ ಯುದ್ಧ ಶಾಲೆ ಪ್ರವಾಸೋದ್ಯಮದಿಂದ ದೂರ ಉಳಿದುಕೊಂಡಿತ್ತು. ಆದರೆ ಇದೀಗ ಈ ಪ್ರದೇಶ ಪ್ರವಾಸಿಗರಿಗೆ ಮುಕ್ತವಾಗಿದ್ದು, ಬಹುಶಃ ಪ್ರವಾಸಿಗರನ್ನು ಸಣ್ಣ ಬ್ಯಾಚ್‌ಗಳನ್ನಾಗಿ ಮಾಡುವ ಮೂಲಕ ಅವಕಾಶ ಕಲ್ಪಿಸಬಹುದು.

ಎಲ್ಲಿಂದ ಎಲ್ಲಿಯವರೆಗೆ

ಪ್ರವಾಸಿಗರಿಗೆ ಈಗ ವಾರ್ಶಿ (ಸಿಯಾಚಿನ್‌ ಬೇಸ್‌ ಕ್ಯಾಂಪ್‌ ಅತ್ತ ಸಾಗುವ ದಾರಿ)ಯಿಂದ ಹಿಡಿದು, ಕುಮಾರ್‌ ಪೋಸ್ಟ್‌ವರೆಗೂ ಹಾಗೂ ತ್ಯಕ್ಷಿ ಗ್ರಾಮದವರೆಗೂ ಪ್ರವೇಶವನ್ನು ಕಲ್ಪಿಸಿಕೊಡಲಾಗಿದೆ. ಗಮನಾರ್ಹವಾದ ವಿಷಯವೆಂದರೆ ವಾರ್ಶಿ ಮತ್ತು ತ್ಯಕ್ಷಿ ಗ್ರಾಮ 1971 ರ ಯುದ್ಧದವರೆಗೂ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಭಾಗವಾಗಿದಲ್ಲಿತ್ತು. ಹಾಗೇ 2010ರ ವರೆಗೆ ಈ ಪ್ರದೇಶದಲ್ಲಿ ಸಾಮಾನ್ಯ ನಾಗರಿಕರು ಸೇರಿದಂತೆ ಪ್ರವಾಸಿಗರ ಮೇಲೆ ನಿಬಂಧನೆ ಏರುವುದರೊಂದಿಗೆ ನುಬ್ರಾ ಕಣಿವೆಯ ಪನಾಮಿಕ್‌ ಪ್ರದೇಶಕ್ಕೆ ಮಾತ್ರ ಪ್ರವೇಶ ಅನುಮತಿಯನ್ನು ನೀಡಿದ್ದರು.

ಈ ಹಿಂದೆಯ ಕಥೆ ಏನು

ಈ ಮೊದಲು ಅಂದರೆ 2007ರಿಂದ 2016ರ ವರೆಗೆ ಸಿಯಾಚಿನ್‌ ಚಾರಣದ ಸಂಯೋಜನೆಯನ್ನು ಆರ್ಮಿಯ ಆಡ್ವೆನcರ್‌ ಸೆಲ್‌ ನಿರ್ವಹಿಸುತ್ತಿತ್ತು. ಆ ಸಮಯದಲ್ಲಿ ಕೇವಲ ಬೇಸ್‌ ಕ್ಯಾಂಪ್‌ನಿಂದ ಕುಮಾರ್‌ ಫೋಸ್ಟ್‌ವರೆಗೆ ಪ್ರವೇಶ ಅನುಮತಿ ಇದ್ದು, ಕೆಲವೇ ಪ್ರವಾಸಿಗರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗುತ್ತಿತ್ತು.

30 ದಿನಗಳು ಬೇಕು

ಸಿಯಾಚಿನ್‌ ಪ್ರದೇಶಕ್ಕೆ ಚಾರಣ ಹೋಗಲು ಬಯಸುವವರಿಗೆ ಗಮ್ಯ ಸ್ಥಾನವನ್ನು ತಲುಪಲು ಸುಮಾರು 1 ತಿಂಗಳು ಸಮಯವಾಕಾಶ ಬೇಕಾಗುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರು ಸೇನೆ ವಿಧಿಸುವ ಷರತ್ತುಗಳ ಮೇರೆಗೆ ಚಾರಣವನ್ನು ನಡೆಸಲಾಗುತ್ತಿತ್ತು.

