ಪಾಕಿಸ್ತಾನದ ಐಎಸ್‌ಐಗೆ ಗೂಢಚರ್ಯೆ: ಮೂವರಿಗೆ ಜೀವಾವಧಿ ಶಿಕ್ಷೆ
Team Udayavani, Jul 18, 2023, 7:15 AM IST
ಅಹಮದಾಬಾದ್: ಗೂಢಚರ್ಯೆ ಮತ್ತು ಪಾಕಿಸ್ತಾನದ ಐಎಸ್‌ಐಗೆ ಭಾರತದ ಮಿಲಿಟರಿ ನೆಲೆಗಳ ಕುರಿತು ಗೌಪ್ಯ ಮಾಹಿತಿ ಸೋರಿಕೆ ಮಾಡಿದ ಆರೋಪದಲ್ಲಿ ಗುಜರಾತ್‌ನ ಸೆಷನ್ಸ್ ನ್ಯಾಯಾಲಯ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಸಿರಾಜುದ್ದೀನ್ ಆಲಿ ಫಕೀರ್, ಮೊಹಮ್ಮದ್ ಅಯೂಬ್ ಮತ್ತು ನೌಶಾದ್ ಆಲಿ ಶಿಕ್ಷೆಗೆ ಒಳಗಾದರು. ಈ ಮೂವರನ್ನು ಪೊಲೀಸರು 2012ರಲ್ಲಿ ಬಂಧಿಸಿದ್ದರು. ಫಕೀರ್ ಮತ್ತು ಅಯೂಬ್, ಅಹಮದಾಬಾದ್ ಮತ್ತು ಗಾಂಧಿನಗರದ ಸೇನಾ ನೆಲೆಗಳ ಗೌಪ್ಯ ಮಾಹಿತಿಯನ್ನು ಐಎಸ್‌ಐಗೆ ರವಾನಿಸುತ್ತಿದ್ದರು. ಜೋಧ್‌ಪುರ ನಿವಾಸಿ ನೌಶದ್ ಆಲಿ, ಜೋಧಪುರ ಆರ್ಮಿ ಕಂಟೋನ್ಮೆಂಟ್ ಮತ್ತು ಬಿಎಸ್‌ಎಫ್ ಪ್ರಧಾನ ಕಚೇರಿ ಕುರಿತು ಐಎಸ್‌ಐಗೆ ಮಾಹಿತಿ ಒದಗಿಸಿದ್ದ. ಇಮೇಲ್ ಮೂಲಕ ಇವರು ಮಾಹಿತಿಯನ್ನು ಪಾಕಿಸ್ತಾನದ ಅಧಿಕಾರಿಗಳಿಗೆ ರವಾನಿಸುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NEET ಆಕಾಂಕ್ಷಿ ಅಪ್ರಾಪ್ತೆಯನ್ನು ಒತ್ತೆಯಾಳಾಗಿ ಇರಿಸಿ ಆರು ತಿಂಗಳ ಕಾಲ ರೇ*ಪ್!
Uddhav; 30 ವರ್ಷ ಮೈತ್ರಿಯಿದ್ದರೂ ಶಿವಸೇನೆ ಬಿಜೆಪಿಯಾಗಲಿಲ್ಲ,ಕಾಂಗ್ರೆಸ್ ಹೇಗಾಗುತ್ತದೆ?
Hyderabad; ಸಲ್ಮಾನ್ ಖಾನ್ ಚಿತ್ರದ ಚಿತ್ರೀಕರಣ ಸ್ಥಳದಲ್ಲಿ ವ್ಯಾಪಕ ಕಟ್ಟೆಚ್ಚರ
Train Derail: ಬೆಳ್ಳಂಬೆಳಗ್ಗೆ ಹಳಿ ತಪ್ಪಿದ ಶಾಲಿಮಾರ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.