ಸಾಮಾಜಿಕ ಭದ್ರತೆ ಯೋಜನೆ ಶೀಘ್ರ
Team Udayavani, Oct 18, 2017, 6:30 AM IST
ಹೊಸದಿಲ್ಲಿ: ಸಮಾಜದ ಎಲ್ಲ ಸ್ತರದ ಜನರನ್ನೂ ಒಳಗೊಳ್ಳುವ ಬೃಹತ್ ಸಾಮಾಜಿಕ ಭದ್ರತಾ ಯೋಜನೆಯನ್ನು ಕೇಂದ್ರ ಸರಕಾರ ರೂಪಿಸಿದ್ದು, ಶೀಘ್ರದಲ್ಲೇ ಇದು ಜಾರಿಗೆ ಬರಲಿದೆ. ಅಂದಾಜು 1.2 ಲಕ್ಷ ಕೋಟಿ ರೂ. ಮೌಲ್ಯದ ಈ ಯೋಜನೆ ಬಡವರು, ಶ್ರೀಮಂತರು ಹಾಗೂ ಮಧ್ಯಮ ವರ್ಗದವರೆಲ್ಲರನ್ನೂ ಒಳಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಸರಕಾರದ “ಸಬ್‌ಕಾ ಸಾಥ್, ಸಬ್ ಕಾ ವಿಕಾಸ್’ ಉದ್ಘೋಷಕ್ಕೆ ಪೂರಕವಾಗಿರಲಿದೆ. ಅವರವರ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಈ ಯೋಜನೆಯಡಿ ಜನರು ಸೌಲಭ್ಯ ಪಡೆಯಬಹುದಾಗಿದೆ.
ಕೇಂದ್ರ ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆಯಡಿಯನ್ವಯ, ದೇಶದಲ್ಲಿ ಶೇ.20 ರಷ್ಟಿರುವ ಬಡವರಿಗೆ ಸರಕಾರವೇ ಆರ್ಥಿಕ ನೆರವು ನೀಡಲಿದೆ. ಇನ್ನೊಂದೆಡೆ ಉತ್ತಮ ಆದಾಯ ಹೊಂದಿರುವವರು ತಾವಾಗಿಯೇ ಈ ಯೋಜನೆಗೆ ಚಂದಾದಾರರಾಗಬಹುದಾಗಿದೆ. ಅಲ್ಲದೆ ಕಡಿಮೆ ಆದಾಯ ಹೊಂದಿರುವ ಅಸಂಘಟಿತ ವಲಯದ ಕಾರ್ಮಿಕರು ಕಡಿಮೆ ಪ್ರಮಾಣದ ಮೊತ್ತವನ್ನು ಈ ಯೋಜನೆಗೆ ಮೀಸಲಿಟ್ಟು, ಹೆಚ್ಚು ಅನುಕೂಲ ಪಡೆಯಬಹುದು. ಈ ಯೋಜನೆ ಅಡಿಯಲ್ಲಿ ಪಿಂಚಣಿ, ವಿಮೆ ಸೌಲಭ್ಯದ ಜತೆಗೆ, ಮೆಟರ್ನಿಟಿ ಕವರೇಜ್ ಕಡ್ಡಾಯವಾಗಿರಲಿದೆ. ಇದರ ಜತೆಗೆ ಐಚ್ಛಿಕ ವೈದ್ಯಕೀಯ, ಅನಾರೋಗ್ಯ ಮತ್ತು ನಿರುದ್ಯೋಗ ಕವರೇಜ್ ಅನ್ನೂ ಪಡೆಯಬಹುದಾಗಿದೆ.
ಲೋಕಸಭೆ ಚುನಾವಣೆಗೆ ಯೋಜನೆ
ಮುಂದಿನ ಲೋಕಸಭೆ ಚುನಾವಣೆಯನ್ನು ದೃಷ್ಟಿಯ ಲ್ಲಿರಿಸಿಕೊಂಡು ಇದನ್ನು ರೂಪಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಕೆಲವೇ ತಿಂಗಳುಗಳಲ್ಲಿ ಘೋಷಿಸಿ, ಚುನಾವಣೆ ವೇಳೆ ಜನರಿಗೆ ತಲುಪುವಂತೆ ಮಾಡುವುದು ಸರಕಾರದ ಉದ್ದೇಶವಾಗಿದೆ. ಆದರೆ ಇದಕ್ಕೆ ಹಣಕಾಸು ಮೂಲದ ಸಾಧ್ಯಾಸಾಧ್ಯತೆಗಳ ಪರಿಶೀಲನೆ ನಡೆಯುತ್ತಿದೆ. ಹಣಕಾಸಿನ ಮೂಲ ನಿಗದಿಪಡಿಸುತ್ತಿದ್ದಂತೆಯೇ ಯೋಜನೆ ಘೋಷಣೆ ಮಾಡುವ ಸಾಧ್ಯತೆಯಿದೆ. ಯೋಜನೆಯ ಚಂದಾದಾರರಿಂದ ಸಂಗ್ರಹಿಸುವ ಹಣವು ಒದಗಿಸಲಾಗುವ ಲಾಭಗಳಿಗೂ ಸಾಲುತ್ತದೆಯೇ ಎಂಬ ಬಗ್ಗೆ ಚಿಂತನೆ ನಡೆಯುತ್ತಿದೆ.
45 ಕೋಟಿ ಉದ್ಯೋಗಸ್ಥರಿಗೆ ಲಾಭ
ಸದ್ಯ ದೇಶದಲ್ಲಿ 45 ಕೋಟಿ ಉದ್ಯೋಗಸ್ಥರಿದ್ದಾರೆ. ಈ ಪೈಕಿ ಕೇವಲ ಶೇ. 10ರಷ್ಟು ಉದ್ಯೋಗಿಗಳು ಸಂಘಟಿತ ವಲಯದವರಾಗಿದ್ದು, ಪಿಎಫ್, ಇಎಸ್‌ಐ, ವಿಮೆ ಸಹಿತ ವಿವಿಧ ರೀತಿಯ ಸಾಮಾಜಿಕ ಭದ್ರತೆ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಆದರೆ ಉಳಿದವರಿಗೆ ಕನಿಷ್ಠ ವೇತನವೂ ಸಿಗುತ್ತಿಲ್ಲ. ಜತೆಗೆ ಸಾಮಾಜಿಕ ಭದ್ರತೆ ಕವರೇಜ್ ಕೂಡ ಇಲ್ಲ. ಹೀಗಾಗಿ ಈ ವರ್ಗದವರಿಗೆ ಸಾಮಾಜಿಕ ಭದ್ರತೆ ಯೋಜನೆಯನ್ನು ಜಾರಿಗೊಳಿಸಲು ಸುಮಾರು 1.2 ಲಕ್ಷ ಕೋಟಿ ರೂ.ಬೇಕಾಗುತ್ತದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Enforcement Directorate: ಕ್ರಿಮಿನಲ್ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.