02.02.2020: 900 ವರ್ಷಗಳ ಅಚ್ಚರಿ : ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಓದಿದರೂ ಒಂದೇ ಅರ್ಥ
Team Udayavani, Feb 3, 2020, 10:21 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: 02-02-2020; ಈ ದಿನಾಂಕ ಅತ್ಯಂತ ಅಪರೂಪವಾದದ್ದು. ರವಿವಾರದ ಈ ದಿನಾಂಕ ಜಾಲತಾಣಗಳಲ್ಲೂ ಪ್ರಚಾರ ಪಡೆದಿದೆ. 900 ವರ್ಷಗಳಲ್ಲಿಯೇ ಮೊದಲ ಬಾರಿಗೆ ಇಂಥ ದಿನಾಂಕ ಬಂದಿದೆ. ಈ ರೀತಿಯ ಪದ ಪುಂಜಗಳನ್ನು ಇಂಗ್ಲಿಷ್‌ನಲ್ಲಿ ‘ಪ್ಯಾಲಿಂಡ್ರೋಮ್’ (Palindrome) ಎಂದು ಕರೆಯಲಾಗುತ್ತದೆ. ಶಬ್ದವನ್ನು ಎಡದಿಂದ ಬಲಕ್ಕೆ ಅಥವಾ ಬಲದಿಂದ ಎಡಕ್ಕೆ ಓದಿದರೂ ಒಂದೇ ಅರ್ಥ ಬರುವ ಪದಗಳಿಗೆ ಇಂಥ ಹೆಸರು ನೀಡಲಾಗಿದೆ ಎಂದು ಆಕ್ಸ್‌ಫರ್ಡ್ ಡಿಕ್ಷನರಿಯಲ್ಲಿ ಉಲ್ಲೇಖೀಸಲಾಗಿದೆ. ಇಂಗ್ರಿಷ್ ಭಾಷೆಯ ‘ಮ್ಯಾಡಮ್’ (Madam), ‘ಸಿವಿಕ್ (civic), ‘ಲೆವೆಲ್’ (level), ‘ಮಲಯಾಳಂ’ (malayalam) ಈ ರೀತಿಯ ಪದಪುಂಜಕ್ಕೆ ಉದಾಹರಣೆ.
ಈ ರೀತಿಯ ದಿನಾಂಕ ಪ್ರತಿ ಶತಮಾನಕ್ಕೆ ಒಂದು ಬಾರಿ ಘಟಿಸುತ್ತದೆ. 1111ನೇ ಇಸವಿಯಲ್ಲಿ ಇಂಥ ಅಚ್ಚರಿ ಉಂಟಾಗಿತ್ತು. ಆ ಸಂದರ್ಭದಲ್ಲಿ ನವೆಂಬರ್ 11ರಂದು 11-11-1111 ಎಂದು ಬರೆಯಲಾಗಿತ್ತು. ಇನ್ನು ಮುಂದೆ 2121ರ ಡಿ.12ರಂದು 12-12-2121 ಎಂದು ಬರೆಯಲಾಗುತ್ತದೆ. ಅದು ಇನ್ನೂ 101 ವರ್ಷಗಳು ಕಳೆದ ಬಳಿಕ.
ಪೋರ್ಟ್‌ಲ್ಯಾಂಡ್ ವಿವಿಯ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಆ್ಯಝಿನ್ ಇನಾನ್ ಮಾತನಾಡಿ ‘ಸಾಂದರ್ಭಿಕವಾಗಿ ಈ ವರ್ಷ ಇಂಥ ಸಂಖ್ಯೆ ಬಂದಿದೆ. ಈ ರವಿವಾರ ಮಾತ್ರ ಪ್ಯಾಲಿಂಡ್ರೋಮ್ ಅಲ್ಲ. 2020 ಹೆಚ್ಚುವರಿ ವರ್ಷವಾಗಿರುವುದರಿಂದ ಇನ್ನೂ 333 ದಿನಗಳು ಇವೆ’ ಎಂದಿದ್ದಾರೆ. ಒಟ್ಟಿನಲ್ಲಿ 20-20-2020ರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರ ಬಗ್ಗೆ ಹಲವು ಮೀಮ್‌ಗಳೂ ಸೃಷ್ಟಿಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.