ರಾಮ ನಾಮ ಬ್ಯಾಂಕ್ ‘ಬೋನಸ್’ ಘೋಷಣೆ
Team Udayavani, Nov 18, 2019, 7:27 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಲಕ್ನೋ: ಅಯೋಧ್ಯೆಯು ರಾಮನದ್ದೇ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಲಕ್ನೋದ ರಾಮ್ ನಾಮ್ ಬ್ಯಾಂಕ್ ತನ್ನ ಖಾತೆದಾರರಿಗೆ ಸಿಹಿಸುದ್ದಿ ನೀಡಿದೆ. ತೀರ್ಪು ಹಿನ್ನೆಲೆಯಲ್ಲಿ ಖಾತೆದಾರರಿಗೆ ವಿಶೇಷ ಬೋನಸ್ ನೀಡುವುದಾಗಿ ಘೋಷಿಸಿದೆ.
ಈ ಬ್ಯಾಂಕ್‌ನಲ್ಲಿ ಹಣದ ವ್ಯವಹಾರ ನಡೆಯುವುದಿಲ್ಲ. ಇಲ್ಲಿ ಏನಿದ್ದರೂ ರಾಮ ನಾಮವಷ್ಟೇ.
ಶ್ರೀರಾಮನ ಹೆಸರನ್ನು ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಬರೆದು, ಆ ಪುಸ್ತಿಕೆಗಳನ್ನು ಈ ಬ್ಯಾಂಕ್‌ನಲ್ಲಿ ಠೇವಣಿ ರೂಪದಲ್ಲಿ ಇಡಲಾಗುತ್ತದೆ. ಅದರಂತೆ, ನ.9 ಮತ್ತು 10ರ ನಡುವಿನ ರಾತ್ರಿ ಯಾರೆಲ್ಲ ಕನಿಷ್ಠ 1.25 ಲಕ್ಷ ಬಾರಿ ರಾಮನ ಹೆಸರು ಬರೆದಿದ್ದಾರೋ, ಅವರಿಗೆ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಬ್ಯಾಂಕ್‌ನ ಸರ್ಟಿಫಿಕೇಟ್, ಶಾಲು ಮತ್ತು ಶ್ರೀಫಲವನ್ನು ನೀಡಿ ಸನ್ಮಾನಿಸಲಾಗುತ್ತದೆ. ಜತೆಗೆ, ಅವರು ಬರೆದಿರುವ ರಾಮನಾಮವನ್ನು ದುಪ್ಪಟ್ಟು ಎಂದು ಪರಿಗಣಿಸಲಾಗುತ್ತದೆ.
ಅಂದರೆ, 1 ಲಕ್ಷ ಬಾರಿ ಬರೆದಿದ್ದರೆ, ಅದನ್ನು 2 ಲಕ್ಷ ಎಂದು ಪರಿಗಣಿಸಲಾಗುತ್ತದೆ ಎಂದು ಬ್ಯಾಂಕ್ ಹೇಳಿದೆ. ಈ ನಡುವೆ, ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ನಾವು ಯಾರಿಂದಲೂ ಹಣ ಸಂಗ್ರಹಿಸುತ್ತಿಲ್ಲ. ನಮ್ಮ ಹೆಸರು ಹೇಳಿಕೊಂಡು ಹಣ ಕೇಳಲು ಬಂದರೆ, ಕೊಟ್ಟು ಬಿಡಬೇಡಿ ಎಂದು ಜನರಿಗೆ ವಿಹಿಂಪ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.