12ರ ಬಾಲಕಿ, 2 ವರ್ಷ, 30 ಅತ್ಯಾಚಾರಿಗಳು!
Team Udayavani, Sep 27, 2019, 4:00 AM IST
ಮಲಪ್ಪುರಂ (ಕೇರಳ): ಇಲ್ಲಿನ ತಿರುರಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಆ ಮನೆಗೆ ತೆರಳಿದರೆ, ಮನೆ ಬಾಗಿಲಿನ ಮೇಲೆ “ಸಾರಿ… ಅಮ್ಮ’ ಎಂಬ ಬರಹ ಕಣ್ಣಿಗೆ ರಾಚುತ್ತದೆ. ಎರಡೇ ಕೋಣೆಯ ಆ ಪುಟ್ಟ ಮನೆಯಲ್ಲಿ ಆ 12ರ ಪ್ರಾಯದ ಬಾಲಕಿಯನ್ನು ಕಳೆದೆರಡು ವರ್ಷಗಳಲ್ಲಿ 30ಕ್ಕೂ ಹೆಚ್ಚು ಕಾಮಪಿಶಾಚಿಗಳು ಹುರಿದು ಮುಕ್ಕಿವೆ. ಈಗ ಆ ಪ್ರಕರಣ ಬೆಳಕಿಗೆ ಬಂದಿದ್ದು, ಆಕೆಯನ್ನು ಪಾರು ಮಾಡಿ, ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿದೆ. ಆದರೆ, ಮನೆಯಿಂದ ಹೊರಡುವಾಗ ಆ ಬಾಲಕಿ, ಬಾಗಿಲ ಮೇಲೆ “ಸಾರಿ ಅಮ್ಮ’ ಎಂದು ಬರೆದು ಹೋಗಿದ್ದಾಳೆ. ಇದು, ಬಡತನದ ಬೇಗೆ ತಾಳಲಾರದೆ ತನ್ನನ್ನು ಆ ದಂಧೆಗೆ ಇಳಿಸಿದ ಹೆತ್ತಮ್ಮನಿಗೆ ಆ ಬಾಲಕಿ ಕ್ಷಮೆ ಕೇಳಿರುವ ರೀತಿ.
ಮನೆಯಿಂದ 500 ಮೀ. ದೂರದಲ್ಲೇ ಇರುವ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಈ ಬಾಲಕಿ, ಶಾಲೆಯಲ್ಲಿ ಇತ್ತೀಚೆಗೆ ನಡೆದ ಕೌನ್ಸೆಲಿಂಗ್ ವೇಳೆ ನಡೆದ ವಿಷಯ ಬಾಯಿಬಿಟ್ಟಿದ್ದಾಳೆ. ಅಸಲಿಗೆ, ಸರಕಾರಿ ನೌಕರಿ ಕಳೆದುಕೊಂಡು ನಿರುದ್ಯೋಗಿಯಾಗಿದ್ದ ಆಕೆಯ ತಂದೆ, ಬಾಲಕಿಯ ಅಮ್ಮನನ್ನು ವೇಶ್ಯಾವಾಟಿಕೆಗೆ ಇಳಿಸಿ, ಅನಂತರ ಮಗಳನ್ನೂ ಆ ಪಾಪಕೂಪಕ್ಕೆ ತಳ್ಳಿದ್ದಾನೆ ಎಂದು ಆಕೆ ಹೇಳಿದ್ದಾಳೆ. ಆಕೆಯ ತಂದೆ ಸಮೇತ ಮೂವರನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ, ರಾಜ್ಯಾದ್ಯಂತ ಇರುವ ಬಡಕುಟುಂಬಗಳಲ್ಲಿನ ಬಾಲಕಿಯರ ಕೌನ್ಸೆಲಿಂಗ್‌ಗೆ ಮುಂದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.