ಪುಲ್ವಾಮಾ ಈಗ ಪೆನ್ಸಿಲ್ ಸ್ಲೇಟ್ ತಯಾರಿಕೆ ತಾಣ
70ನೇ ಮನ್ ಕಿ ಬಾತ್ನಲ್ಲಿ ಪ್ರಧಾನಿ ಭಾಷಣ
Team Udayavani, Oct 27, 2020, 6:15 AM IST
ಹೊಸದಿಲ್ಲಿ: ಹಿಂದೊಮ್ಮೆ ಉಗ್ರರ ಗೂಡಾಗಿದ್ದ ಪುಲ್ವಾಮಾ, ಈಗ ಪೆನ್ಸಿಲ್- ಸ್ಲೇಟ್ ತಯಾರಿಕಾ ತಾಣವಾಗಿ ಬದಲಾ ಗಿದೆ. ಇಡೀ ದೇಶದ ಶೈಕ್ಷಣಿಕ ರಂಗದಲ್ಲಿ ಪುಲ್ವಾಮಾ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾ ಸಿದ್ದಾರೆ.
ಭಾನುವಾರ 70ನೇ “ಮನ್ ಕಿ ಬಾತ್’ನಲ್ಲಿ ಮೋದಿ, ಪುಲ್ವಾಮಾದ ಜನೋಪಯೋಗಿ ಮುಖವನ್ನು ದೇಶದ ಮುಂದೆ ತೆರೆದಿಟ್ಟಿದ್ದು ವಿಶೇಷವಾಗಿತ್ತು. “ದೇಶದ ಒಟ್ಟು ಬೇಡಿಕೆಯ ಶೇ.90ರಷ್ಟು ಪೆನ್ಸಿಲ್ ಸ್ಲೇಟ್ಗಳನ್ನು ಕಾಶ್ಮೀರ ಕಣಿವೆ ಪೂರೈಸುತ್ತದೆ. ಇದರಲ್ಲಿ ಪುಲ್ವಾಮಾ ಸಿಂಹಪಾಲು ಹೊಂದಿದೆ. ಪುಲ್ವಾಮಾ ಜನತೆಯ ಶ್ರಮ ದಿಂದಾಗಿ ದೇಶದುದ್ದಗಲ ವಿದ್ಯಾರ್ಥಿಗಳು ಹೋಮ್ವರ್ಕ್, ನೋಟ್ಸ್ ಗಳನ್ನು ಸಿದ್ಧ ಮಾಡಿಕೊಳ್ಳುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
“ಹಿಂದೆ ಪೆನ್ಸಿಲ್ ತಯಾರಿಕೆಗೆ ಅಗತ್ಯವಿದ್ದ ಮರವನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ, ಈ ವಿಚಾರದಲ್ಲಿ ಪುಲ್ವಾಮಾ ಸ್ವಾವಲಂಬಿಯಾಗಿದೆ. ಪ್ರತಿ 2 ಮನೆಗಳಲ್ಲಿ ಒಬ್ಬರು ಪೆನ್ಸಿಲ್- ಸ್ಲೇಟ್ ತಯಾರಿಕೆಯಲ್ಲಿ ನಿಪುಣರಾಗುತ್ತಿದ್ದಾರೆ. ಹೆಚ್ಚಿನ ತೇವಾಂಶ ದಿಂದ, ಮೃದುತ್ವದಿಂದ ಕೂಡಿದ ಕಾಶ್ಮೀರದ ಚಿನಾರ್ ಮರ ಪೆನ್ಸಿಲ್ ತಯಾರಿಕೆಗೆ ಅತಿಸೂಕ್ತವಾಗಿದೆ’ ಎಂದು ಬಣ್ಣಿಸಿದರು.
ಭಾರತದ ಉತ್ಪನ್ನಕ್ಕೆ ಜಗತ್ತು ಫ್ಯಾನ್!
ಸ್ವದೇಶಿ ಖಾದಿ ಸಾಗರೋತ್ತರ ಜನಪ್ರಿಯತೆಗಳಿಸಿದ ಬಗ್ಗೆಯೂ ಮೋದಿ ಬಣ್ಣಿಸಿದರು. “ಯಾವಾಗ ನಾವು ಸ್ವದೇಶಿ ವಸ್ತುಗಳಿಗೆ ಪ್ರಚಾರ ಕೊಟ್ಟೆವೋ, ಜಗತ್ತು ನಮ್ಮ ಉತ್ಪನ್ನಗ ಳಿಗೆ ಅಭಿಮಾನಿಯಾಗುತ್ತಿದೆ. ನಮ್ಮ ಅನೇಕ ಉತ್ಪನ್ನಗಳು ಜಾಗತಿಕ ಗುಣ ಮಟ್ಟ ಹೊಂದಿವೆ. ಅವುಗಳಲ್ಲಿ ಖಾದಿಯೂ ಒಂದು. ಕೇವಲ ನಮ್ಮಲ್ಲಿ ಮಾತ್ರವೇ ಅಲ್ಲ, ಜಗತ್ತಿನ ಹಲವೆಡೆ ಖಾದಿ ಉತ್ಪಾದನೆಯಾಗುತ್ತಿದೆ. ಮೆಕ್ಸಿಕೊದ ಒಕ್ಸಾಕಾದ ಹಲವು ಮಂದಿ ಖಾದಿ ನೇಯುತ್ತಾರೆ. ಅಲ್ಲಿ ಇದು ಓಕ್ಸಾಕಾ ಖಾದಿಯೆಂದೇ ಜನಪ್ರಿಯಗೊ ಳ್ಳುತ್ತಿದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.