ಹತ್ತು ಹೆಜ್ಜೆ ಹಾಕುವಷ್ಟರಲ್ಲೇ ಬೆವರಿಳಿಸುತ್ತದೆ ಲೇಹ್‌ ವಾಯುನೆಲೆ!

ಅನುಭವ

Team Udayavani, Jul 6, 2020, 6:29 AM IST

ಹತ್ತು ಹೆಜ್ಜೆ ಹಾಕುವಷ್ಟರಲ್ಲೇ ಬೆವರಿಳಿಸುತ್ತದೆ ಲೇಹ್‌ ವಾಯುನೆಲೆ!

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಲೇಹ್‌ ವಾಯುನೆಲೆಯಲ್ಲಿ AN-32 ವಿಮಾನದಲ್ಲಿ ಲ್ಯಾಂಡಿಂಗ್‌ ಮಾಡಿದಾಗ ನನಗೆ ಇನ್ನೂ 32 ವರ್ಷ. ಆದರೂ ವಿಮಾನದಿಂದ ಇಳಿದು ಇಪ್ಪತ್ತು ಹೆಜ್ಜೆ ನಡೆಯುವುದರಲ್ಲಿ ಏದುಸಿರು ಶುರುವಾಯಿತು. ಆದರೆ 69 ವರ್ಷದ ನರೇಂದ್ರ ಮೋದಿಯವರು ಸುಮಾರು ಐದು ಗಂಟೆಗಳ ಕಾಲ ಸೈನಿಕರ ನಡುವೆ ಕಾಲ ಕಳೆಯುತ್ತಾರೆ. ಅಲ್ಲದೇ ಸುಮಾರು 25 ನಿಮಿಷಗಳ ಭಾಷಣದಲ್ಲೂ high altitude symptoms ಅವರಲ್ಲಿ ಕಾಣಿಸುವುದೇ ಇಲ್ಲ.

90ರ ದಶಕದ ಪ್ರಾರಂಭದಲ್ಲಿ ನನಗೆ ಅಸ್ಸಾಮಿನ ಜೋರ್ಹಾಟ್‌ ವಾಯುನೆಲೆಯಿಂದ ಆಗ್ರಾದ ಪ್ಯಾರಾಟ್ರೂಪರ್‌ ಟ್ರೈನಿಂಗ್‌ ಘಟಕಕ್ಕೆ ವರ್ಗಾವಣೆಯಾಯಿತು. ಆಗ ನಾನು AN-32 ಎನ್ನುವ ಮಧ್ಯಮ ಶ್ರೇಣಿಯ ವಿಮಾನವನ್ನು ಹಾರಿಸುತ್ತಿದ್ದೆ.

ಭಾರತದ ಈಶಾನ್ಯ ಪ್ರದೇಶಗಳಿಗೆ ಈ ವಿಮಾನ ಹೇಳಿಮಾಡಿಸಿದ್ದು ಎನ್ನಬಹುದು. ಅದರ ಗಾತ್ರಕ್ಕೆ ಹೆಚ್ಚೇ ಎನ್ನುವ ಅಗಾಧ ಎಂಜಿನ್‌ ಸಾಮರ್ಥ್ಯವಿರುತ್ತದೆ. ಒಂದು ಎಂಜಿನ್‌ ನಿಷ್ಕ್ರಿಯವಾದರೂ ಉಳಿದ ಎಂಜಿ­ನ್ನಿನ ಸಹಾಯದಿಂದ ಯಾವ ಕಣಿವೆಯನ್ನು ಬೇಕಾದರೂ ಪ್ರವೇಶಿಸಿ ಹೊರಬರುವ ಆತ್ಮವಿಶ್ವಾಸವಿತ್ತು ಪ್ರತಿಯೊಬ್ಬ ಪೈಲಟ್ಟಿಗೆ.

