ಆತ್ಮಹತ್ಯೆಗೆ ಸಮಾಜ ಶರಣಾಗದು: ಜೇಟ್ಲಿ
Team Udayavani, Jan 22, 2019, 2:15 AM IST
ಹೊಸದಿಲ್ಲಿ:ವಿಪಕ್ಷಗಳ ಮಹಾಮೈತ್ರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದ ಬೆನ್ನಲ್ಲೇ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಅವರೂ ಹರಿಹಾಯ್ದಿದ್ದಾರೆ.
ಮಹಾಘಟಬಂಧನ್‌ಗೆ ಮತ ಹಾಕುವ ಮೂಲಕ ಮಹತ್ವಾಕಾಂಕ್ಷಿ ಸಮಾಜವು ‘ಸಾಮೂಹಿಕ ಆತ್ಮಹತ್ಯೆ’ಗೆ ಶರಣಾಗುವುದಿಲ್ಲ ಎಂದು ಅಮೆರಿಕದಲ್ಲಿ ಆರೋಗ್ಯ ತಪಾಸಣೆಗೆಂದು ತೆರಳಿರುವ ಸಚಿವ ಜೇಟ್ಲಿ ಅವರು ಫೇಸ್‌ಬುಕ್‌ನಲ್ಲಿ ‘ಅಜೆಂಡಾ ಫಾರ್ 2019 ಮೋದಿ ವರ್ಸಸ್ ಚಾವೋಸ್’ ಎಂಬ ಶೀರ್ಷಿಕೆಯಡಿ ಪ್ರಕಟಿಸಿದ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ. 1971ರ ಪರಿಸ್ಥಿತಿಗೂ, ಈಗಿನ ಸ್ಥಿತಿಗೂ ವ್ಯತ್ಯಾಸವಿದೆ. ಈ ಬಾರಿಯದ್ದು ಮೋದಿ ವರ್ಸಸ್ ದೀರ್ಘಕಾಲ ಉಳಿಯದಂಥ ಮೈತ್ರಿಯ ನಡುವಿನ ಸಮರ. ಇದನ್ನು ಮೋದಿ ವರ್ಸಸ್ ಅವ್ಯವಸ್ಥೆ ಎಂದೂ ಬಣ್ಣಿಸಬಹುದು. ದೇಶದ ಜನರಿಗೆ ಪ್ರಧಾನಿ ಮೋದಿ ಅವರ ಆಡಳಿತದ ಬಗ್ಗೆ ತೃಪ್ತಿಯಿದೆ. ಅವರು ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ಇದರಿಂದ ಭೀತಿಗೊಂಡ ಪ್ರತಿಪಕ್ಷಗಳು ಈಗ ಒಂದಾಗಿ ಮೋದಿ ಅವರ ವಿರುದ್ಧ ಸೆಣಸಲು ಹೊರಟಿವೆ ಎಂದೂ ಜೇಟ್ಲಿ ಹೇಳಿದ್ದಾರೆ.
ಸರಕಾರಕ್ಕೆ ಯಾವುದೇ ಸವಾಲಿಲ್ಲ: ಈ ಲೋಕಸಭೆ ಚುನಾವಣೆ ವೇಳೆ ಸರಕಾರಕ್ಕೆ ಯಾವ ಸವಾಲೂ ಎದುರಾಗಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ನಾವು ಬಲಿಷ್ಠ ಮತ್ತು ಜನಪ್ರಿಯ ನಾಯಕತ್ವವನ್ನು ಹೊಂದಿದ್ದೇವೆ. ಅಲ್ಲದೆ, ಜನಸಾಮಾನ್ಯನಿಗೆ ನಮ್ಮಲ್ಲಿ ವಿಶ್ವಾಸವಿದೆ. ಇದನ್ನು ನೋಡಿ ವಿಪಕ್ಷಗಳೇ ಹೆದರಿವೆ ಎಂದು ಸಿಂಗ್ ಹೇಳಿದ್ದಾರೆ. ಇದೇ ವೇಳೆ, ದೇಶವು ಹೊಸ ಪ್ರಧಾನಿಯನ್ನು ನೋಡಲ ಬಯಸಿದೆ. ಬಿಜೆಪಿಯಲ್ಲಿ ಬೇರೆ ಪ್ರಧಾನಿ ಅಭ್ಯರ್ಥಿಯಿದ್ದರೆ, ಹೆಸರು ಘೋಷಿಸಲಿ ಎಂದು ಎಸ್‌ಪಿ ನಾಯಕ ಅಖೀಲೇಶ್ ಯಾದವ್ ಸವಾಲು ಹಾಕಿದ್ದಾರೆ. ಇದೇ ವೇಳೆ, ಮಿತ್ರಪಕ್ಷ ಶಿವಸೇನೆ ಕೂಡ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ದು, ‘ವಿಪಕ್ಷಗಳು ಒಂದಾಗುತ್ತಿದ್ದಂತೆ ಪ್ರಧಾನಿ ಮೋದಿಯವರಿಗೆ ನಡುಕ ಶುರುವಾಗಿ ದ್ದೇಕೆ? ಮೋದಿಯವರು ತಮ್ಮ ಸರಕಾರ ಅಜರಾಮರವಾಗಿರುತ್ತದೆ ಎಂದು ಭ್ರಮಿಸುವುದನ್ನು ನಿಲ್ಲಿಸಲಿ’ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.