ವಿಐಪಿ ಸಂಸ್ಕೃತಿ ಬಿಟ್ಟು ಬಿಡಿ; ಪ್ರತಿಯೊಬ್ಬ ವ್ಯಕ್ತಿಗೂ ಮಹತ್ವ ನೀಡಿ
Team Udayavani, May 1, 2017, 9:41 AM IST
ನವದೆಹಲಿ: ಕೆಲವು ವ್ಯಕ್ತಿಗಳ ಮನಸ್ಸಲ್ಲಿ ಮನೆ ಮಾಡಿಕೊಂಡಿರುವ ವಿಐಪಿ ಸಂಸ್ಕೃತಿಯನ್ನು ತೊಡೆದುಹಾಕಬೇಕು ಎಂಬುದೇ ಕೆಂಪುದೀಪಗಳಿಗೆ ನಿಷೇಧ ಹೇರಿರುವುದರ ಹಿಂದಿನ ಉದ್ದೇಶ. ವಿಐಪಿ ಸಂಸ್ಕೃತಿಯನ್ನು ಬಿಟ್ಟು ಹಾಕಿ, ಇಪಿಐ (ಎವ್ರಿ ಪರ್ಸನ್ ಈಸ್ ಇಂಪಾರ್ಟೆಂಟ್) ಎಂಬ ಪರಿಕಲ್ಪನೆಯನ್ನು ಸಾಕಾರ ಮಾಡಿ, ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭಾನುವಾರ ತಮ್ಮ 32ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಇತ್ತೀಚೆಗೆ ಹೊರಡಿಸಿದ “ಕೆಂಪುದೀಪ’ ನಿಷೇಧ ಆದೇಶದ ಕುರಿತು ಮಾತನಾಡಿದ್ದಾರೆ. “ಗೂಟದ ಕಾರುಗಳನ್ನು ನಿಷೇಧಿಸಿ ನಾವು ಆದೇಶ ಹೊರಡಿಸುವವರೆಗೂ ನಮಗೆ, ಕೆಂಪುದೀಪದ ಕಾರುಗಳ ಬಗ್ಗೆ ಜನರಿಗೆ ಅಸಹನೆಯಿದೆ ಎಂಬುದು ಗೊತ್ತಿರಲಿಲ್ಲ. ಕೆಂಪು ದೀಪ ಎನ್ನುವುದು ವಿಐಪಿ ಸಂಸ್ಕೃತಿಯ ಸಂಕೇತವಾಗಿದ್ದು, ಇದು ಕೆಲವರ ಮನಸ್ಥಿತಿಯ ಆಳಕ್ಕೆ ಹೊಕ್ಕಿದೆ. ಹಾಗಾಗಿ, ಕೆಂಪು ದೀಪ ತೆಗೆದರಷ್ಟೇ ಸಾಲದು, ಮನಸ್ಸಿನೊಳಗಿನ ವಿಐಪಿ ಎಂಬ ಭಾವನೆಯನ್ನೂ ತೆಗೆದುಹಾಕಬೇಕು,’ ಎಂದಿದ್ದಾರೆ ಮೋದಿ.
ವಿಐಪಿ ಬೇಡ ಇಪಿಐ ಬೇಕು:
ನಮ್ಮ ನವಭಾರತದ ಕಲ್ಪನೆಯಲ್ಲಿ ವಿಐಪಿ ಇರುವುದಿಲ್ಲ, ಬದಲಿಗೆ ಪ್ರತಿಯೊಬ್ಬ ವ್ಯಕ್ತಿಗೂ ಪ್ರಾಮುಖ್ಯತೆ (ಇಪಿಐ) ನೀಡಲಾಗುತ್ತದೆ. ದೇಶದ 123 ಕೋಟಿ ನಾಗರಿಕರ ಮಹತ್ವವನ್ನು ನಾವು ಅರಿತರೆ, ನಮ್ಮ ಕನಸುಗಳನ್ನು ಈಡೇರಿಸಲು ನಮಗಿರುವ ಸಾಮರ್ಥ್ಯ ಎಷ್ಟಿರಬಹುದೆಂದು ಊಹಿಸಿ. ನಾವೆಲ್ಲರೂ ಒಂದಾಗಿ ಆ ಕೆಲಸ ಮಾಡಬೇಕು ಎಂದು ಮೋದಿ ಕರೆ ನೀಡಿದ್ದಾರೆ.
ನಗದು ಯೋಜನೆಯ ಲಾಭ ಪಡೆಯಿರಿ:
ಇದೇ ವೇಳೆ, ಡಿಜಿಟಲ್ ವಹಿವಾಟು ಪರ ಮತ್ತೂಮ್ಮೆ ಧ್ವನಿಯೆತ್ತಿದ ಪ್ರಧಾನಿ ಮೋದಿ, ಭೀಮ್ ಆ್ಯಪ್ ಬಳಸಿಕೊಂಡು, ಅದನ್ನು ಇನ್ನೊಬ್ಬರಿಗೆ ಸೂಚಿಸುವುದರಿಂದ ಬರುವ ನಗದು ಬಹುಮಾನವನ್ನು ನಿಮ್ಮದಾಗಿಸಿಕೊಳ್ಳಿ ಎಂದು ಯುವಕರಿಗೆ ಕರೆ ನೀಡಿದ್ದಾರೆ. ಈ ಯೋಜನೆಯು ಅಕ್ಟೋಬರ್ 14ರವರೆಗೆ ಚಾಲ್ತಿಯಲ್ಲಿರಲಿದ್ದು, ನೀವೆಲ್ಲರೂ ಇದರ ಹಣಕಾಸಿನ ಲಾಭವನ್ನು ಪಡೆಯಿರಿ ಎಂದು ಹೇಳಿದ್ದಾರೆ. ಭೀಮ್ ಆ್ಯಪ್ ಹೊಂದಿರುವವರು ಮತ್ತೂಬ್ಬರಿಗೆ ಇದೇ ಆ್ಯಪ್ ಬಳಸುವಂತೆ ಸೂಚಿಸಿದರೆ ಮತ್ತು ಅವರು 3 ಬಾರಿ ಅದರಲ್ಲಿ ವಹಿವಾಟು ನಡೆಸಿದರೆ, ಸೂಚಿಸಿದಾತನಿಗೆ 10 ರೂ. ನೀಡಲಾಗುತ್ತದೆ. ಅಂತೆಯೇ, 10 ಮಂದಿಯನ್ನು ಸೂಚಿಸಿದರೆ, 100 ರೂ. ಪಡೆಯಬಹುದಾಗಿದೆ. ಇದರಿಂದ ಡಿಜಿಟಲ್ ಇಂಡಿಯಾಗೆ ನೀವು ಕೊಡುಗೆ ಕೊಟ್ಟಂತೆಯೂ ಆಗುತ್ತದೆ ಎಂದಿದ್ದಾರೆ ಮೋದಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Farmers Protest: ರೈತ ದಲ್ಲೇವಾಲ್ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್ ಕಿಶೋರ್ ನಿರಶನ
RBI: 2000ರೂ. ಮುಖಬೆಲೆಯ 6,691 ಕೋಟಿಯ ನೋಟು ವಾಪಸಾಗಿಲ್ಲ
Employment Rate: ಯುಪಿಎ 2.9 ಕೋಟಿ,ಮೋದಿ 17.9 ಕೋಟಿ ಉದ್ಯೋಗ ಸೃಷ್ಟಿ: ಸಚಿವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.