ಯೋಗಕ್ಕೆ ಸಿಗಲಿದೆ ವಿಮಾ ಡಿಸ್ಕೌಂಟ್‌? ವಿಮಾ ಪ್ರಾಧಿಕಾರದಿಂದ ಕರಡು ಮಾರ್ಗಸೂಚಿ

Team Udayavani, Oct 26, 2021, 6:50 AM IST

ಯೋಗಕ್ಕೆ ಸಿಗಲಿದೆ ವಿಮಾ ಡಿಸ್ಕೌಂಟ್‌? ವಿಮಾ ಪ್ರಾಧಿಕಾರದಿಂದ ಕರಡು ಮಾರ್ಗಸೂಚಿ

ನವದೆಹಲಿ: ಯೋಗ ಮಾಡುವ ಅಭ್ಯಾಸ ನಿಮಗಿದೆಯೇ? ಹಾಗಿದ್ದರೆ, ವಿಮಾ ಪ್ರೀಮಿಯಂನಲ್ಲಿ ರಿಯಾಯಿತಿ ಪಡೆಯುವ ಅವಕಾಶವೂ ನಿಮಗೆ ಸಿಗಬಹುದು!

ದೇಶದ ವಿಮಾ ಕಂಪನಿಗಳಿಗೆ ಜೀವವಿಮೆ ಪಾಲಿಸಿಗಳ ಜೊತೆಗೆ “ಕ್ಷೇಮಾಭಿವೃದ್ಧಿ ಕಾರ್ಯಕ್ರಮ’ಗಳ ಆಯೋಜನೆಗೆ ಅನುಮತಿ ನೀಡಲು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಐಆರ್‌ಡಿಎಐ) ಮುಂದಾಗಿದೆ.

ಈ ಕುರಿತ ಕರಡು ಮಾರ್ಗಸೂಚಿ ಸಿದ್ಧವಾಗಿದ್ದು, ಕಂಪನಿಗಳು ಸಮ್ಮತಿಸಿದರೆ ಇದು ಜಾರಿಯಾಗಲಿದೆ. ಆಗ, ಯೋಗದಂತಹ ಕ್ಷೇಮಾಭಿವೃದ್ಧಿ ಚಟುವಟಿಕೆಯನ್ನು ರೂಢಿಸಿಕೊಂಡವರು ತಮಗೆ ಸಿಕ್ಕ ರಿವಾರ್ಡ್‌ ಪಾಯಿಂಟ್‌ಗಳ ಮೂಲಕ ಪ್ರೀಮಿಯಂ ನವೀಕರಣದ ವೇಳೆ ಡಿಸ್ಕೌಂಟ್‌ ಪಡೆಯಬಹುದಾಗಿದೆ.

ಏನು ಮಾಡಿದರೆ ರಿಯಾಯ್ತಿ?:
ವಿಮಾದಾರ ವ್ಯಕ್ತಿಯು ಆರೋಗ್ಯಕರ ಚಟುವಟಿಕೆಗಳನ್ನು ಮೈಗೂಡಿಸಿಕೊಂಡಿದ್ದರೆ, ಆತನಿಗೆ ಪ್ರೀಮಿಯಂ ನವೀಕರಣದ ವೇಳೆ ವಿಮಾ ಕಂಪನಿಯು ರಿಯಾಯಿತಿ ಘೋಷಿಸಬಹುದು. ಉದಾಹರಣೆಗೆ, ವಾರಕ್ಕೆ ಎಷ್ಟು ಹೆಜ್ಜೆ ನಡೆದಿದ್ದಾನೆ ಎಂಬ ಮಾಹಿತಿ, ಯೋಗಾಭ್ಯಾಸ-ಕ್ಯಾಲೊರಿ ಲೆಕ್ಕ, ಆರೋಗ್ಯಕರ ಎದೆಬಡಿತದ ದರ ಇತ್ಯಾದಿ. ಇದಲ್ಲದೇ, ವಿಮಾ ಕಂಪನಿಗಳೇ ನಡೆಸುವ ಕ್ಷೇಮಾಭಿವೃದ್ಧಿ ಕಾರ್ಯಕ್ರಮದಲ್ಲೂ ಗ್ರಾಹಕರು ಹೆಸರು ನೋಂದಾಯಿಸಿಕೊಳ್ಳಬಹುದು. ಕ್ರಿಯಾಶೀಲರಾಗಿ ಹಾಗೂ ವೈದ್ಯಕೀಯವಾಗಿ ಫಿಟ್‌ ಆಗಿರಲು ಬೇಕಾದ ಚಟುವಟಿಕೆಗಳನ್ನು ರೂಢಿಸಿಕೊಳ್ಳಲು ಈ ವೆಲ್‌ನೆಸ್‌ ರಿವಾರ್ಡ್‌ ಪ್ರೋಗ್ರಾಂ(ಡಬ್ಲ್ಯೂಆರ್‌ಪಿ) ಉತ್ತೇಜನ ನೀಡುತ್ತದೆ. ನಂತರ, ಅವರಿಗೆ ರಿವಾರ್ಡ್‌ ಪಾಯಿಂಟ್‌ ನೀಡಲಿದೆ. ಅದರ ಆಧಾರದಲ್ಲಿ ಅವರು ರಿಯಾಯಿತಿ ಪಡೆಯಬಹುದಾಗಿದೆ.

