MVA; ಶಿವಸೇನೆ-ಯುಬಿಟಿ ಮುಖಂಡನ ಪೋಸ್ಟ್: ಎಂವಿಎ ಯಿಂದ ಹೊರ ನಡೆದ ಎಸ್ ಪಿ
ಬಾಬರಿ ಮಸೀದಿ ಧ್ವಂಸ ಫೋಟೋ ಜತೆಗೆ ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರನ್ನು ಉಲ್ಲೇಖಿಸಿ...
Team Udayavani, Dec 7, 2024, 7:34 PM IST
ಮುಂಬಯಿ: ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಆಪ್ತ ಬಾಬರಿ ಮಸೀದಿ ಧ್ವಂಸ ಮತ್ತು ಸಂಬಂಧಿತ ಪತ್ರಿಕೆಯ ಜಾಹೀರಾತನ್ನು ಶ್ಲಾಘಿಸಿದ ನಂತರ ಸಮಾಜವಾದಿ ಪಕ್ಷವು(SP)ಮಹಾರಾಷ್ಟ್ರದ ಪ್ರತಿಪಕ್ಷ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿಯಿಂದ ಹೊರನಡೆಯುವುದಾಗಿ ಶನಿವಾರ(ಡಿ7) ಘೋಷಣೆ ಮಾಡಿದೆ.
ಸೇನಾ (UBT) MLC ಮಿಲಿಂದ್ ನಾರ್ವೇಕರ್ ಅವರು, ಮಸೀದಿ ಧ್ವಂಸದ ಫೋಟೋ ಜತೆಗೆ ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರನ್ನು ಉಲ್ಲೇಖಿಸಿ, ‘ಇದನ್ನು ಮಾಡಿದವರ ಬಗ್ಗೆ ನನಗೆ ಹೆಮ್ಮೆ ಇದೆ” ಎಂದು ಪೋಸ್ಟ್ ಮಾಡಿದ ಬಳಿಕ ಸಮಾಜವಾದಿ ಪಕ್ಷ ಈ ನಿರ್ಧಾರ ತಳೆದಿದೆ. ಸಮಾಜವಾದಿ ಪಕ್ಷ ಮಹಾರಾಷ್ಟ್ರದಲ್ಲಿ ಇಬ್ಬರು ಶಾಸಕರನ್ನು ಹೊಂದಿದೆ.
“ಬಾಬರಿ ಮಸೀದಿ ಕೆಡವಿದವರನ್ನು ಅಭಿನಂದಿಸಿ ಶಿವಸೇನೆ (ಯುಬಿಟಿ) ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದೆ. ಉದ್ಧವ್ ಠಾಕ್ರೆ ಅವರ ಆಪ್ತ ಕೂಡ ಮಸೀದಿ ಧ್ವಂಸವನ್ನು ಶ್ಲಾಘಿಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ ”ಎಂದು ಮಹಾರಾಷ್ಟ್ರ ಎಸ್‌ಪಿ ಘಟಕದ ಮುಖ್ಯಸ್ಥ ಅಬು ಅಜ್ಮಿ ಆಕ್ರೋಶ ಹೊರ ಹಾಕಿದ್ದಾರೆ.
‘ಶಿವಸೇನೆ – ಯುಬಿಟಿ ಅವರು ಈಗ ಜಾತ್ಯತೀತರಾಗಿದ್ದೇವೆ ಎಂದು ಹೇಳುತ್ತಿದ್ದರು. ಕಾಂಗ್ರೆಸ್, ಎನ್‌ಸಿಪಿ-ಎಸ್‌ಪಿ ಮತ್ತು ಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು, ಅವರು ಮಹಾಯುತಿಯವರು ಮಾಡುವುದನ್ನು ಮಾಡಲು ಪ್ರಾರಂಭಿಸಿದರು. ನಾವೇಕೆ ಅವರೊಂದಿಗೆ ಇರಬೇಕು’ ಎಂದು ಅಜ್ಮಿ ಕಿಡಿ ಕಾರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?
Dense Fog: ದೆಹಲಿ-ಲಖನೌ ಹೆದ್ದಾರಿಯಲ್ಲಿ ಸರಣಿ ಅಪಘಾತ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.