ಭಾರತದ ಸ್ವಾತಂತ್ರ್ಯವನ್ನು ಕೆಲವು ಘಟನೆಗಳಿಗೆ ಸೀಮಿತಗೊಳಿಸಿದ್ದೇವೆ: ಪ್ರಧಾನಿ ಮೋದಿ
ಸ್ವಾತಂತ್ರ್ಯವು ಅಸಂಖ್ಯಾತ ಜನರ ತಪಸ್ಸನ್ನು ಒಳಗೊಂಡಿತ್ತು
Team Udayavani, Jun 14, 2022, 7:35 PM IST
ಮುಂಬಯಿ: ”ತಿಳಿದೋ ತಿಳಿಯದೆಯೋ ನಾವು ಭಾರತದ ಸ್ವಾತಂತ್ರ್ಯವನ್ನು ಕೆಲವು ಘಟನೆಗಳಿಗೆ ಸೀಮಿತಗೊಳಿಸುತ್ತೇವೆ. ಆದರೆ, ಭಾರತದ ಸ್ವಾತಂತ್ರ್ಯವು ಅಸಂಖ್ಯಾತ ಜನರ ತಪಸ್ಸನ್ನು ಒಳಗೊಂಡಿತ್ತು ಮತ್ತು ಸ್ಥಳೀಯ ಮಟ್ಟದಲ್ಲಿ ಅನೇಕ ಘಟನೆಗಳ ಸಾಮೂಹಿಕ ಪರಿಣಾಮವು ರಾಷ್ಟ್ರೀಯವಾಗಿತ್ತು. ವಿಧಾನಗಳು ವಿಭಿನ್ನವಾಗಿವೆ ಆದರೆ ನಿರ್ಣಯವು ಒಂದೇ ಆಗಿತ್ತು” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಮುಂಬೈನ ರಾಜಭವನದಲ್ಲಿ ಜಲ ಭೂಷಣ ಕಟ್ಟಡ ಮತ್ತು ಕ್ರಾಂತಿಕಾರಿಗಳ ಗ್ಯಾಲರಿಯನ್ನು ಉದ್ಘಾಟಿಸಿದರು. ಈ ಸಂದರ್ಭ ಮಹಾರಾಷ್ಟ್ರದ ರಾಜ್ಯಪಾಲಭಗತ್ ಸಿಂಗ್ ಕೋಶ್ಯಾರಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಉಪಸ್ಥಿತರಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಮಹಾರಾಷ್ಟ್ರವು ದೇಶಕ್ಕೆ ಹಲವು ಕ್ಷೇತ್ರಗಳಲ್ಲಿ ಸ್ಫೂರ್ತಿ ನೀಡಿದೆ. ಜಗತ್ಗುರು ಶ್ರೀ ಸಂತ ತುಕಾರಾಮ್ ಮಹಾರಾಜರಿಂದ ಬಾಬಾಸಾಹೇಬ್ ಅಂಬೇಡ್ಕರ್ ಅವರವರೆಗೆ ಸಮಾಜ ಸುಧಾರಕರ ಶ್ರೀಮಂತ ಪರಂಪರೆ ಇದೆ ಎಂದರು.
ಮಹಾರಾಷ್ಟ್ರದಿಂದ ಸಂತ ಸಂತ ಜ್ಞಾನೇಶ್ವರ ಮಹಾರಾಜ್, ಸಂತ ನಾಮದೇವ್, ಸಂತ ರಾಮದಾಸ್ ಮತ್ತು ಸಂತ ಚೋಖಾಮೇಳ ದೇಶಕ್ಕೆ ಶಕ್ತಿ ತುಂಬಿದ್ದಾರೆ. ನಾವು ಸ್ವರಾಜ್ಯದ ಬಗ್ಗೆ ಮಾತನಾಡಿದರೆ, ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಛತ್ರಪತಿ ಸಂಭಾಜಿ ಮಹಾರಾಜರ ಜೀವನವು ಇಂದಿಗೂ ಪ್ರತಿಯೊಬ್ಬ ಭಾರತೀಯರಲ್ಲಿ ದೇಶಭಕ್ತಿಯ ಭಾವನೆಯನ್ನು ಬಲಪಡಿಸುತ್ತದೆ ಎಂದರು.
