ಸೈನಿಕರಿಗೆ ಜಲರಹಿತ ಸ್ನಾನ!
Team Udayavani, Jan 2, 2019, 1:21 AM IST
ಹೊಸದಿಲ್ಲಿ: ವಿಶ್ವದ ಅತೀ ಎತ್ತರದ ಸೇನಾ ನೆಲೆಯಾದ ಸಿಯಾಚಿನ್‌ನಲ್ಲಿ ದೇಶ ಕಾಯುವ ಯೋಧರು ಇನ್ನು ತಮ್ಮ ಸ್ನಾನಕ್ಕಾಗಿ ಮೂರು ತಿಂಗಳುಗಳ ಕಾಲ ಕಾಯಬೇಕಿಲ್ಲ! ನೀರಿನ ಅತಿ ಕೊರತೆಯಿರುವ ಈ ಪ್ರದೇಶದಲ್ಲಿರುವ ಸೈನಿಕರಿಗೆಂದೇ ಸಿದ್ಧವಾಗಿರುವ ವಿಶೇಷ ಜಲರಹಿತ ಸ್ನಾನದ ಸಾಮಗ್ರಿಗಳನ್ನು ಸೇನೆಯು ಸದ್ಯದಲ್ಲೇ ಸಿಯಾಚಿನ್‌ಗೆ ಸರಬರಾಜು ಮಾಡಲು ನಿರ್ಧರಿಸಿದೆ.
ಏನಿದು ಸಾಮಗ್ರಿ?
ಈ ಕಿಟ್‌ನಲ್ಲಿ ಒಂದು ಕ್ಲೀನಿಂಗ್ ಜೆಲ್ ಇರುತ್ತದೆ. ಓರ್ವ ವ್ಯಕ್ತಿಯ ಸ್ನಾನಕ್ಕೆ ಸುಮಾರು 20 ಮಿ.ಲೀ. ಜೆಲ್ ಸಾಕು. ಇದನ್ನು ದೇಹಕ್ಕೆ ಹಚ್ಚಿಕೊಂಡು ಕೆಲ ನಿಮಿಷಗಳವರೆಗೆ ಮಸಾಜ್ ಮಾಡಿಕೊಂಡು ಅನಂತರ ಟವೆಲ್‌ನಿಂದ ಒರೆಸಿ ಕೊಂಡರೆ ಸಾಕು. ಇದರ ಉಪಯೋಗದಿಂದ ದೇಹದ ಮೇಲಿನ ಕ್ರಿಮಿ, ಬ್ಯಾಕ್ಟೀರಿಯಾ ನಾಶವಾಗುತ್ತವೆ. ಜತೆಗೆ, ಚರ್ಮದ ಮೇಲಿರಬಹುದಾದ ಧೂಳು, ಕೊಳೆ, ಎಣ್ಣೆಯ ಅಂಶಗಳೂ ನಿವಾರಣೆಯಾಗುತ್ತವೆ. ಈ ಕಿಟ್‌ನಲ್ಲಿರುವ ಮಾಯಿಶ್ಚರೈಸಿಂಗ್ ಕ್ರೀಂ, ಹೇರ್ ಕ್ರೀಂಗಳು ತ್ವಚೆಯನ್ನು, ಕೂದಲನ್ನು ಸುಸ್ಥಿತಿಯಲ್ಲಿಡಲು ಸಹಕಾರಿಯಾಗುತ್ತವೆ. ಸೈನಿಕರ ಕುಂದುಕೊರತೆ ನಿವಾರಿಸಲೆಂದೇ 2016ರಲ್ಲಿ ಅಸ್ತಿತ್ವಕ್ಕೆ ತರಲಾಗಿರುವ “ಆರ್ಮಿ ಡಿಸೈನ್ ಬ್ಯೂರೋ’ (ಎಡಿಬಿ) ಈ ಪರಿಕರಗಳನ್ನು ತಯಾರಿಸಿದೆ.
ಸೈನಿಕರಿಗೇಕೆ ಬೇಕು?
ಸಮುದ್ರ ಮಟ್ಟಕ್ಕಿಂತ 27,753 ಅಡಿಗಳ ಎತ್ತರವಿರುವ ಸಿಯಾಚಿನ್‌ನಲ್ಲಿನ ಯೋಧರು ಹಿಮದ ನಡುವೆಯೇ ಇದ್ದರೂ ನೀರಿನ ಅಗಾಧ ಕೊರತೆ ಎದುರಿಸುತ್ತಾರೆ. ಹಿಮವನ್ನು ನೀರಾಗಿ ಕರಗಿಸಲು ಅಧಿಕ ಪ್ರಮಾಣದ ಇಂಧನ ಬೇಕಾಗುವುದರಿಂದ ಇದರ ವೆಚ್ಚವೂ ಅಧಿಕ. ಹಾಗಾಗಿ ಜಲರಹಿತ ಸ್ನಾನದ ಪರಿಕರಗಳ ಆವಶ್ಯಕತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Rapper Badshah: ಬಾಲಿವುಡ್ ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂಬ್ ಸ್ಪೋಟ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.