ಅರುಣಾಚಲ ಪ್ರದೇಶದಲ್ಲಿ ಆಗ ಇನ್ನೂ ರಸ್ತೆಗಳ ನಿರ್ಮಾಣ ಪ್ರಾರಂಭವಾಗಿತ್ತು. ಅಲ್ಲಿನ ನಾಗರಿಕರಿಗೆ ಮತ್ತು ಸೈನ್ಯಕ್ಕೆ ಈ ವಿಮಾನಗಳೇ ಮುಖ್ಯ ಸಂಪರ್ಕ ಸಾಧನ. ಅಲ್ಲಿನ ಮೂಲೆ ಮೂಲೆಯಲ್ಲಿರುವ Dropping Zone (DZ) ಗಳಲ್ಲಿ ಸಾಮಾನು ಸರಂಜಾಮುಗಳನ್ನು ಕಟ್ಟಿದ ಮರದ ಹಲಗೆಗಳನ್ನು ವಿಮಾನದಿಂದ ಜಾರಿಸಿಬಿಟ್ಟರೆ ಪ್ಯಾರಾಚೂಟುಗಳ ಸಹಾಯ­ದಿಂದ  ನಿಧಾನಕ್ಕೆ ಕೆಳಗಿಳಿದು ಈಘ ತಲುಪುತ್ತಿದ್ದವು. ಅರುಣಾಚಲ ಪ್ರದೇಶದ ಉದ್ದಗಲಕ್ಕೂ ಸುಮಾರು ಇಪ್ಪತ್ತರಷ್ಟು DZಗಳಿರುತ್ತಿದ್ದವು.

ಇನ್ನು ಮೂರು ಕಡೆ ಗುಡ್ಡದ ಮೇಲ್ಭಾಗವನ್ನು ಸಮತಲ­ಗೊಳಿಸಿ ಅದರ ಮೇಲೆ ತೂತುಗಳಿರುವ ಉಕ್ಕಿನ ಉದ್ದನೆಯ ಹಲಗೆಗಳನ್ನು ಭದ್ರವಾಗಿ ಕೂರಿಸಿಟ್ಟು ಒಂದು ಹಂಗಾಮಿ ರನ್‌ ವೇಯನ್ನು ನಿರ್ಮಿಸಲಾ­ಗುತ್ತಿತ್ತು.

ಇವುಗಳನ್ನು Advance Landing Ground (ALG) ಎನ್ನುತ್ತಾರೆ. ಒಂದು ಕಿಲೋಮೀಟರ್‌ಗಿಂತಲೂ ಕಡಿಮೆ ಇದ್ದ ಈ ಪಟ್ಟಿಗಳ ಮೇಲೆ ಲ್ಯಾಂಡ್‌ ಮಾಡಬೇಕಿತ್ತು. ಇಂತಹ ರೋಮಾಂಚಕ ಅನುಭವಗಳ ನಡುವೆಯೇ ಶ್ರೀಲಂಕಾದ ಕಾರ್ಯಾಚರಣೆ “ಆಪರೇಷನ್‌ ಪವನ್‌’ ಎನ್ನುವ ಹೆಸರಲ್ಲಿ ಮಾಲ್ಡೀವ್ಸ್ ದೇಶದ ಬಿಕ್ಕಟ್ಟಿನ ಪರಿಹಾರ ಕಾರ್ಯಕ್ರಮ “ಆಪರೇಶನ್‌ ಕ್ಯಾಕ್ಟಸ್‌’ನಲ್ಲಿ ಭಾಗವಹಿಸಿ ಅಸ್ಸಾಮಿಗೆ ಮರಳು­ವಷ್ಟರಲ್ಲಿ ನನಗೆ ಆಗ್ರಾಕ್ಕೆ ವರ್ಗಾವಣೆಯ ಆದೇಶ ಬಂತು.

ಆಗ್ರಾ ವಾಯುಸೇನೆಯ ಒಂದು ಅಗ್ರ ನೆಲೆ. ಇಲ್ಲಿ ಎಲ್ಲಾ ಘಟಕಗಳೂ ಇದ್ದವು. ಹಾಗಾಗಿ ಆಗ್ರಾದಲ್ಲಿ ಇನ್ನೂ ವಿನೂತನ ಅನುಭವಗಳ ಸರಮಾಲೆಯೇ ಕಾದಿತ್ತು. ನಮ್ಮ ಅಲ್ಲಿನ ಘಟಕದ ಮುಖ್ಯ ಚಟುವಟಿಕೆಗಳು ಅಂದರೆ ಪ್ಯಾರಾ ಕಮಾಂಡೋಗಳ ತರಬೇತಿ ಮತ್ತು ವಿವಿಧ ರೀತಿಯಲ್ಲಿ ಕಾರ್ಯಾಚರಣೆಯ ಸಿದ್ಧತೆ.