ಇದನ್ನೂ ಓದಿ:ಕೋವಿಡ್‌ ಲಸಿಕೆ ಕಡ್ಡಾಯ ಪ್ರಶ್ನಿಸಿದ ಅರ್ಜಿ ವಜಾ: ಅರ್ಜಿದಾರ ವಕೀಲರಿಗೆ ಹೈಕೋರ್ಟ್‌ ತರಾಟೆ

ನಿಯಮಗಳೇನು?
– ಯೋಗಕ್ಷೇಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಪಾಲಿಸಿದಾರರ ಇಚ್ಛೆಗೆ ಬಿಟ್ಟಿದ್ದು
– ಈ ಕಾರ್ಯಕ್ರಮವನ್ನು ವಿಮಾ ಕಂಪನಿಯೇ ನೇರವಾಗಿ ಅಥವಾ ಬೇರೆ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆಸಬಹುದು
– ಈ ಕಾರ್ಯಕ್ರಮಗಳನ್ನು ಪಾಲಿಸಿಯಡಿ ಬರುವ ಹೆಚ್ಚುವರಿ ಸೇವೆಯಾಗಿ/ಆಯ್ಕೆಯಾಗಿ ಬಳಸಬೇಕು

ಟಾಪ್ ನ್ಯೂಸ್

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನ.23ರ ಬಳಿಕ ಝಾರ್ಖಂಡಲ್ಲಿ ಸೊರೇನ್‌ ಸರಕಾರಕ್ಕೆ ವಿದಾಯ: ಅಮಿತ್‌ ಶಾ

Amit Shah: ನ.23ರ ಬಳಿಕ ಝಾರ್ಖಂಡಲ್ಲಿ ಸೊರೇನ್‌ ಸರಕಾರಕ್ಕೆ ವಿದಾಯ

ಪ್ರಯಾಣಿಕನಿಂದಲೇ ಬಾಂಬ್‌ ಬೆದರಿಕೆ: ವಿಮಾನ ಭೂಸ್ಪರ್ಶಪ್ರಯಾಣಿಕನಿಂದಲೇ ಬಾಂಬ್‌ ಬೆದರಿಕೆ: ವಿಮಾನ ಭೂಸ್ಪರ್ಶ

Flight: ಪ್ರಯಾಣಿಕನಿಂದಲೇ ಬಾಂಬ್‌ ಬೆದರಿಕೆ: ವಿಮಾನ ಭೂಸ್ಪರ್ಶ

Bengaluru: 10 ಗ್ರಾಂ ಚಿನ್ನದ ಬೆಲೆಯಲ್ಲಿ 1,200 ರೂ.ಇಳಿಕೆ

Bengaluru: 10 ಗ್ರಾಂ ಚಿನ್ನದ ಬೆಲೆಯಲ್ಲಿ 1,200 ರೂ.ಇಳಿಕೆ

Election: ಝಾರ್ಖಂಡ್‌ನ‌ಲ್ಲಿ ಗೆದ್ದರೆ ಒಳನುಸುಳುಕೋರರಿಗೆ ಸಿಲಿಂಡರ್‌: ಕಾಂಗ್ರೆಸ್‌

Election: ಝಾರ್ಖಂಡ್‌ನ‌ಲ್ಲಿ ಗೆದ್ದರೆ ಒಳನುಸುಳುಕೋರರಿಗೆ ಸಿಲಿಂಡರ್‌: ಕಾಂಗ್ರೆಸ್‌

ಬೆಂಗಳೂರಿನ ವಿಭಾ ಸೇರಿ ರೋಡ್ಸ್‌ ಸ್ಕಾಲರ್‌ಶಿಪ್‌ಗೆ 5 ಭಾರತೀಯರು ಆಯ್ಕೆ

Bengaluru ವಿಭಾ ಸೇರಿ ರೋಡ್ಸ್‌ ಸ್ಕಾಲರ್‌ಶಿಪ್‌ಗೆ 5 ಭಾರತೀಯರು ಆಯ್ಕೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.