Madhya Pradesh; ಸಿಎಂ ಆದ ಕೂಡಲೇ ಧ್ವನಿವರ್ಧಕ ಬಳಕೆ, ಮಾಂಸ ಮಾರಾಟ ನಿಷೇಧಿಸಿದ ಮೋಹನ್ ಯಾದವ್
Team Udayavani, Dec 14, 2023, 8:30 AM IST
ಭೋಪಾಲ್: ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಮೋಹನ್ ಯಾದವ್ ಅವರು ಎರಡು ಹೊಸ ಘೋಷಣೆ ಮಾಡಿದ್ದಾರೆ. ಬುಧವಾರ ಬೆಳಗ್ಗೆ 11.30ರ ಸುಮಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಮೋಹನ್ ಯಾದವ್ ಅವರು ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಯನ್ನು ನಿಷೇಧಿಸಿದ್ದಾರೆ. ಅಲ್ಲದೆ ತೆರೆದ ಜಾಗಗಳಲ್ಲಿ ಮಾಂಸ ಮಾರಾಟವನ್ನು ನಿಷೇಧ ಮಾಡಿ ಆದೇಶ ಹೊರಡಿಸಿದ್ದಾರೆ.
ನಿಗದಿತ ಮಿತಿಯೊಳಗೆ ಧ್ವನಿವರ್ಧಕಗಳ ಬಳಕೆಯನ್ನು ನಿರ್ಬಂಧಿಸಲಾಗುವುದು ಎಂದು ಅವರು ಒತ್ತಿ ಹೇಳಿದರು. ಹೆಚ್ಚಿನ ಧ್ವನಿಯಲ್ಲಿ ಧ್ವನಿವರ್ಧಕಗಳ ಅನಧಿಕೃತ ಬಳಕೆಯನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದರು. ಮೋಹನ್ ಯಾದವ್ ಅವರು ಮಧ್ಯಪ್ರದೇಶದಲ್ಲಿ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶ ನೀಡಿದ್ದಾರೆ.
ಪ್ರತಿ ಜಿಲ್ಲೆಯಲ್ಲೂ ಯುವ ಜನರಿಗಾಗಿ ಶ್ರೇಷ್ಠತೆಯ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದು ಸಿಎಂ ಯಾದವ್ ಹೇಳಿದರು. 52 ಕಾಲೇಜುಗಳನ್ನು ಆಯ್ಕೆ ಮಾಡಲಾಗಿದ್ದು, ಇವುಗಳನ್ನು ಪ್ರಧಾನ ಮಂತ್ರಿಗಳ ಶ್ರೇಷ್ಠ ಕಾಲೇಜುಗಳು ಎಂದು ಕರೆಯಲಾಗುವುದು. ಎಲ್ಲಾ ಕಾಲೇಜುಗಳಲ್ಲಿ ಡಿಜಿಟಲ್ ಲಾಕರ್ ಗಳ ಸೌಲಭ್ಯವಿರುತ್ತದೆ. ಪದವಿ ಅಂಕಪಟ್ಟಿಯಲ್ಲಿ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ನಾವು ಡಿಜಿಟಲ್ ಲಾಕರ್ ಕಾಲೇಜು / ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ ಎಂದು ಸಿಎಂ ಯಾದವ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪತಿ-ಪತ್ನಿ ಜಗಳದಲ್ಲಿ ಬಾವಿಗೆ ಹಾರಿದ ಪತಿ… ರಕ್ಷಣೆಗೆ ಹೋದ ನಾಲ್ವರು ಸೇರಿ 5 ಮಂದಿ ದುರ್ಮರಣ
Dense Fog… ರಸ್ತೆ ಕಾಣದೆ ಟ್ರಕ್‌ಗೆ ಡಿಕ್ಕಿ ಹೊಡೆದ ಬಸ್, 10 ಮಂದಿಯ ಸ್ಥಿತಿ ಗಂಭೀರ
ವಿಶ್ವದಾದ್ಯಂತ ಜೆನ್ ಬೀಟಾಪೀಳಿಗೆ ಯುಗಾರಾಂಭ! ಹೊಸ ವರ್ಷದ ಮೊದಲ ದಿನ 3 ಲಕ್ಷ ಮಕ್ಕಳ ಜನನ
Toxic Waste: ಭೋಪಾಲ್ ಅನಿಲ ದುರಂತ ನಡೆದು 40 ವರ್ಷಗಳ ಬಳಿಕ ತ್ಯಾಜ್ಯ ವಿಲೇವಾರಿ
ಸಿಂಗ್ ಸ್ಮಾರಕ ನಿರ್ಮಾಣ: ಸ್ಥಳ ನಿರ್ಧರಿಸಲು ಸಿಂಗ್ ಕುಟುಂಬಕ್ಕೆ ಕೇಂದ್ರ ಮನವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudbidri: ದುರ್ಬಲ ನೀರ್ಕೆರೆ ಸೇತುವೆ; ಹೊಸ ವರುಷಕ್ಕೆ ಹೊಸತು?
Mulki ರೈಲು ನಿಲ್ದಾಣಕ್ಕೆ ನಗರ ಪಂಚಾಯತ್ ಮೂಲ ಸೌಕರ್ಯ
ಪತಿ-ಪತ್ನಿ ಜಗಳದಲ್ಲಿ ಬಾವಿಗೆ ಹಾರಿದ ಪತಿ… ರಕ್ಷಣೆಗೆ ಹೋದ ನಾಲ್ವರು ಸೇರಿ 5 ಮಂದಿ ದುರ್ಮರಣ
ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.