ಮರಳುಗಾಡಿನ ಕತ್ತಲ ರಾತ್ರಿಯಲ್ಲಿ ಪರ್ವತಗಳ ನಡುವಿನ ಕಣಿವೆಗಳಲ್ಲಿ ಈ ಕಮಾಂಡೋ ಪಡೆಗಳನ್ನು ವಿಮಾನದಿಂದ ಡ್ರಾಪ್‌ ಮಾಡುವುದು ಮುಖ್ಯ ಕಾರ್ಯಾಚರಣೆ! ಕೆಲವು ಸಲ ಈ ಕಾರ್ಯಾಚರಣೆಗಳು ದೊಡ್ಡ ಗಾತ್ರದಲ್ಲಿ ನಡೆಯುತ್ತಿದ್ದವು.

ಒಂಬತ್ತರಿಂದ ಹನ್ನೆರಡು ವಿಮಾನಗಳು ಒಂದು ವಿಶಿಷ್ಟ ರಚನೆಯಲ್ಲಿ ಒಂದಕ್ಕೊಂದು ಅಂಟಿಕೊಂಡಂತೆ ಹಾರಿಸಬೇಕು ಗಣರಾಜ್ಯೋತ್ಸವದ ಪರೇಡಿನಲ್ಲಿ ನೋಡುತ್ತೀರಲ್ಲಾ ಹಾಗೆ. ನಿರ್ದಿಷ್ಟ DZ ಬಂದಾಗ ಮೊದಲು ಪ್ಯಾರಾಚೂಟುಗಳನ್ನು ಕಟ್ಟಿದ ಜೀಪುಗಳನ್ನು ಜಾರಿಸಲಾಗುತ್ತದೆ. ಅದರ ಹಿಂದೆಯೇ ಪ್ಯಾರಾ ಕಮಾಂಡೋಗಳು ವಿಮಾನಗಳಿಂದ ಹಾರುತ್ತಾರೆ. ಕೆಲವು ಸಲ ದೊಡ್ಡ ಗಾತ್ರದ ವಿಮಾನಗಳಿಂದ ಯುದ್ಧ ಟ್ಯಾಂಕುಗಳನ್ನೂ ಡ್ರಾಪ್‌ ಮಾಡಲಾಗುತ್ತದೆ.

ಲಡಾಖ್‌ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಅವಕಾಶ: ಕೆಲವೇ ದಿನಗಳಲ್ಲಿ ಲಡಾಖಿನ ವಲಯದಲ್ಲಿ ಇಂತಹದೊಂದು ಮಹತ್ತರವಾದ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಅವಕಾಶ ದೊರಕಿತು. ಸುಮಾರು 250 ಪ್ಯಾರಾ ಕಮಾಂಡೋಗಳನ್ನು ಲಡಾಖಿನ ಸ್ಟಾಕ್ನಾ ಎನ್ನುವ DZ ನಲ್ಲಿ ಡ್ರಾಪ್‌ ಮಾಡಬೇಕು.

ಸಮುದ್ರ ಮಟ್ಟದಿಂದ ಸುಮಾರು 11000 ಅಡಿಗಳಷ್ಟು ಎತ್ತರದ ಈ ಕಣಿವೆಯಲ್ಲಿ ಸುಮಾರು ಅರ್ಧ ಕಿಮೀನಷ್ಟು ಸಮತಲ ಪ್ರದೇಶದಲ್ಲಿ ಡ್ರಾಪ್‌ ಮಾಡಲು ಒಂಬತ್ತು ವಿಮಾನಗಳ ತಂಡವೊಂದನ್ನು ಸಿದ್ಧಗೊಳಿಸಲಾಯಿತು. ನಿರ್ದಿಷ್ಟ ದಿನದಂದು ಎಲ್ಲಾ ವಿಮಾನಗಳು ಚಂಡೀಗಢ‌ದ ವಾಯುನೆಲೆಯಲ್ಲಿ ಬಂದಿಳಿದವು. ನಾವು ಅಸ್ಸಾಮಿನಿಂದ ಬಂದ ಪೈಲಟ್ ಗಳಿಗೆಲ್ಲ ಈ ವಲಯ ಅಪರಿಚಿತ. ಹಾಗಾಗಿ ನಮಗೆ ಮೂರು ದಿನಗಳಲ್ಲಿ ವಿಶೇಷ ತರಬೇತಿಯನ್ನು ನಿಯೋಜಿಸಿದ್ದರು.

