ಮಾತೃಭಾಷೆಯಲ್ಲೇ ಹೆಮ್ಮೆಯಿಂದ ಮಾತಾಡಿ: ಪ್ರಧಾನಿ ಮೋದಿ ಕರೆ
86ನೇ ಮನ್ ಕಿ ಬಾತ್ ಕಾರ್ಯಕ್ರಮ
Team Udayavani, Feb 28, 2022, 7:10 AM IST
ನವದೆಹಲಿ: “ನಿಮ್ಮ ಮಾತೃಭಾಷೆ ಯಾವುದಿದೆಯೋ ಅದರಲ್ಲೇ ಹೆಮ್ಮೆಯಿಂದ ಮಾತನಾಡಿ. ಈ ಬಗ್ಗೆ ಯುವಜನರು ಕೀಳರಿಮೆ ಹೊಂದುವುದು ಬೇಡ’ – ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾನುವಾರ “ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿರುವ ವಿವಿಧ ಭಾಷೆಗಳಲ್ಲಿ ಇರುವ ಹಾಡುಗಳನ್ನು ಹಾಡಿ ವಿಡಿಯೋ ಮಾಡಿ, ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಬೇಕು. ಇಂಥ ಕ್ರಮದ ಮೂಲಕ ಸ್ಥಳೀಯ ಭಾಷೆಗಳ ಜನಪ್ರಿಯತೆಗೆ ನೆರವಾಗಬೇಕು ಎಂದು ಸಲಹೆ ನೀಡಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯಬಂದು 75 ವರ್ಷಗಳು ಪೂರ್ತಿಗೊಂಡರೂ, ಜನರಿಗೆ ತಮ್ಮ ಭಾಷೆ, ಆಹಾರ, ಉಡುಪು, ಪಾನೀಯಗಳ ಬಗ್ಗೆ ಗೊಂದಲ ಮತ್ತು ಕೀಳರಿಮೆ ಇದೆ. ದೇಶದ ಜನರು ವಿಶೇಷವಾಗಿ, ಯುವಜನರು ಕೀಳರಿಮೆ ಬದಿಗಿರಿಸಿ, ಮಾತೃಭಾಷೆಯಲ್ಲಿಯೇ ಮಾತನಾಡಿ ಎಂದು ಸಲಹೆ ನೀಡಿದ್ದಾರೆ ಪ್ರಧಾನಿ ಮೋದಿ.
ಸಂಗೀತ ವ್ಯವಸ್ಥೆಗೆ ಮೆಚ್ಚುಗೆ:
ನಮ್ಮ ದೇಶದ ಸಂಗೀತ ವ್ಯವಸ್ಥೆ ಜಗತ್ತಿನ ಎಲ್ಲರಿಗೂ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದ ಪ್ರಧಾನಿ ಮೋದಿ, ಕೆಲವು ವರ್ಷಗಳ ಹಿಂದೆ ಹಲವು ದೇಶಗಳ ಸಂಗೀತಗಾರರು ಮಹಾತ್ಮಾ ಗಾಂಧಿ ಅವರಿಗೆ ಜನಪ್ರಿಯವಾಗಿರುವ “ವೈಷ್ಣವ ಜನತೋ’ ಹಾಡನನ್ನು ಮನಮುಟ್ಟುವಂತೆ ಹಾಡಿದ್ದೇ ಸೂಕ್ತ ಉದಾಹರಣೆ ಎಂದಿದ್ದಾರೆ.
ಇದನ್ನೂ ಓದಿ:ಜೆಡಿಯು ಅಭ್ಯರ್ಥಿ ಮೇಲೆ ಗುಂಡಿನ ದಾಳಿ : ಚುನಾವಣೆಗೆ ಒಂದು ದಿನ ಇರುವಾಗಲೇ ನಡೆಯಿತು ಘಟನೆ
ತಾಂಜೇನಿಯಾದ ಕಿಲಿ ಪೌಲ್ ಮತ್ತು ನಿಲೀಮಾ ಅವರು ದೇಶದ ಹಾಡುಗಳಿಗೆ ಲಿಪ್‌ಸಿಂಕ್ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ನಮ್ಮ ದೇಶದ ಮಕ್ಕಳೂ ವಿವಿಧ ರಾಜ್ಯಗಳ ಹಾಡುಗಳಿಗೆ ಲಿಪ್ ಸಿಂಕ್ ಮಾಡಲಿ ಎಂದೂ ಮೋದಿ ಹೇಳಿದ್ದಾರೆ.
ಇದೇ ವೇಳೆ, ದೇಶದಲ್ಲಿ ತ್ರಿವಳಿ ತಲಾಖ್ ಕಾನೂನು ಜಾರಿಯಾದ ಬಳಿಕ ಇಂಥ ಪ್ರಕರಣಗಳ ಸಂಖ್ಯೆ ಶೇ.80ರಷ್ಟು ಇಳಿಮುಖವಾಗಿದೆ ಎಂದೂ ಅವರು ಹೇಳಿದ್ದಾರೆ.
ಅಮೂಲ್ಯ ವಸ್ತುಗಳು ದೇಶಕ್ಕೆ:
ದೇಶದಿಂದ ಹಿಂದಿನ ಹಲವು ವರ್ಷಗಳ ಅವಧಿಯಲ್ಲಿ ಕಳವಾಗಿದ್ದ ಅಮೂಲ್ಯ ವಸ್ತುಗಳನ್ನು ಮತ್ತೆ ವಾಪಸ್ ತರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 2013ರ ವರೆಗೆ ಕೇವಲ 13 ಪ್ರಾಚೀನ ಕಾಲದ ಅಮೂಲ್ಯ ವಿಗ್ರಹಗಳನ್ನು ಕಳವು ಮಾಡಲಾಗಿತ್ತು. ಆದರೆ, ಕಳೆದ ಏಳು ವರ್ಷಗಳ ಅವಧಿಯಲ್ಲಿ 200ಕ್ಕೂ ಅಧಿಕ ಪ್ರಾಚೀನ ವಿಗ್ರಹ ಮತ್ತು ಇತಿಹಾಸದ ಅಮೂಲ್ಯ ವಸ್ತುಗಳನ್ನು ದೇಶಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.