ವಿಮಾನದ ಕಾಕ್ ಪಿಟ್ ನಲ್ಲಿ ಕರ್ಜಿಕಾಯಿ ಸೇವಿಸಿದ ಪೈಲಟ್ ಗಳು! ಕ್ರಮ ಕೈಗೊಂಡ ಸ್ಪೈಸ್ ಜೆಟ್
Team Udayavani, Mar 16, 2023, 10:36 AM IST
ಹೊಸದಿಲ್ಲಿ: ಸ್ಪೈಸ್ ಜೆಟ್ ತನ್ನ ಇಬ್ಬರು ಪೈಲಟ್ ಗಳನ್ನು ಕರ್ಜಿಕಾಯಿ ಮತ್ತು ಪಾನೀಯಗಳನ್ನು ಸೇವಿಸಿದ್ದಕ್ಕಾಗಿ ತೆಗೆದು ಹಾಕಿದೆ.
ಹೋಳಿ ಹಬ್ಬದ ದಿನದಂದು ವಿಮಾನದ ಕಾಕ್ ಪಿಟ್ ನಲ್ಲಿ ಇಬ್ಬರು ಕರ್ಜಿಕಾಯಿ ಜೊತೆ ತಂಪು ಪಾನೀಯ ಸೇವಿಸಿದ್ದರು. ಇದರ ಫೋಟೋ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ಸ್ಪೈಸ್ ಜೆಟ್ ಅಧಿಕಾರಿಗಳ ಪ್ರಕಾರ, ಪೈಲಟ್ ಗಳು ಈ ರೀತಿ ಮಾಡುವ ಮೂಲಕ ವಿಮಾನ ಸುರಕ್ಷತೆಗೆ ಅಪಾಯವನ್ನುಂಟು ಮಾಡಿದ್ದಾರೆ.
ಇದನ್ನೂ ಓದಿ:ವಿಶ್ವಸಂಸ್ಥೆಯಲ್ಲಿ ಕಾಂತಾರ ಪ್ರದರ್ಶನ; ಕನ್ನಡದಲ್ಲಿ ಭಾಷಣ ಮಾಡಲಿರುವ ರಿಷಬ್ ಶೆಟ್ಟಿ…
ಘಟನೆಯ ಕುರಿತು ಪ್ರತಿಕ್ರಿಯಿಸಿದ ಸ್ಪೈಸ್ ಜೆಟ್ ಏರ್ ಲೈನ್ ನ ವಕ್ತಾರರು, ಕಂಪನಿಯು ಕಾಕ್ ಪಿಟ್ ನಲ್ಲಿ ಆಹಾರ ಸೇವನೆಗೆ ಕಟ್ಟುನಿಟ್ಟಾದ ನೀತಿಯನ್ನು ಹೊಂದಿದೆ. ಇದನ್ನು ಎಲ್ಲಾ ವಿಮಾನ ಸಿಬ್ಬಂದಿಗಳು ಅನುಸರಿಸಬೇಕು ಎಂದು ಹೇಳಿದ್ದಾರೆ.
ಮಾಹಿತಿಯ ಪ್ರಕಾರ, ಇಬ್ಬರನ್ನೂ ತೆಗೆದು ಹಾಕಲಾಗಿದೆ ಮತ್ತು ಅವರ ವಿರುದ್ಧದ ವಿಚಾರಣೆ ಬಾಕಿಯಿದೆ.
ತನಿಖೆ ಪೂರ್ಣಗೊಂಡ ನಂತರ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.