ಪ್ಯಾರಾಚೂಟುಗಳೇ ಅವರಿಗೆ ಛತ್ರಿ ಮಾತಾ: ಬೆಳಗ್ಗೆ ಐದುವರೆಗೆ ಗಂಟೆಗೆ ಚಂಡೀಗಢದಿಂದ ಹೊರಟು ಬಲಗಡೆ ಯಿಂದ ಉದಯಿಸುತ್ತಿರುವ ಸೂರ್ಯನ ಕಿರಣಗಳು ಕಾಣಿಸಿಕೊಳ್ಳುತ್ತಿದ್ದಂತೆ AN-32 ವಿಮಾನಗಳು ಉತ್ತರಾಭಿಮುಖವಾಗಿ ಸೋ ಮೊರಾರಿ ಕಾರ್‌ ಸೋ ಖರ್ದುಂಗ್ಲಾದ ಮೇಲೆ ಹಾರಿಕೊಂಡು ಸುಮಾರು ಆರು ಗಂಟೆಯಷ್ಟೊತ್ತಿಗೆ ಸ್ಟಾಕ್ನಾ ಕಣಿವೆಯ ಮೇಲೆ ಬಂದು ತಲುಪುತ್ತಿದ್ದವು.

ಈಘ ಇದ್ದದ್ದು ಸಿಂಧೂನದಿ ಮತ್ತು ಕಡಿದಾದ ಪರ್ವತ ಶಿಖರಗಳ ನಡುವೆ. ನದಿಯ ಪಕ್ಕದಲ್ಲಿರುವ ಒಂದು ಗುಡ್ಡದ ಮೇಲೆ ಎದ್ದು ಕಾಣುವ ಬೌದ್ಧ ಮಠ. ಅಲ್ಲಿಂದ ನಮ್ಮ Formation flying ತರಬೇತಿ ಪ್ರಾರಂಭ. ಕಣಿವೆಯಲ್ಲಿ ಗಾಳಿ ಜೋರಾಗಿ ಯದ್ವಾತದ್ವಾ ಬೀಸುತ್ತಿರುತ್ತದೆ. ವಿಮಾನದ ನಿಯಂತ್ರಣ ಅಷ್ಟು ಸುಲಭದ ಮಾತಲ್ಲ ಅದೂ ಆಕ್ಸಿಜನ್‌ ಮಾಸ್ಕ್ ಕಟ್ಟಿಕೊಂಡು ಮುಂದಿನ ವಿಮಾನಕ್ಕೆ ಅಂಟಿಕೊಂಡಂತೇ ಇರಬೇಕು. ಅಷ್ಟರಲ್ಲೇ ಫ್ಲೈಟ್‌ ಎಂಜಿನಿಯರ್‌ ವಿಮಾನದ ramp ತೆರೆದು ವಿಮಾನದ ಹೊಟ್ಟೆಯ ಕೆಳಗೆ ಸರಿಸಿಬಿಡುತ್ತಾರೆ. ನಿಯಂತ್ರಣ ಇನ್ನೂ ಕಠಿಣ.

ಎರಡು ಲೈನಿನಲ್ಲಿ ಪ್ಯಾರಾ ಕಮಾಂಡೋಗಳು ಎದ್ದು ನಿಂತು ವಿಮಾನದಿಂದ ಜಿಗಿಯಲು ಸಿದ್ಧರಾಗಿರುತ್ತಾರೆ. ನ್ಯಾವಿಗೇಟರಿಗೆ ದೂರದಿಂದಲೇ DZ ಮೇಲಿನ ಹಲಗೆಯ ‘T’ ಕಾಣಿಸಿದ ಕೂಡಲೇ ‘Action Stations’ ಎಂದು ಬೂಮ್‌ ಮೈಕಿನಲ್ಲಿ ಗರ್ಜಿಸುತ್ತಾರೆ. ಕೂಡಲೇ Jump Master ಕೂಡಾ ಕಮಾಂಡೋಗಳಿಗೆ ಇನ್ನೇನು ತಯಾರಾಗಿರಿ ಎಂದು ಎಚ್ಚರಿಸುತ್ತಾರೆ. ಕಮಾಂಡೋಗಳು ಒಮ್ಮೆಲೇ ಜೋಷ್‌ ಬಂದು ‘ಛತ್ರಿ ಮಾತಾ ಕೀ ಜೈ’ ಎಂದು ಕೂಗುತ್ತಾ ಆದೇಶ ಬಂದ ಕೂಡಲೇ ವಿಮಾನದಿಂದ ಜಿಗಿದುಬಿಡುತ್ತಾರೆ.

