ದೀಪಿಕಾ ‘ಪಠಾಣ್’ ವಿವಾದ ನಡುವೆ ಹರಿದಾಡುತ್ತಿದೆ ಸ್ಮೃತಿ ಇರಾನಿ ‘ಸ್ವಿಮ್ ಸೂಟ್’ ವಿಡಿಯೋ
Team Udayavani, Dec 16, 2022, 5:29 PM IST
ಹೊಸದಿಲ್ಲಿ: ಪಠಾಣ್ ಚಿತ್ರದ ಹಾಡಿನ ವಿವಾದದ ಬಳಿಕ ಇದೀಗ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಹಳೇಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸ್ಮೃತಿ ಇರಾನಿ ಅವರು 1998ರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಈಜುಡುಗೆಯಲ್ಲಿ ಭಾಗವಹಿಸಿದ್ದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಪಠಾಣ್ ಚಿತ್ರದ ಒಂದು ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರ ಕೇಸರಿ ಬಿಕಿನಿ ತೊಟ್ಟಿದ್ದು ಇದೀಗ ವಿವಾದದ ರೂಪ ಪಡೆದಿದೆ. ತೃಣಮೂಲ ಕಾಂಗ್ರೆಸ್ ನಾಯಕ ರಿಜು ದತ್ತಾ ಅವರು ಬಿಜೆಪಿಯ ಅಮಿತ್ ಮಾಳವಿಯಾ ಅವರ ಟ್ವೀಟ್ ಗೆ ಇರಾನಿ ಅವರ ಈಜುಡುಗೆ ಸುತ್ತಿನ ಸ್ಪರ್ಧೆಯ ವೀಡಿಯೊ ಹಾಕಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಮೋದಿ ವಿರುದ್ಧ ಪಾಕ್ ಸಚಿವ ಭುಟ್ಟೋ ಜರ್ದಾರಿ ಆಕ್ಷೇಪಾರ್ಹ ಹೇಳಿಕೆ
ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಸಂಸದ ಲಾಕತ್ ಚಟರ್ಜಿ, ‘ರಿಜು ದತ್ತಾ ಅವರು ಸ್ತ್ರೀ ದ್ವೇಷಿ’ ಎಂದು ಜರೆದಿದ್ದಾರೆ.
Shame on Mamata Banerjee for appointing such misogynist men as TMC’s national spokesperson. He has no respect for women and the choices they make in life. They resent successful women and their rise. Men like him are responsible for rising crime against women. https://t.co/56WntLxKgb
— Locket Chatterjee (@me_locket) December 16, 2022
ಇದಕ್ಕೆ ತಿರುಗೇಟು ನೀಡಿರುವ ತೃಣಮೂಲ ಕಾಂಗ್ರೆಸ್ ನಾಯಕ ದತ್ತಾ, “ಮೊದಲು, ಕೇಸರಿ ನಿಮ್ಮ ಪಕ್ಷದ ಪಿತ್ರಾರ್ಜಿತ ಆಸ್ತಿ ಎಂಬಂತೆ ವರ್ತಿಸುವುದನ್ನು ನಿಲ್ಲಿಸಿ. ಎರಡನೆಯದಾಗಿ, ದೀಪಿಕಾ ಪಡುಕೋಣೆಯಂತಹ ಮಹಿಳೆಯರು ಕೇಸರಿ ಧರಿಸಿದಾಗ ನಿಮಗೆ ನಡುಕ ಉಂಟಾಗುತ್ತದೆ ಆದರೆ ಸ್ಮೃತಿ ಇರಾನಿ ಮಾಡಿದಾಗ, ನಿಮಗೆ ಭಾಗಶಃ ಕುರುಡುತನವಿತ್ತು. ಕಪಟಿಗಳು! ಇದಲ್ಲದೆ, ನಾನು ಮಹಿಳಾ ಸಬಲೀಕರಣದ ನಾಯಕತ್ವವಿರುವ ಪಕ್ಷಕ್ಕೆ ಸೇರಿದ್ದೇನೆ. ಆದರೆ ನೀವು ಅತ್ಯಾಚಾರಿಗಳನ್ನು “ಸಂಸ್ಕೃತಿ ಬ್ರಾಹ್ಮಣರು” ಎಂದು ಕರೆಯುವ ಪಕ್ಷದವರು” ಎಂದಿದ್ದಾರೆ.
Shame on Mamata Banerjee for appointing such misogynist men as TMC’s national spokesperson. He has no respect for women and the choices they make in life. They resent successful women and their rise. Men like him are responsible for rising crime against women. https://t.co/56WntLxKgb
— Locket Chatterjee (@me_locket) December 16, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್ ಶರ್ಮಾ; ವಿಡಿಯೋ ನೋಡಿ
Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.