ಉತ್ತರ ಪ್ರದೇಶ : ಮರದಿಂದ ತೂಗುತ್ತಿದ್ದ ಎಸ್ಪಿ ನಾಯಕನ ಶವ ಪತ್ತೆ
Team Udayavani, Jan 31, 2017, 4:30 PM IST
ಗ್ರೇಟರ್ ನೋಯ್ಡಾ : ಸಮಾಜವಾದಿ ಪಕ್ಷದ ನಾಯಕನೋರ್ವನ ಶವವು ಇಲ್ಲಿನ ಸೂರಜ್ಪುರ ಪ್ರದೇಶದಲ್ಲಿ ಮರವೊಂದರಿಂದ ನೇತಾಡುತ್ತಿರುವುದು ಇಂದು ಕಂಡುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿ ಸಂಜಯ್ ನಗರ್ ಎಂಬಾತನ ಕುಟುಂಬದವರು ಮತ್ತು ಬೆಂಬಲಿಗರು ಹೇಳುವ ಪ್ರಕಾರ ಇದು ಕೊಲೆ ಕೃತ್ಯವಾಗಿದೆ.
ಸಂಜಯ್ ನಗರ್ ಈ ಹಿಂದೆ ರಾಜ್ಯ ಸಮಾಜವಾದಿ ಪಕ್ಷದ ಯುವ ಘಟಕದ ಕಾರ್ಯದರ್ಶಿಯಾಗಿದ್ದರು. ತಾನು ಸತ್ತ ಬಳಿಕ ತನ್ನ ಮಕ್ಕಳ ಹೊಣೆಗಾರಿಕೆ ವಹಿಸಿಕೊಳ್ಳುವಂತೆ ಸಂಜಯ್ ನಗರ್ ಹಿರಿಯ ಎಸ್ಪಿ ನಾಯಕರಾಗಿರುವ ರಾಜ್ಕುಮಾರ್ ಭಾಟಿ, ನರೇಂದ್ರ ನಗರ್ ಮತ್ತು ಇತರರನ್ನು ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಎನ್ ಪಿ ಸಿಂಗ್ ಅವರನ್ನು ಕೋರಿ ಬರೆದಿಟ್ಟಿರುವ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿದೆ.
ಮೂರು ದಿನಗಳ ಹಿಂದಷ್ಟೇ ಸಂಜಯ್ ನಗರ್ ಹಲವಾರು ವ್ಯಾಪಾರಿಗಳೊಂದಿಗೆ ಜಗಳವಾಡಿದ್ದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ; ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.