ನ್ಯಾ| ಕರ್ಣನ್ ಸುದ್ದಿ ಪ್ರಕಟಿಸಿದ ಮಾಧ್ಯಮಗಳ ವಿರುದ್ಧ ಕಿಡಿ
Team Udayavani, Jul 7, 2017, 3:45 AM IST
ಹೊಸದಿಲ್ಲಿ: ನ್ಯಾ| ಸಿ.ಎಸ್.ಕರ್ಣನ್ ಪ್ರಕರಣದಲ್ಲಿ ಮಾಧ್ಯಮಗಳ ವರ್ತನೆಯನ್ನು ಖಂಡಿಸಿರುವ ಸುಪ್ರೀಂ ಕೋರ್ಟ್, ಈ ವಿಷಯದಲ್ಲಿ “ಮಾಧ್ಯಮಗಳು ಬೇಜವಾಬ್ದಾರಿಯಿಂದ ನಡೆದುಕೊಂಡಿವೆ’ ಎನ್ನುವ ಮೂಲಕ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಭಾರತದ ನ್ಯಾಯಾಂಗ ವ್ಯವಸ್ಥೆಗೆ ಆಗುತ್ತಿರುವ ಹಾನಿ ಗಮನಿಸುವ ಗೋಜಿಗೆ ಹೋಗದ ಮಾಧ್ಯಮಗಳು, ನ್ಯಾ| ಕರ್ಣನ್ ಅಲೆ ಮೇಲೆ ಸವಾರಿ ಮಾಡಿವೆ ಎಂದು ನ್ಯಾಯಾ ಲಯ ಹೇಳಿದೆ. ನ್ಯಾ| ಕರ್ಣನ್ರಿಗೆ ಜೈಲು ಶಿಕ್ಷೆ ತೀರ್ಪಿನ ಪ್ರತಿಯಲ್ಲಿ ಸಿಜೆಐ ಜೆ.ಎಸ್.ಖೇಹರ್ ನೇತೃತ್ವದ 7 ನ್ಯಾಯ ಮೂರ್ತಿಗಳನ್ನೊಳಗೊಂಡ ಪೀಠ, ಭಾರತ ಹಾಗೂ ವಿದೇಶಿ ಮಾಧ್ಯಮಗಳ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾ| ಕರ್ಣನ್ ಅವರ ಅಕ್ರಮ ಆದೇಶಗಳು ಮತ್ತು ಅಸಂಬದ್ಧ ಹೇಳಿಕೆಗಳಿಂದ ಭಾರತದ ನ್ಯಾಯಾಂಗ ವ್ಯವಸ್ಥೆ ನಗೆಪಾಟಲಿ ಗೀಡಾಗಿದೆ. ಇದರೊಂದಿಗೆ ಭಾರತ ಸೇರಿ ಬಿಬಿಸಿ ರೀತಿಯ ಅಂತಾರಾಷ್ಟ್ರೀಯ ಮಾಧ್ಯಮಗಳು ಕರ್ಣನ್ ಹೇಳಿಕೆಗಳು, ಪ್ರಕರಣಕ್ಕೆ ಅಗತ್ಯಕ್ಕಿಂತ ಹೆಚ್ಚು ಪ್ರಚಾರ ನೀಡಿ ನ್ಯಾಯಾಂಗ ವ್ಯವಸ್ಥೆಯನ್ನು ಮುಜುಗರಕ್ಕೀಡುಮಾಡಿವೆ,’ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.