ರೈತ ಮಹಿಳೆಯರ ಆಸೆ ಪೂರೈಸಿದ ಸೋನಿಯಾ ಗಾಂಧಿ!
Team Udayavani, Jul 17, 2023, 7:45 AM IST
ಚಂಡೀಗಢ: ಇತ್ತೀಚೆಗಷ್ಟೇ ಹರ್ಯಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರೈತರೊಂದಿಗೆ ನಾಟಿ ಮಾಡಿದ್ದು ಗೊತ್ತೇ ಇದೆ. ಈ ವೇಳೆ ರೈತ ಮಹಿಳೆಯರು ತಮ್ಮ ಆಸೆಯೊಂದನ್ನು ರಾಹುಲ್ ಮುಂದೆ ಬಿಚ್ಚಿಟ್ಟಿದ್ದರು. ಮಹಿಳೆಯರ ಆ ಆಸೆಯನ್ನು ಸ್ವತಃ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಈಡೇರಿಸಿದ್ದಾರೆ!
ರೈತ ಮಹಿಳೆಯರೊಟ್ಟಿಗೆ ತಾವೇ ಭೋಜನ ಸವಿದು, ಡಾನ್ಸ್ ಕೂಡ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಹೌದು, ಹರ್ಯಾಣದಲ್ಲಿ ರಾಹುಲ್ ಅವರನ್ನು ಭೇಟಿಯಾಗಿದ್ದ ಮಹಿಳೆಯರು ತಾವು ದೆಹಲಿ ಸುತ್ತಬೇಕು, ರಾಹುಲ್ ಅವರ ಮನೆಯನ್ನು ನೋಡಬೇಕು ಎಂದು ಆಸೆ ವ್ಯಕ್ತಪಡಿಸಿದ್ದರು.
ಆದರೆ, ಸರ್ಕಾರ ಈಗಾಗಲೇ ತಮ್ಮ ಮನೆಯನ್ನು ವಾಪಸ್ ಪಡೆದಿದೆ ಎಂದು ರಾಹುಲ್ ತಿಳಿಸಿದ್ದರು. ಬಳಿಕ ಸೋನಿಯಾ ಗಾಂಧಿ ಅವರೇ ಸ್ವತಃ ರೈತ ಮಹಿಳೆಯರಿಗಾಗಿ ವಾಹನ ಸಿದ್ಧಗೊಳಿಸಿ, ಅವರನ್ನೆಲ್ಲ ತಮ್ಮ ನಿವಾಸಕ್ಕೆ ಕರೆಸಿ, ಔತಣ ಕೂಟ ಏರ್ಪಡಿಸಿದ್ದಾರೆ.
Women farmers from Haryana had expressed their desire to @RahulGandhi to see Delhi and his house. He told them that the Govt has taken away his house.
But just see what happened next.
This video is pure joy! ❤️ pic.twitter.com/1cqAeSW5xg
— Ruchira Chaturvedi (@RuchiraC) July 16, 2023
ಮಹಿಳೆಯರಿಗೆ ದೆಹಲಿ ತೋರಿಸಿದ್ದಲ್ಲದೇ, ಅವರೊಟ್ಟಿಗೆ ಊಟ ಮಾಡಿ, ಡಾನ್ಸ್ ಕೂಡ ಮಾಡಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರೂ ಮಹಿಳೆಯರನ್ನು ಆದರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wikipedia: ಪಕ್ಷಪಾತ, ತಪ್ಪು ಮಾಹಿತಿ ದೂರು: ವಿಕಿಪೀಡಿಯಾಗೆ ಕೇಂದ್ರದಿಂದ ನೋಟಿಸ್
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.