ನಾಳೆ ಕಂಕಣ ಸೂರ್ಯಗ್ರಹಣ ; ಹೇಗೆ, ಏನು, ಎತ್ತ?
Team Udayavani, Jun 20, 2020, 6:12 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಈಗಾಗಲೇ ಎರಡು ಚಂದ್ರಗ್ರಹಣಗಳನ್ನು ಕಂಡಿರುವ ನಾವು ಭಾನುವಾರ ಪ್ರಸಕ್ತ ವರ್ಷದ ಮೊದಲ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದ್ದೇವೆ. ಸುಮಾರು 6 ಗಂಟೆಗಳ ಕಾಲ ಕಂಕಣ ಸೂರ್ಯಗ್ರಹಣವನ್ನು ಕಣ್ತುಂಬಿಕೊಳ್ಳುವ ಅವಕಾಶ ಭಾರತ ಸೇರಿದಂತೆ ಜಗತ್ತಿನ ಹಲವು ಪ್ರದೇಶಗಳ ಜನರಿಗೆ ಸಿಕ್ಕಿದೆ. ಈ ಗ್ರಹಣದ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
ಗ್ರಹಣ ಯಾವಾಗ? ಜೂನ್ 21ರ ಭಾನುವಾರ
ಸಮಯ: ಬೆಳಗ್ಗೆ 9.15ಕ್ಕೆ ಆರಂಭ
12.10ರ ವೇಳೆಗೆ ಪೂರ್ಣ
ಮಧ್ಯಾಹ್ನ 3.04ಕ್ಕೆ ಅಂತ್ಯ
ಒಟ್ಟಾರೆ ಗ್ರಹಣದ ಅವಧಿ: 6 ಗಂಟೆಗಳು
ಎಲ್ಲೆಲ್ಲಿ ಗೋಚರ?
ಭಾರತ, ಆಫ್ರಿಕನ್ ರಿಪಬ್ಲಿಕ್, ಕಾಂಗೋ, ಇಥಿಯೋಪಿಯಾ, ಪಾಕಿಸ್ತಾನ ಮತ್ತು ಚೀನ
ಭಾರತದಲ್ಲಿ…
ರಾಜಸ್ಥಾನ, ಹರ್ಯಾಣ ಮತ್ತು ಉತ್ತರಾಖಂಡದಲ್ಲಿ ಖಂಡಗ್ರಾಸ ಗ್ರಹಣ ಹಾಗೂ ಉಳಿದೆಡೆ ಭಾಗಶಃ ಗ್ರಹಣ ಗೋಚರ
ಇದನ್ನೂ ಓದಿ: ಜೂನ್ 21ರಂದು ಕಂಕಣ ಸೂರ್ಯಗ್ರಹಣ; 4ರಾಶಿಗೆ ಶುಭಫಲ, 8 ರಾಶಿಯವರಿಗೆ ಅಶುಭ!
ಮುನ್ನೆಚ್ಚರಿಕೆ ಕ್ರಮಗಳು
ದೇಶದ ಕೆಲವೆಡೆ ಖಂಡಗ್ರಾಸ, ಮತ್ತೆ ಕೆಲವೆಡೆ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದೆ. ಇದನ್ನು ಬರಿಗಣ್ಣಿನಿಂದ ನೋಡಲೇಬಾರದು. ಸುರಕ್ಷಾ ಕನ್ನಡಕ ಧರಿಸಿ ಅಥವಾ ಪರೋಕ್ಷ ವೀಕ್ಷಣಾ ವಿಧಾನಗಳನ್ನು ಅನುಸರಿಸಿಯೇ ಈ ಗ್ರಹಣವನ್ನು ಕಣ್ತುಂಬಿಕೊಳ್ಳಬಹುದು.
ಮುಂದಿನ ಸೂರ್ಯಗ್ರಹಣ ಯಾವಾಗ?
ಮುಂದಿನ ಸೂರ್ಯಗ್ರಹಣವು ಡಿಸೆಂಬರ್ 14 – 15ರಂದು ಸಂಭವಿಸಲಿದೆ. ಅದು ಸಂಪೂರ್ಣ ಸೂರ್ಯಗ್ರಹಣವಾಗಿರಲಿದ್ದು, ಚಂದ್ರನು ಸಂಪೂರ್ಣವಾಗಿ ಸೂರ್ಯನನ್ನು ಆವರಿಸಿಕೊಳ್ಳುತ್ತಾನೆ. ಈ ಖಗೋಳ ವಿದ್ಯಮಾನವು ಚಿಲಿ ಮತ್ತು ಅರ್ಜೆಂಟೀನಾದ ಕೆಲವು ಭಾಗಗಳಲ್ಲಿ ಗೋಚರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.