ಸಾಲ ತೀರಿಸಲು ಚೀನಾಕ್ಕೆ ಲಂಕೆಯ ಬಂದರು ಲೀಸ್
Team Udayavani, Dec 10, 2017, 7:35 AM IST
ಕೊಲೊಂಬೋ: ಬಂದರು ಅಭಿವೃದ್ಧಿ ಕಾರ್ಯಕ್ಕಾಗಿ ಚೀನಾದಿಂದ ಭಾರಿ ಮೊತ್ತದ ಸಾಲ ಮಾಡಿದ್ದ ಶ್ರೀಲಂಕಾ, ಸಾಲ ತೀರಿಸಲಾಗದೇ ಹಂಬಂತೋಟ ಬಂದರನ್ನು ಚೀನಾಗೆ ಅಧಿಕೃತವಾಗಿ 99 ವರ್ಷಗಳವರೆಗೆ ಹಸ್ತಾಂತರಿಸಿದೆ. ಭಾರತಕ್ಕೆ ರಾಜತಾಂತ್ರಿಕವಾಗಿ ಅತ್ಯಂತ ಮಹತ್ವದ ಈ ಬಂದರು ಚೀನಾ ಕೈವಶವಾಗಿದ್ದು, ಭದ್ರತಾ ಆತಂಕಕ್ಕೆ ಕಾರಣವಾಗಿದೆ. ಚೀನಾದ ಎರಡು ಸಂಸ್ಥೆಗಳಾದ ಹಂಬಂತೋಟ ಇಂಟರ್‌ನ್ಯಾಷನಲ್ ಪೋರ್ಟ್ ಗ್ರೂಪ್ ಮತ್ತು ಹಂಬಂತೋಟ ಇಂಟರ್‌ನ್ಯಾಷನಲ್ ಪೋರ್ಟ್ ಸರ್ವೀಸಸ್ ಈ ಬಂದರಿನ ಮಾಲೀಕತ್ವ ಹೊಂದಿರಲಿವೆ. ಶ್ರೀಲಂಕಾ ಬಂದರು ಪ್ರಾಧಿಕಾರವು ಈ ಬಂದರಿನ ಸುತ್ತಲಿನ ಹೂಡಿಕೆ ವಲಯದ ಮಾಲೀಕತ್ವ ಹೊಂದಿರಲಿದೆ.
ಶ್ರೀಲಂಕಾ ಈಗಾಗಲೇ 50 ಸಾವಿರ ಕೋಟಿ ರೂ. ಸಾಲದ ಸುಳಿಯಲ್ಲಿ ಸಿಲುಕಿದೆ. ಇದಕ್ಕೆ ಬಡ್ಡಿ ಕೂಡ ವಿಪರೀತವಾಗಿದ್ದು, ಸಾಲ ತೀರಿಸಲು ಚೀನಾ ಇತ್ತೀಚಿನ ದಿನಗಳಲ್ಲಿ ಒತ್ತಡ ಹೇರಿತ್ತು ಎನ್ನಲಾಗಿದೆ. ಇದರ ಬದಲಿಗೆ ಚೀನಾಗೆ ಬಂದರು ಮಾರಾಟ ಮಾಡುವ ಪ್ರಸ್ತಾವಕ್ಕೆ ಶ್ರೀಲಂಕಾ ಸಮ್ಮತಿಸಿದೆ. ಲಂಕಾ ಸರಕಾರದ ಕ್ರಮವನ್ನು ಪ್ರತಿಪಕ್ಷಗಳು ಟೀಕಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್; ಮಹಿಳೆಯರು ಸೇರಿ ಹಲವರ ಸಾವು
Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ
Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!
Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.