ಸುರೇಶ್ ರೈನಾ ಸಹಾಯಕ್ಕೆ ಬಂದ ಸೋನು ಸೂದ್ : ಕೇವಲ 10 ನಿಮಿಷದಲ್ಲಿ ಆಕ್ಸಿಜನ್ ಒದಗಿಸಿದ ನಟ
Team Udayavani, May 7, 2021, 7:52 AM IST
ನವದೆಹಲಿ : ಮಾಜಿ ಟೀಮ್ ಇಂಡಿಯಾ ಕ್ರಿಕೆಟಿಗ ಸುರೇಶ್ ರೈನಾ ಅವರ 65 ವರ್ಷದ ಚಿಕ್ಕಮ್ಮ ( aunt) ಕೋವಿಡ್ ಗೆ ತುತ್ತಾಗಿದ್ದು, ಅವರ ಪರಿಸ್ಥಿತಿ ಗಂಭಿರವಾಗಿದೆ. ಈ ಸಂದರ್ಭದಲ್ಲಿ ಆಕ್ಸಿಜನ್ ಗಾಗಿ ಸರೇಶ್ ರೈನಾ ಅಲೆದಾಟ ನಡೆಸಿದ್ದು, ಟ್ವಿಟರ್ ನಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥಗೆ ಮನವಿ ಮಾಡಿಕೊಂಡಿದ್ದಾರೆ. ಟ್ವೀಟ್ ನಲ್ಲಿ ಬರೆದಿದ್ದ ರೈನಾ, ಮೀರತ್ ನ ನಮ್ಮ ಆಂಟಿ ಶ್ವಾಸಕೋಶದ ಸೋಂಕಿಗೆ ತುತ್ತಾಗಿದ್ದಾರೆ. ಅವರಿಗೆ ತಕ್ಷಣ ಆಕ್ಸಿಜನ್ ಬೇಕಾಗಿದೆ. ಅವರ ಆಕ್ಸಿಜನ್ ಮಟ್ಟ 91 ಇದ್ದು, ಸಹಾಯ ಮಾಡುವಂತೆ ಕೇಳಿದ್ದರು.
Urgent requirement of an oxygen cylinder in Meerut for my aunt.
Age – 65
Hospitalised with Sever lung infection.
Covid +
SPO2 without support 70
SPO2 with support 91Kindly help with any leads.@myogiadityanath
— Suresh Raina?? (@ImRaina) May 6, 2021
ಈ ಟ್ವೀಟ್ ನೋಡಿದ ಬಹುಭಾಷಾ ನಟ ಸೋನು ಸೂದ್, ತಕ್ಷಣಕ್ಕೆ ರೈನಾ ನೆರವಿಗೆ ನಿಂತಿದ್ದಾರೆ. ಕೆಲವೇ ನಿಮಿಷದಲ್ಲಿ ಆಕ್ಸಿಜನ್ ತಲುಪಲಿದೆ ಸಹೋದರ ಎಂದು ಟ್ವೀಟ್ ಮೂಲಕ ರೈನಾಗೆ ಸೋನು ಸೂದ್ ತಿಳಿಸಿದ್ದಾರೆ. ಅಲ್ಲದೆ ತಮ್ಮ ಫೌಂಡೇಶನ್ ಮೂಲಕ ಸೋನು ಸೂದ್ ಆಕ್ಸಿಜನ್ ವ್ಯವಸ್ಥೆ ಮಾಡಿದ್ದಾರೆ.
Oxygen cylinder reaching in 10 mins bhai. ☑️@Karan_Gilhotra @SoodFoundation https://t.co/BQHCYZJYkV
— sonu sood (@SonuSood) May 6, 2021
ಕಷ್ಟಕಾಲದಲ್ಲಿ ಸಹಾಯ ಮಾಡಿದ ನಟನಿಗೆ ಸುರೇಶ್ ರೈನಾ ಧನ್ಯವಾದ ತಿಳಿಸಿದ್ದು, ನಿಮ್ಮಿಂದ ದೊಡ್ಡ ಉಪಕಾರ ಆಗಿದೆ. ದೇವರು ನಿಮಗೆ ಆಶೀರ್ವಾದ ಮಾಡಲಿ ಎಂದು ಹಾರೈಸಿದ್ದಾರೆ.
ಇನ್ನು ಸೋನು ಸೂದ್ ಮೊದಲ ಬಾರಿಗೆ ಭಾರತ ಲಾಕ್ ಡೌನ್ ಆದ ವೇಳೆಯಲ್ಲಿ ವಲಸೆ ಕಾರ್ಮಿಕರಿಗೆ ತುಂಬಾ ಸಹಾಯ ಮಾಡಿದ್ದರು. ದುರ್ಬಲ ವರ್ಗದವರಿಗೆ ನಟ ಸಹಾಯ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಯಾರು ಯಾವುದೇ ಸಹಾಯವನ್ನು ಕೋರಿದರೂ ಅದು ತಮ್ಮಿಂದ ಸಾಧ್ಯವಾದರೇ ಸೂನು ಈಡೇರಿಸಿಯೇ ತೀರುತ್ತಾರೆ ಎಂಬುದಕ್ಕೆ ರೈನಾ ಅವರ ಆಂಟಿಗೆ ಸಹಾಯ ಮಾಡಿರುವುದೇ ಸಾಕ್ಷಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.