ರಾಹುಲ್ ರಾಮನಾಮ ಜಪ ಬಿಜೆಪಿಯ ವಿಜಯ: ಸ್ಮ್ರತಿ ಇರಾನಿ
Team Udayavani, Oct 6, 2018, 7:22 PM IST
ಹೊಸದಿಲ್ಲಿ : ‘ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಮ ನಾಮ ಜಪಿಸುವುದು ಮತ್ತು ಆರತಿ ಎತ್ತುವುದು ಭಾರತೀಯ ಜನತಾ ಪಕ್ಷದ ವಿಜಯವಾಗಿದೆ’ ಎಂದು ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಸ್ಮತಿ ಇರಾನಿ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯೆಡೆಗೆ ಮುಖಮಾಡಿರುವ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನರ್ಮದಾ ಪೂಜೆಯ ವೇಳೆ ಆರತಿ ಎತ್ತಿರುವುದನ್ನು ವ್ಯಂಗ್ಯದಿಂದ ಟೀಕಿಸಿರುವ ಇರಾನಿ, “ರಾಹುಲ್ ಗಾಂಧಿ ಅವರು ರಾಜಕೀಯ ಮೋಕ್ಷಕ್ಕಾಗಿ ದೇವಸ್ಥಾನಗಳಿಗೆ ಭೇಟಿ ನೀಡಬೇಕಾಗಿದೆ’ ಎಂದು ಹೇಳಿದರು.
ಹಿಂದೂ ಭಯೋತ್ಪಾದನೆ ವಿಷಯವನ್ನು ಕೆದಕಿ ಮಾತನಾಡಿದ ಇರಾನಿ, “ರಾಹುಲ್ ಗಾಂಧಿಗೆ ಹಿಂದೂ ಭಯೋತ್ಪಾದನೆಯ ಭಯ ಇದೆ; ಏಕೆಂದರೆ ಅವರು ಕೋರ್ಟಿಗೆ ರಾಮ ಎಂದೂ ಇರಲಿಲ್ಲ ಎಂದು ಅಫಿದಾವಿತ್ ಬರೆದುಕೊಟ್ಟಿರುತ್ತಾರೆ. ಇವತ್ತು ಅದೇ ರಾಹುಲ್ ಗಾಂಧಿ ರಾಮ ನಾಮ ಜಪಿಸುತ್ತಿದ್ದಾರೆ ಮತ್ತು ಆರತಿ ಎತ್ತುತ್ತಿದ್ದಾರೆ. ಇದು ನಿಜಕ್ಕೂ ಬಿಜೆಪಿಯ ವಿಜಯವೇ ಆಗಿದೆ’ ಎಂದು ಹೇಳಿದರು.
ರಾಹುಲ್ ಗಾಂಧಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವುದು ಜನರಿಗೆ ಕಣ್ಣು ಹೊಡೆಯುವ ಮತ್ತು ಬಹುಸಂಖ್ಯಾಕ ಸಮುದಾಯದವರ ವೋಟ್ ಬ್ಯಾಂಕ್ ಗುರಿ ಇರಿಸುವ ಹುನ್ನಾರವಾಗಿದೆ; ಅರ್ಧ ಬೆಂದ ಸತ್ಯಗಳು ಮತ್ತು ಸುಳ್ಳುಗಳಿಗಾಗಿ ರಾಹುಲ್ ಗಾಂಧಿ ಅವರಿಂದು ರಾಜಕೀಯ ಮೋಕ್ಷ ಪಡೆಯಲು ದೇವಸ್ಥಾನಗಳಿಗೆ ಭೇಟಿ ನೀಡಬೇಕಾಗಿದೆ ಎಂದು ಇರಾನಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರ ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ
ನಮ್ಮ ಪಕ್ಷಕ್ಕೆ ಮಾನ್ಯತೆ ಸಿಗುತ್ತಿಲ್ಲ, ಸಚಿವ ಸ್ಥಾನ ತೊರೆವೆ: ಮಾಂಜಿ ಎಚ್ಚರಿಕೆ
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್