30 ವರ್ಷದ ಬಳಿಕ ಮನೆ ಸೇರಿಸಿದ ಯೋಧರು!


Team Udayavani, Mar 22, 2021, 7:50 AM IST

30 ವರ್ಷದ ಬಳಿಕ ಮನೆ  ಸೇರಿಸಿದ ಯೋಧರು!

ಹೊಸದಿಲ್ಲಿ: ಭಾರತೀಯ ಯೋಧರು ದೇಶ ರಕ್ಷಣೆಯ ಜತೆಜತೆಗೇ ತಮ್ಮ ಮಾನವೀಯ ವರ್ತನೆಯ ಕಾರಣಕ್ಕೆ ವಿಶ್ವಾದ್ಯಂತ ಗೌರವ ಪಡೆದಿದ್ದಾರೆ. ಅಂತಹದ್ದೊಂದು ಅತ್ಯಪೂರ್ವ ಮಾನವೀಯ ನಡತೆಯ ಕಾರಣಕ್ಕೆ ಇಂಡೋ- ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌ (ಐಟಿಬಿಪಿ) ಪಡೆಯ ಮೂವರು ಯೋಧರಿಗೆ ಸ್ಮರಣಿಕೆ, ಪದಕಗಳನ್ನು ನೀಡಿ ಗೌರವಿಸಲಾಗಿದೆ. ವಿಶೇಷವೆಂದರೆ ಇದರಲ್ಲಿ ಇಬ್ಬರು ಕನ್ನಡಿಗರು. ಈ ಮೂವರು ಸೇರಿ; 30 ವರ್ಷಗಳ ಹಿಂದೆ ತನ್ನ ಕುಟುಂಬದಿಂದ ಬೇರ್ಪಟ್ಟು ಅಲೆಯುತ್ತಿದ್ದ ಕರ್ನಾಟಕದ ಕೆಂಚಪ್ಪ ಗೋವಿಂದಪ್ಪ ಎನ್ನುವವರನ್ನು ಮರಳಿ ಮನೆಗೆ ಮುಟ್ಟಿಸಿದ್ದಾರೆ. ಅಂದಹಾಗೆ ಗೋವಿಂದಪ್ಪನವರ ವಯಸ್ಸು 70!

ಉತ್ತರಾಖಂಡದ ಲೋಹಘಾಟ್‌ನಲ್ಲಿ ಭಾರತ-ಚೀನ ಗಡಿಕಾಯುವ ಐಟಿಬಿಪಿಯಲ್ಲಿ ಈ ಯೋಧರು ಕಾರ್ಯನಿರ್ವಹಿಸುತ್ತಿದ್ದಾರೆ. 36ನೇ ಬೆಟಾಲಿಯನ್‌ನಲ್ಲಿದ್ದುಕೊಂಡು ಅತ್ಯಂತ ಹೃದಯ ಸ್ಪರ್ಶಿ ಸೇವೆ ಮಾಡಿದ್ದನ್ನು ಗೌರವಿಸಿ ಐಟಿಬಿಪಿಯ ಮಹಾನಿರ್ದೇಶಕರ ಸ್ಮರಣಿಕೆ ಹಾಗೂ ಬೆಳ್ಳಿ ತಟ್ಟೆಯನ್ನು ನೀಡಲಾಗಿದೆ. ಅದನ್ನು ಅತ್ಯಪೂರ್ವ ಸೇವೆ ಸಲ್ಲಿಸಿದವರಿಗೆ ಮಾತ್ರ ನೀಡಲಾಗುತ್ತದೆ.

ಆಗಿದ್ದೇನು? :

ಉತ್ತರಾಖಂಡದ ಲೋಹಘಾಟ್‌ ಸನಿಹದ ಚಲ್ತಿ ಹಳ್ಳಿಯಲ್ಲಿ ಅತ್ಯಂತ ದುರವಸ್ಥೆಯಲ್ಲಿದ್ದ ಕೆಂಚಪ್ಪ ಗೋವಿಂದಪ್ಪ ಅವ ರ ನ್ನು ಯೋಧ ರಿಯಾಜ್‌ ಸುಂಕದ್‌ ಈ ವರ್ಷಾರಂಭದಲ್ಲಿ ನೋಡಿದ್ದಾರೆ. ಸಣ್ಣ ಹೊಟೇಲ್‌ವೊಂದರಲ್ಲಿ ಗೋವಿಂದಪ್ಪ ನಿಂತುಕೊಂಡಿದ್ದರು. ಆ ದುಸ್ಥಿತಿಯನ್ನು ನೋಡಿ ಕರಗಿದ ರಿಯಾಜ್‌, ಕರ್ನಾಟಕದಿಂದಲೇ ಬಂದಿರುವ ತನ್ನಿಬ್ಬರು ಹಿರಿಯ ಯೋಧರಿಗೆ ವಿಷಯ ಮುಟ್ಟಿಸಿದ್ದಾರೆ. ಆ ಕೂಡಲೇ ಕರ್ನಾಟಕದ ಪ್ರೇಮಾನಂದ ಪೈ, ಶರಣ ಬಸವ ರಾಗಾಪುರ ಹೊಟೇಲ್‌ಗೆ ತೆರಳಿದ್ದಾರೆ.

