ಅರುಣಾಚಲ ಪ್ರದೇಶದಲ್ಲಿ ಮಕ್ಕಳ ವಿಶೇಷ ಗ್ರಂಥಾಲಯ!
Team Udayavani, May 14, 2022, 6:55 AM IST
ಗುವಾಹಾಟಿ: ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯಲ್ಲಿನ ಮಿಯಾವೊದಲ್ಲಿ ಮಕ್ಕಳಿಗಾಗಿ ವಿಶೇಷ ಗ್ರಂಥಾಲಯ ವೊಂದನ್ನು ನಿರ್ಮಿಸಲಾಗಿದೆ. ಅದಕ್ಕೆ ಐಎಎಸ್ ಅಧಿಕಾರಿ ಸನ್ನಿ ಕೆ.ಸಿಂಗ್‌ರನ್ನು ಸಹಾಯಕ ಆಯುಕ್ತರನ್ನಾಗಿ ನೇಮಿಸಲಾಗಿದೆ. ಇದಕ್ಕೆ ನ್ಯೂ ಏಜ್ ಲರ್ನಿಂಗ್ ಸೆಂಟರ್ (ನಾಲ್ಕ್) ಎಂದೇ ಹೆಸರಿಡಲಾಗಿದೆ.
ಈಗಿನ ಯುವಕರಲ್ಲಿ ಓದುವ ಅಭಿರುಚಿಯೇ ಕುಗ್ಗುತ್ತಿದೆ. ಗ್ರಂಥಾಲಯಗಳು ಅನಗತ್ಯವೆನಿಸುತ್ತಿವೆ. ಎಲ್ಲರೂ ಇ-ಬುಕ್‌ಗಳಿಗೆ ಅಂಟಿಕೊಂಡಿರುವ ಈ ಹೊತ್ತಿನಲ್ಲಿ ಇಂತಹದ್ದೊಂದು ಸುಂದರ ಗ್ರಂಥಾಲಯವನ್ನು ನಿರ್ಮಿಸಬೇಕೆನ್ನುವ ಉದ್ದೇಶ ಇಲ್ಲಿದೆ ಎಂದು ಸನ್ನಿ ಸಿಂಗ್ ಹೇಳಿದ್ದಾರೆ.
ವಿಶೇಷವೇನು ಗೊತ್ತಾ?: ಇದು ಮಾಮೂಲಿ ಸರಕಾರಿ ಗ್ರಂಥಾಲಯ ಅಥವಾ ಕಟ್ಟಡಗಳಂತೆ ಇಲ್ಲವೇ ಇಲ್ಲ. ಸುಂದರವಾದ ಬುಕ್‌ಶೆಲ್ಫ್ಗಳಿವೆ. ಅಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಹಿಡಿದು ಎಲ್ಲ ತರಹದ ಪುಸ್ತಕಗಳೂ ಇವೆ. ಜೋಕಾಲಿಯಲ್ಲಿ ಕೂತೂ ಓದಬಹುದು, ಮೆತ್ತನೆಯ ಸೋಫಾ, ಕುಶನ್‌ಗಳನ್ನೂ ಬಳಸಬಹುದು.
ಹವಾನಿಯಂತ್ರಕ ವ್ಯವಸ್ಥೆಯಿದೆ. ಬಿಸಿಲಿನ ಝಳ, ಚಳಿಯರಗಳೆಯಿಲ್ಲದೇ ಕುಳಿತುಕೊಳ್ಳಬಹುದು. ಅಷ್ಟು ಮಾತ್ರವಲ್ಲ ವೈಫೈ ಕೂಡ ಇದೆ. ಯಾರಿಗಾದರೂ ಇ-ಬುಕ್ ಬೇಕೆಂದರೆ ಅದನ್ನೂ ಓದಿಕೊಳ್ಳಲಿ ಎಂಬ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.