ಆಗಸ್ಟ್‌-ಸೆಪ್ಟೆಂಬರ್‌ ತಿಂಗಳಲ್ಲಿ ಮಾತ್ರ

ಸಿಯಾಸಿನ್‌ ಬೇಸ್‌ ಕ್ಯಾಂಪ್‌ ಸುಮಾರು 11,000 ಅಡಿ ಎತ್ತರದಲ್ಲಿದ್ದು, ಕುಮಾರ್‌ ಪೋಸ್ಟ್‌ 16,000 ಅಡಿ ಎತ್ತರದಲ್ಲಿದೆ. ಟ್ರಕಿಂಗ್‌ ನಡೆಸಲು ಆಗಸ್ಟ್‌ ಮತ್ತು ಸೆಪ್ಟೆಂಬರ್‌ ನಡುವೆ ವೇಳಾಪಟ್ಟಿಯನ್ನು ನಿಯೋಜನೆ ಮಾಡಿಕೊಂಡಿದ್ದು, ಕಟ್ಟುನಿಟ್ಟಾದ ವೈದ್ಯಕೀಯ ಫಿಟೆ°ಸ್‌ ಕ್ರಮಗಳ ಪಾಲನೆ ಅತ್ಯಗತ್ಯವಾಗಿದೆ.

ಯಾರಿಗೆ ಲಭ್ಯ

ಭಾರತೀಯ ಮಿಲಿಟರಿ ಅಕಾಡೆಮಿ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ಮಿಲಿಟರಿ ಶಾಲೆಗಳ ಕೆಡೆಟ್‌ಗಳನ್ನು ಒಳಗೊಂಡತೆ 45 ವಯೋಮಿತಿ ಒಳಗಿನ ಪ್ರವಾಸಿಗರಿಗೆ ಚಾರಣ ಹೋಗುವುದಕ್ಕೆ ಅನುಮತಿ ಇದೆ. ಬೇಸ್‌ ಕ್ಯಾಂಪ್‌ ಮತ್ತು ಕುಮಾರ್‌ ನಡುವೆ ಸುಮಾರು 60 ಕಿ.ಮೀ. ಅಂತರವಿದ್ದು, ರಿಟರ್ನ್ ಟ್ರೆಕ್‌ ಒಂಬತ್ತು ದಿನಗಳನ್ನು ತೆಗೆದುಕೊಳ್ಳುತ್ತಿತ್ತು.

ಸವಾಲುಗಳೇನು ?

ಪ್ರವಾಸೋದ್ಯಮಕ್ಕೆ ಅನುಮತಿ ಕೊಟ್ಟ ಬೆನ್ನಲ್ಲೇ ಸಿಯಾಚಿನ್‌ ಪ್ರದೇಶದಲ್ಲಿ ಪರಿಸರದ ಸಮಸ್ಯೆಗಳು ಹುಟ್ಟಿಕೊಂಡಿವೆ. ಸದ್ಯ ಸೈನಿಕರ ಜಮಾವಣೆ ಇರುವ ಹಿಮ ನದಿಯ ವಲಯದಲ್ಲಿ ಪ್ರತಿದಿನ 1 ಸಾವಿರ ಕೆ.ಜಿ. ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದರೊಂದಿಗೆ ವಿಲೇವಾರಿ ಸಂಕಷ್ಟವು ಎದುರಾಗಲಿದ್ದು, ಬೇಸ್‌ ಕ್ಯಾಂಪ್‌ ಬಳಿ ಓಡಾಡುವ ಕಾರ್‌ಗಳಿಂದ ನದಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಒಟ್ಟಾರೆ ಹೇಳುವುದಾದರೆ ಪ್ರವಾಸೋದ್ಯಮ ಸೈನ್ಯದ ಮೇಲೆ ಹೆಚ್ಚಿನ ಹೊರೆ ಏರಲಿದ್ದು, ನಾಗರಿಕ ಆಡಳಿತ ವ್ಯವಸ್ಥೆ ಇಲ್ಲದ ಕಾರಣ ತುರ್ತು ಪರಿಸ್ಥಿತಿಯಲ್ಲಿ ವೈದ್ಯಕೀಯ ಅಗತ್ಯಗಳನ್ನು ಪರಿಹರಿಸುವಲ್ಲಿ ಸೈನ್ಯ ಅಥವಾ ಐಎಎಫ್ ಜವಾಬ್ದಾರಿ ಆಗಿರುತ್ತದೆ.

