ಸುಷ್ಮಾ ಪತಿ ಕೌಶಲ್ ಗೆ ಸೋನಿಯಾ ಭಾವಾನಾತ್ಮಕ ಪತ್ರ
ಸುಷ್ಮಾ ಜತೆಗಿನ ರಾಜಕೀಯ ಸಂಬಂಧವನ್ನು ಮೆಲುಕು ಹಾಕಿದ ಸೋನಿಯಾ
Team Udayavani, Aug 7, 2019, 5:07 PM IST
ಹೊಸದಿಲ್ಲಿ: ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಜೊತೆಯಾಗಿ ಸುಮಾರು ಎರಡು ದಶಕಗಳಿಗೂ ಹೆಚ್ಚುಕಾಲ ಕೆಲಸ ಮಾಡಿದ್ದ ಸುಷ್ಮಾ ಅವರ ನಿಧನ ತೀವ್ರ ದುಃಖ ತಂದಿದೆ ಎಂದಿದ್ದಾರೆ.
ಸೈದ್ಧಾಂತಿಕವಾಗಿ ತಮ್ಮಿಬ್ಬರ ರಾಜಕೀಯ ನಿಲುವುಗಳು ವಿರುದ್ಧವಾಗಿದ್ದರೂ, ದೇಶದ ಏಕತೆ ಮತ್ತು ಸಾವಭೌಮತೆಯ ವಿಷಯ ಬಂದಾಗ ನಾವಿಬ್ಬರೂ ಒಂದೇ ನಿಲುವಿಗೆ ಬದ್ಧತೆ ತೋರುತ್ತಿದ್ದೆವು ಎಂದು ತಮ್ಮ ಮತ್ತು ಸುಷ್ಮಾ ಸ್ವರಾಜ್ ನಡುವಿನ ನೆನಪುಗಳನ್ನು ಕಾಂಗ್ರೆಸ್ ಅಧಿನಾಯಕಿ ಮೆಲುಕು ಹಾಕಿದ್ದಾರೆ.
ತಮ್ಮ ರಾಜಕೀಯ ಸಹವರ್ತಿ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಸೋನಿಯಾ ಗಾಂಧಿ ಅವರು ಸುಷ್ಮಾ ಅವರ ಪತಿ ಸ್ವರಾಜ್ ಕೌಶಲ್ ಅವರಿಗೆ ಪತ್ರದ ಮೂಲಕ ತಮ್ಮ ಭಾವಾನಾತ್ಮಕ ಸಂದೇಶವನ್ನು ತಿಳಿದ್ದಾರೆ. ಈ ಪತ್ರದಲ್ಲಿ ತಮ್ಮ ಮತ್ತು ಸುಷ್ಮಾ ಸಂಬಂಧಗಳ ಕುರಿತಾಗಿ ವಿವರಿಸಿದ್ದಾರೆ.
“ನಿಮ್ಮ ಪ್ರೀತಿಯ ಪತ್ನಿ ಶ್ರೀಮತಿ ಸುಷ್ಮಾ ಸ್ವರಾಜ್ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ಸುಷ್ಮಾ ಅವರು ರಾಜಕೀಯ ಕ್ಷೇತ್ರದ ವಿಶೇಷ ಪ್ರತಿಭೆಯಾಗಿದ್ದರು. ಅವರು ತಮ್ಮ ವೈಯಕ್ತಿಕ ಜೀವನ ಮತ್ತು ರಾಜಕೀಯ ಜೀವನದಲ್ಲಿ ಒಂದೇ ಆದರ್ಶವನ್ನು ಪಾಲಿಸುತ್ತಾ ಬಂದವರು.
ಪಕ್ಷದ ಯಾವುದೇ ಸ್ಥಾನಮಾನ ಇರಬಹುದು ಅಥವ ಯಾವುದೇ ಸ್ತರದ ಅಧಿಕಾರವನ್ನು ಹೊಂದಿದಾಗಲೂ, ಅವರ ನಡತೆ ಮತ್ತು ನಿರ್ಧಾರಗಳಲ್ಲಿ ನಾನು ಯಾವುದೇ ಬದಲಾವಣೆ ಗುರುತಿಸಿಲ್ಲ. ಒಂದೇ ತತ್ವವನ್ನು ಪಾಲಿಸಿಕೊಂಡು ಬಂದ ಅವರ ನಿರ್ಧಾರ ಅಚಲವಾಗಿತ್ತು. ತಮ್ಮ ಕಾರ್ಯಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳುತ್ತಿರಲಿಲ್ಲ.