ಆಗ ಟ್ರಕ್‌ ಒಂದರಲ್ಲಿ ಚಲ್ತಿ ಹಳ್ಳಿಗೆ ಈ ವ್ಯಕ್ತಿ ಬಂದಿರುವುದು ತಿಳಿದಿದೆ. ಆದರೆ ಗೋವಿಂದಪ್ಪನವರಿಗೆ ಕನ್ನಡ ಬಿಟ್ಟು ಬೇರೇನೂ ಬರದಿರುವುದರಿಂದ ಯಾರಿಗೂ ಏನೂ ಅರ್ಥವಾಗಿಲ್ಲ. ಪರಿಣಾಮ 1991ರಿಂದ ಇಲ್ಲಿಯವರೆಗೆ ಅವರು ಹೊಟೇಲ್‌ ಸನಿಹದ ಬಸ್‌ನಿಲ್ದಾಣವೊಂದರಲ್ಲಿ ಮಲಗಿ ಕಾಲ ಕಳೆಯುತ್ತಿದ್ದರು. ಹೊಟೇಲ್‌ ಕೆಲಸ ಮಾಡುತ್ತಿದ್ದರಿಂದ ಚಿಲ್ಲರೆ ಹಣವನ್ನು ನೀಡಲಾಗುತ್ತಿತ್ತು. ಆ ವೇಳೆ ತನ್ನವರನ್ನು ಸೇರಲಾಗದ ದುಃಖದಿಂದ ಗೋವಿಂದಪ್ಪ ಆಘಾತಕ್ಕೊಳಗಾಗಿದ್ದು ಕಂಡುಬಂತು. ಆ ವ್ಯಕ್ತಿಯ ಕುರಿತು ಒಂದು ವೀಡಿಯೋ ಮಾಡಿ ಫೇಸ್‌ಬುಕ್‌ನಲ್ಲಿ ಹಾಕಲಾಯಿತು. ಕರ್ನಾಟಕದ  ವಕೀಲ ರೊಬ್ಬರು, ಅವರು ತನಗೆ ಗೊತ್ತು. ಧಾರವಾಡದ ಕಲಘಟಗಿ ಹಳ್ಳಿಯವರು ಎಂದು ತಿಳಿಸಿದರು.

ಕೂಡಲೇ ಗೋವಿಂದಪ್ಪನವರನ್ನು ದಿಲ್ಲಿಗೆ ಒಯ್ದು ಅಲ್ಲಿನ ಹೊಟೇಲೊಂದರಲ್ಲಿ ಉಳಿಸಿ, ûೌರ, ಸ್ನಾನ ಮಾಡಿಸಿ, ಹೊಸಬಟ್ಟೆ ಹಾಕಿಸಿ, ಕರ್ನಾಟಕದ ರೈಲಿನಲ್ಲಿ ಕರೆದೊಯ್ದಿದ್ದಾರೆ. ಅಂತಿಮವಾಗಿ ಕುಟುಂಬಕ್ಕೆ ತಲುಪಿಸಿದ್ದಾರೆ. ಗೋವಿಂದಪ್ಪನವರನ್ನು ಮನೆ ಸೇರಿಸಲು ಒಟ್ಟು 2,000 ಕಿ.ಮೀ. ದೂರವನ್ನು ಯೋಧರು ಕ್ರಮಿಸಿದ್ದಾರೆ! ಗೋವಿಂದಪ್ಪನವರಿಗೆ 4 ಗಂಡು, 2 ಹೆಣ್ಣು ಸೇರಿ ಒಟ್ಟು ಆರು ಮಕ್ಕಳು. ಅವರು 1991ರಲ್ಲೇ ಕೆಲಸ ಹುಡುಕಿಕೊಂಡು ಊರುಬಿಟ್ಟಿದ್ದರು. ಮೊದಲು ಮಹಾರಾಷ್ಟ್ರಕ್ಕೆ ಹೋಗಿ, ಅನಂತರ ಉತ್ತರಾಖಂಡ ಸೇರಿಕೊಂಡಿದ್ದರು.

ಟಾಪ್ ನ್ಯೂಸ್

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

1-dharma

Dharmasthala;ಇಂದಿನಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

Jammu-Vaishnodevi

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.