ಇತಿಹಾಸಕಾರರಿಂದ ನಮಗೆ ನ್ಯಾಯ ಸಿಗಲಿಲ್ಲ ;ಕೇಂದ್ರ ಸಚಿವ ಎಸ್.ಪಿ.ಸಿಂಗ್ ಭಾಗೇಲ್
Team Udayavani, Nov 15, 2022, 1:32 PM IST
ಪಣಜಿ: ಇತಿಹಾಸಕಾರರಿಂದ ನಮಗೆ ನ್ಯಾಯ ಸಿಗಲಿಲ್ಲ. ಇಲ್ಲವಾದರೆ ತಾತ್ಯಾಟೋಪಿ ಹಾಗೂ ರಾಣಿ ಲಕ್ಷ್ನೀಭಾಯಿ ಬಹದ್ದೂರ್‍ಶಾ ಜಫರ್ ಇವರ ಹೆಸರನ್ನು ಆ ಕಾಲದ ಜನರು ಕರ್ನಾಟಕದ ಗಡಿಯಿಂದ ಹೊರ ಹೋಗಲು ಬಿಡಲಿಲ್ಲ. ನಮ್ಮ ದೇಶದ ಸಾಧಕರು ಇವರು. ಇವರು ಅಂದು ದಿಟ್ಟ ಹೆಜ್ಜೆಯನ್ನಿಡದಿದ್ದರೆ ಗಾಂಧೀಜಿ ಹಾಗೂ ನೆಹರು ರವರು ಸ್ವಾತಂತ್ರ್ಯ ದೊರಕಿಸಿಕೊಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಕೇಂದ್ರ ಸಚಿವ ಎಸ್.ಪಿ.ಸಿಂಗ್ ಭಾಗೇಲ್ ನುಡಿದರು.
ಶೇಫರ್ಡಸ್ ಇಂಡಿಯಾ ಇಂಟರ್ (ಧನಗರ್ ಸಮಾಜ) ನ್ಯಾಶನಲ್ ವತಿಯಿಂದ ವಾಸ್ಕೊದ ರವೀಂದ್ರ ಭವನದಲ್ಲಿ ಆಯೋಜಿಸಿದ್ದ ವಿಶ್ವ ಚೇತನ ಭಕ್ತ ಕನಕದಾಸರ 535 ನೇಯ ಜಯಂತಿ ಉತ್ಸವ ಹಾಗೂ ಸಮಾಜದ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ5ತಿದ್ದರು.
ನಮ್ಮ ಸಂಖ್ಯೆಗೆ ಅನುಸಾರವಾಗಿ ನಮಗೆ ಯಾವುದೇ ಕ್ಷೇತ್ರದಲ್ಲಿ ಅಥವಾ ಪಕ್ಷದಲ್ಲಿ ನಮಗೆ ಸ್ಥಾನವಿಲ್ಲ ಇದು ನನಗೆ ದುಃಖವಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಧನಗರ ಸಮಾಜದ ಹೆಚ್ಚಿನ ಜನರಿದ್ದಾರೆ. ಇದರಿಂದಾಗಿ ಈ ಎರಡು ರಾಜ್ಯಗಳಲ್ಲಿ ನಮ್ಮವರು ಬೆಂಬಲಿಸಿದ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ದೇಶದಲ್ಲಿ ಶೇಫರ್ಡಸ್ ಕಮ್ಯುನಿಟಿಯ ಹೆಚ್ಚಿನ ಸಂಖ್ಯೆಯಿದ್ದರೂ ನಮಗೆ ಎಲ್ಲ ಕ್ಷೇತ್ರದಲ್ಲಿ ಸ್ಥಾನ ಲಭಿಸಿಲ್ಲ ಎಂದು ಕೇಂದ್ರ ಸಚಿವ ಎಸ್.ಪಿ.ಸಿಂಗ್ ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕರ್ನಾಟಕದ ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ- ಮಹಾರಾಷ್ಟ್ರದಲ್ಲಿ ಧನಗರ್ ಕಮ್ಯುನಿಟಿ ಹೆಚ್ಚಿದೆ. ನಮ್ಮ ಸಂಘಟನೆ ದೇಶದಲ್ಲಿ ಹೆಚ್ಚಾಗಬೇಕು. ಶೇಫರ್ಡಸ್ ಇಂಡಿಯಾ ಇದನ್ನು ನಮ್ಮ ಕರ್ನಾಟಕದ ಮಾಜಿ ಸಚಿವ ಎಚ್.ವಿಶ್ವನಾಥ ರವರು ಆರಂಭಿಸಿದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ರವರು ಕೂಡ ನಮ್ಮ ಕಮ್ಯೂನಿಟಿ ರವರೇ ಆಗಿದ್ದಾರೆ. ಶೆಫರ್ಡಸ್ ಕಮ್ಯೂನಿಟಿ ವತಿಯಿಂದ ದೆಹಲಿಯಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಗೋವಾ ಮಾಜಿ ಉಪಮುಖ್ಯಮಂತ್ರಿ ಬಾಬು ಕವಳೇಕರ್, ಮಹಾರಾಷ್ಟ್ರ ವಿಧಾನಪರಿಷತ್ ಸದಸ್ಯ ರಾಮಶಂಕರ ಶಿಂಧೆ, ಮಹಾರಾಷ್ಟ್ರ ನಿಕಟಪೂರ್ವ ರಾಜ್ಯ ಸಭಾ ಸದಸ್ಯ ವಿಕಾಸ ಮಹಾತ್ಮೆ, ಸಾಗರ ರಾಯ್ಕರ್, ಗೋಪಿಚಂದರ್ ಪಡಲ್ಕರ್, ಧನಗರ ಸಮಾಜದ ಗೋವಾ ಪ್ರಮುಖರಾದ ಸಿದ್ಧಣ್ಣ ಮೇಟಿ, ಶರಣ ಮೇಟಿ ಮತ್ತಿತರರು ಉಪಸ್ಥಿತರಿದ್ದರು, ಶೀಲಾ ಮೇಸ್ತ ಕಾರ್ಯಕ್ರಮ ನಿರೂಪಿಸಿದರು. ಧನಗರ ಸಮಾಜದ ಸಿದ್ಧಣ್ಣ ಮೇಟಿ ವಂದನಾರ್ಪಣೆಗೈದರು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉಧ್ಘಾಟನೆ ನೆರವೇರಿಸಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಂಗೀತ ಶಿಕ್ಷಣ ಬಾಬು ಬೂಸಾರಿ ಮತ್ತು ನೀಲಮ್ ಸಂಗಡಿಗರು ತಮ್ಮ ಗಾಯನದ ಮೂಲಕ ಪ್ರೇಕ್ಷಕರ ಗಮನ ಸೆಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.