ನಾನು ಮತ್ತು ಸುಷ್ಮಾ ಅವರು ಹಲವು ಲೋಕಸಭೆಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಾ ಬಂದಿದ್ದೇವೆ. ರಾಜಕೀಯವಾಗಿ ನಮ್ಮ ಸಿದ್ಧಾಂತಗಳು ಭಿನ್ನವಾಗಿದ್ದರೂ, ನಾವಿಬ್ಬರು ಒಳ್ಳೆಯ ಗೆಳೆತನವನ್ನು ಕಾಪಾಡಿಕೊಂಡು ಬಂದಿದ್ದೆವು. ಆದರೆ ಇದೀಗ ಇದ್ದಕ್ಕಿಂದಂತೆ ಅವರ ಸಾವಿನ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ.
ಹಿಂದಿನ ಸರಕಾರದಲ್ಲಿ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಅವರು ವಿವಿಧ ದೇಶಗಳಿಗೆ ತೆರಳಿ ಉಭಯ ದೇಶಗಳ ಮಧ್ಯೆ ಸಹಬಾಳ್ವೆಯ ಬೀಜ ಬಿತ್ತಿದ್ದರು. ಈ ಕಾರಣದಿಂದ ವಿದೇಶದಲ್ಲಿ ಭಾರತೀಯರು ಯಾರಾದರೂ ಸಂಕಷ್ಟ ಅನುಭವಿಸಿದ್ದರೆ ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಜವಾಬ್ದಾರಿಯನ್ನು ಸುಷ್ಮಾ ಅವರು ನಿಭಾಯಿಸುತ್ತಿದ್ದರು.
ತಾನು ದೇಶಕ್ಕೆ ಸಲ್ಲಿಸಬೇಕಾದ ಸೇವೆಯನ್ನು ಸಣ್ಣ ವಯಸ್ಸಿನಿಂದಲೇ ಪೂರೈಸಿ ಇದೀಗ ಮರಳಿ ಬಾರದ ಲೋಕಕ್ಕೆ ತೆರಳಿದ್ದಾರೆ. ಸುಷ್ಮಾ ನಿಧನ ವೈಯಕ್ತಿಕವಾಗಿ ನನಗೂ ತುಂಬಾ ನಷ್ಟವಾಗಿದೆ ಎಂದು ಸೋನಿಯಾ ಅವರು ತಾವು ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಸುಷ್ಮಾ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನಿಮಗೆ ಮತ್ತು ಪುತ್ರಿ ಬನ್ಸೂರಿ ಅವರಿಗೆ ಕರುಣಿಸಲಿ. ದೇಶಕ್ಕಾಗಿ ಸೇವೆಗೈದ ವ್ಯಕ್ತಿತ್ವ, ಜೀವನದ ಸಂಪಾದಿಸಿದ ಗೌರವ ಅವರನ್ನು ಸಾವಿನಲ್ಲೂ ಜೀವಂತವಾಗಿರಿಸಿದೆ. ಅವರು ಬದುಕಿದ್ದಂತೆ ನಮ್ಮನ್ನು ಬಿಟ್ಟು ತೆರಳಿದ್ದಾರೆ. ತಮ್ಮ ಕೊನೆಯ ಉಸಿರು ಇರುವರೆಗೂ ಚುರುಕಾಗಿದ್ದರು. ಸುಷ್ಮಾ ಸ್ವರಾಜ್ ಅವರಿಗೆ ನನ್ನ ದುಃಖತಪ್ತ ನುಡಿನಮನಗಳು’ – ಎಂದು ಸುಷ್ಮಾ ಸ್ವರಾಜ್ ಪತಿ ಸ್ವರಾಜ್ ಕೌಶಲ್ ಅವರಿಗೆ ಬರೆದ ಭಾವಾನಾತ್ಮಕ ಸಂದೇಶದಲ್ಲಿ ಸೋನಿಯಾ ಗಾಂಧಿ ಅವರು ಸಾಂತ್ವನದ ಮಾತುಗಳನ್ನಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
MUST WATCH
ಹೊಸ ಸೇರ್ಪಡೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.