ಸದ್ಯ ಯಾವ ಸೌಲಭ್ಯಗಳಿವೆ

ನುಬ್ರಾ ಕಣಿವೆಯಲ್ಲಿ ಮೂಲಭೂತ ನಾಗರಿಕ ವೈದ್ಯಕೀಯ ಸೌಲಭ್ಯಗಳಿವೆ. ಆದರೆ ಈ ಪ್ರದೇಶ ಸಿಯಾಚಿನ್‌ನ ಹಿಮನದಿಯ ತೀರದಿಂದ ಸ್ವಲ್ಪ ದೂರದಲ್ಲಿದೆ. ಸುಮಾರು 120 ಕಿ.ಮೀ ದೂರದಲ್ಲಿ ಲೆಹ್‌ ಎಂಬ ಉಪಜಿಲ್ಲೆ ಇದ್ದು, ಎಕ್ಸರೆ, ಅಲ್ಟ್ರಾಸೌಂಡ್‌ ಮತ್ತು ಪ್ರಯೋಗಾಲಯ ಸೌಲಭ್ಯ ಹಾಗೂ ದಂತ ಘಟಕದೊಂದಿಗೆ 50 ಹಾಸಿಗೆಯುಳ್ಳ ಚಿಕಿತ್ಸಾಲಯವನ್ನು ಹೊಂದಿದೆ.

ಎಷ್ಟು ಶಾಂತಿಯುತವಾಗಿದೆ

2003ರಲ್ಲಿ ಕದನ ವಿರಾಮ ಜಾರಿಗೆ ಬರುವವರೆಗೂ, ಸಿಯಾಚಿನ್‌ ಗ್ಲೆàಸಿಯರ್‌ ವಿಶ್ವದಲ್ಲಿಯೇ ಅತೀ ಹೆಚ್ಚು ಯುದ್ಧ ನಡೆಯುವ ಪ್ರದೇಶವಾಗಿತ್ತು. ಪ್ರತಿ ದಿನವೂ ಫಿರಂಗಿದಳದ ಡ್ಯುಯೆಲ್ಗಳು ನಡೆಯುತ್ತಲೇ ಇತ್ತು. ಜತೆಗೆ ಎರಡೂ ಸೈನ್ಯಗಳು ದಾಳಿಗಳು ಮತ್ತು ಪ್ರತಿದಾಳಿಗಳನ್ನು ಮಾಡುತ್ತಲೇ ಬಂದಿದ್ದವು. ಆದರೆ ಇಂದು, ಫಿರಂಗಿ ಬಂದೂಕುಗಳು ಮೌನವಾಗಿ ಬಿದ್ದಿವೆ, ಆದರೆ 23,000 ಅಡಿಗಳ ಎತ್ತರದಲ್ಲಿರುವ ಹಿಮನದಿಯ ಮೇಲೆ ಪ್ರಾಬಲ್ಯ ಹೊಂದಿರುವ ಸಾಲ್ಟೋರೊ ರಿಡ್ಜ್ನ ಎತ್ತರದ ಪ್ರದೇಶದಲ್ಲಿ ಎಚ್ಚರಿಕೆ ಗಂಟೆ ಬಾರಿಸುತ್ತಲೇ ಇರುತ್ತದೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.