ರಾಜಭವನದ ವಾಸ್ತುಶೈಲಿಯಲ್ಲಿ ಪ್ರಾಚೀನ ಮೌಲ್ಯಗಳು ಮತ್ತು ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಸೇರಿಸಿರುವುದನ್ನು ಪ್ರಧಾನಿ ಗಮನಿಸಿದರು ಮತ್ತು ರಾಜಭವನವನ್ನು ಲೋಕಭವನವನ್ನಾಗಿ ಪರಿವರ್ತಿಸುವ ಮನೋಭಾವವನ್ನು ಶ್ಲಾಘಿಸಿದರು.
ಬಾಲಗಂಗಾಧರ ತಿಲಕ್, ಚಾಪೇಕರ್ ಸಹೋದರರು, ವಾಸುದೇವ್ ಬಲ್ವಂತ್ ಫಾಡ್ಕ್ ಮತ್ತು ಮೇಡಂ ಭಿಕಾಜಿ ಕಾಮಾ ಅವರ ಬಹುಮುಖ ಕೊಡುಗೆಯನ್ನು ಪ್ರಧಾನಮಂತ್ರಿ ಸ್ಮರಿಸಿದರು. ಸ್ವಾತಂತ್ರ್ಯ ಹೋರಾಟವು ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ವ್ಯಾಪಿಸಿದೆ ಎಂದ ಅವರು ಗದರ್ ಪಾರ್ಟಿ, ನೇತಾಜಿ ನೇತೃತ್ವದ ಆಜಾದ್ ಹಿಂದ್ ಫೌಜ್ ಮತ್ತು ಇಂಡಿಯಾ ಹೌಸ್ ಆಫ್ ಶ್ಯಾಮ್ಜಿ ಕೃಷ್ಣ ವರ್ಮಾ ಸ್ವಾತಂತ್ರ್ಯ ಹೋರಾಟದ ಜಾಗತಿಕ ಮಟ್ಟದ ಉದಾಹರಣೆಗಳಾಗಿವೆ. “ಸ್ಥಳೀಯದಿಂದ ಜಾಗತಿಕ ಮಟ್ಟಕ್ಕೆ ಈ ಮನೋಭಾವವು ನಮ್ಮ ”ಆತ್ಮನಿರ್ಭರ್ ಭಾರತ್” ಅಭಿಯಾನದ ಆಧಾರವಾಗಿದೆ” ಎಂದರು.
ಮುಂಬಯಿ ಕನಸಿನ ನಗರ, ಆದರೆ, ಮಹಾರಾಷ್ಟ್ರದಲ್ಲಿ ಇಂತಹ ಹಲವು ನಗರಗಳಿವೆ, ಅವುಗಳು 21ನೇ ಶತಮಾನದಲ್ಲಿ ದೇಶದ ಬೆಳವಣಿಗೆಯ ಕೇಂದ್ರಗಳಾಗಲಿವೆ ಎಂದರು. ಈ ಚಿಂತನೆಯಿಂದ ಒಂದೆಡೆ ಮುಂಬೈನ ಮೂಲಸೌಕರ್ಯವನ್ನು ಆಧುನೀಕರಣಗೊಳಿಸಲಾಗುತ್ತಿದೆ ಮತ್ತು ಅದೇ ಸಮಯದಲ್ಲಿ ಇತರ ನಗರಗಳಲ್ಲಿಯೂ ಆಧುನಿಕ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
Vavar Mosque: ಶಬರಿಮಲೆ ಯಾತ್ರಿಗಳು ವಾವರ ಮಸೀದಿಗೆ ಹೋಗಬಾರದು: ಬಿಜೆಪಿ ಶಾಸಕ
Viral: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16ರ ಬಾಲಕನ ಜತೆ ಮನೆ ಬಿಟ್ಟು ಓಡಿದ 10ರ ಬಾಲಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.