ಪ್ಯಾರಾಚೂಟುಗಳೇ ಅವರಿಗೆ ಛತ್ರಿ ಮಾತಾ. 25 ಸೆಕೆಂಡುಗಳಲ್ಲಿ 22 ಪ್ಯಾರಾ ಕಮಾಂಡೋಗಳ ಜಿಗಿತ ಮುಗಿದು ಬಿಡಬೇಕು ಇಲ್ಲಾಂದರೆ ವಿಮಾನ DZ ನಿಂದ ದೂರ ಹಾರಿರುತ್ತದೆ. ನ್ಯಾವಿಗೇಟರ್‌ ಎಲ್ಲಾ ಕಮಾಂಡೋಗಳು DZ ಮೇಲೆ ಇದ್ದಾರೆ ಎಂದು ಖಚಿತಪಡಿಸಿದ ಮೇಲೆ ವಿಮಾನಗಳು ಒಂದೊಂದಾಗಿ ಬೇರೆಯಾಗುತ್ತವೆ.

ಲೇಹ್‌ ವಾಯುಸೇನೆಯ ನೆಲೆಯಲ್ಲಿ: ಇನ್ನು ಲೇಹ್‌ ವಾಯುಸೇನೆಯ ನೆಲೆ ಅಲ್ಲಿಂದ ಮೂರು ನಾಲ್ಕು ನಿಮಿಷಗಳ ದೂರ. ಇಲ್ಲಿಗೆ ಬಂದ ಹೊಸ ಪೈಲಟ್ಟುಗಳಿಗೆ ಇನ್ನೊಂದಿಷ್ಟು ತರಬೇತಿ. ಟೇಕಾಫ್ ಆಗುತ್ತಿದ್ದಂತೆ ಒಂದು ಎಂಜಿನ್‌ ಆಫ್ ಆದರೆ ಹೇಗೆ ನಿಭಾಯಿಸಬೇಕು ಎನ್ನುವುದರ ಪರಿಚಯ ಯಾವ ಕಣಿವೆ ತುರ್ತು ಸಮಯದಲ್ಲಿ ಸುರಕ್ಷಿತ ನಿರ್ಗಮನಕ್ಕೆ ಸೂಕ್ತ ಎನ್ನುವ ತರಬೇತಿ.

ಇದನ್ನೆಲ್ಲಾ ಮುಗಿಸಿಕೊಂಡು ಲೇಹ್‌ ಏರ್ಪೋಟಿನಲ್ಲಿ ಲ್ಯಾಂಡ್‌ ಮಾಡುವಷ್ಟೊತ್ತಿಗೆ ಬೆವರಿಳಿದು ಹೋಗುತ್ತಿತ್ತು. ಮೂರು ವಿಮಾನಗಳನ್ನು ಒಂದರ ಹಿಂದೆ ಒಂದು ನಿಲ್ಲಿಸಿ ಹಿಂದಿನ ಎರಡು ವಿಮಾನಗಳ ಎಂಜಿನ್‌ ಅಷ್ಟೇ ಆಫ್ ಮಾಡಬೇಕು ಮೊದಲಿನ ವಿಮಾನದ ಎಂಜಿನ್‌ ನಡೆಯುತ್ತಲೇ ಇರಬೇಕು ಏಕೆಂದರೆ ಈ ಎತ್ತರದ ಏರ್ಪೋಟಿನಲ್ಲಿ ಆಕ್ಸಿಜನ್‌ ಸಾಂದ್ರತೆ ಕಡಿಮೆ ಇರುವುದರಿಂದ ಪುನಃ ಎಂಜಿನ್‌ ಸ್ಟಾರ್ಟ್‌ ಮಾಡುವಾಗ ಮೊದಲ ವಿಮಾನದಿಂದ ಬರುವ ಪ್ರೊಪೆಲ್ಲರ್‌ ಗಾಳಿ ಬೇಕಾಗುತ್ತದೆ. ಇದು ಅನುಭವದಿಂದ ಪೈಲಟ್ಟುಗಳೇ ಕಂಡುಹಿಡಿದ ಜುಗಾಡ್‌!

ವಿಮಾನದಿಂದ ಇಳಿದು ಪೈಲಟ್‌ ಲಾಂಜಿಗೆ ಹೋಗಿ ಲಡಾಖಿನ ಚಹಾ ಕುಡಿಯುವ ಅವಸರದಲ್ಲಿ ಹತ್ತು ಹೆಜ್ಜೆ ಹಾಕುತ್ತಿದ್ದಂತೆ ಏದುಸಿರು ಪ್ರಾರಂಭವಾದಾಗಲೇ ಅರಿವಾಗುತ್ತದೆ “ಓಹ್‌ ನಾವು ಪ್ರಪಂಚದ ಅತಿ ಎತ್ತರದ ಏರ್ಪೋಟೊಂದರಲ್ಲಿದ್ದೇವೆ ಎಂದು.

ಲೇಹ್‌ ವಾಯುನೆಲೆಯಲ್ಲಿ AN-32 ವಿಮಾನದಲ್ಲಿ ಲ್ಯಾಂಡಿಂಗ್‌ ಮಾಡಿದಾಗ ನನಗೆ ಇನ್ನೂ 32 ವರ್ಷ. ಅಷ್ಟೊತ್ತಿಗಾಗಲೇ ಅರುಣಾಚಲ ಪ್ರದೇಶದಲ್ಲಿ ಎತ್ತರದ ಹಂಗಾಮಿ ನೆಲೆದಾಣಗಳಲ್ಲಿ  ಶ್ರೀಲಂಕಾದ ಅತೀ ಸಣ್ಣ ವಾಯುನೆಲೆಗಳಲ್ಲಿ ಮಾಲ್ಡೀವ್ಸ್ ಬಾಂಗ್ಲಾದೇಶದ ಅಸುರಕ್ಷಿತ ರನ್‌ವೇಗಳಲ್ಲಿ ಲ್ಯಾಂಡಿಂಗ್‌ ಮಾಡಿದ ಅನುಭವ ಇತ್ತು.

ಅದೇ ಒಂದು ಕುರುಡು ವಿಶ್ವಾಸದಿಂದ ಲೇಹ್‌ ವಾಯುನೆಲೆಯಲ್ಲಿ ಲ್ಯಾಂಡಿಂಗ್‌ ಮಾಡಿದೆ. ನಾನು ಒಂದು ಸಿಗರೇಟ್‌ ಸೇದಿದವನಲ್ಲಾ ಆಲ್ಕೋಹಾಲಿನಿಂದ ದೂರವೇ ಉಳಿದವನು..(ಅಲ್ಲೀವರೆಗೆ..!) ಆದರೂ ವಿಮಾನ­ದಿಂದ ಇಳಿದು ಇಪ್ಪತ್ತು ಹೆಜ್ಜೆ ನಡೆಯುವುದರಲ್ಲಿ ಏದುಸಿರು ಶುರುವಾಯಿತು. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯ ಬೇಕು ಎನ್ನುವ ಅರಿವಾಗತೊಡಗಿತು.

ಆದರೆ ಇವತ್ತು ನೋಡಿ 69 ವರ್ಷಗಳ ನರೇಂದ್ರ ಮೋದಿಯವರು ಸುಮಾರು ಐದು ಗಂಟೆಗಳ ಕಾಲ ಸೈನಿಕರ ನಡುವೆ ಕಾಲ ಕಳೆಯುತ್ತಾರೆ. ಸುಮಾರು 25 ನಿಮಿಷಗಳ ಭಾಷಣದಲ್ಲಿ high attitude symptoms ಕಾಣಿಸುವುದೇ ಇಲ್ಲ. ಇದು ವೈದ್ಯಕೀಯ ಸಿಬ್ಬಂದಿಗೂ ಆಶ್ಚರ್ಯವಾಗುವಂಥ ವಿಷಯ.

– ವಿಂಗ್‌ ಕಮಾಂಡರ್‌ ಸುದರ್ಶನ

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!

Uddav-2

Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್‌ ಶಿವಸೇನೆ ಇಂಗಿತ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.