ಯಮುನೆ ಹಾನಿಗೆ ಶ್ರೀ ಶ್ರೀ ಹೊಣೆ
Team Udayavani, Dec 8, 2017, 11:43 AM IST
ಹೊಸದಿಲ್ಲಿ: ಯಮುನಾ ತೀರದಲ್ಲಿ 2016 ಮಾರ್ಚ್ ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಸಾಂಸ್ಕೃತಿಕ ಉತ್ಸವದಿಂದ ನದಿ ಪಾತ್ರಕ್ಕೆ ಹಾನಿಯಾಗಿದೆ. ಅದಕ್ಕೆ ಕಾರ್ಯಕ್ರಮ ಆಯೋಜಿಸಿದ್ದ ಆರ್ಟ್ ಆಫ್ ಲಿವಿಂಗ್ (ಎಒಎಲ್) ಕಾರಣ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಗುರುವಾರ ತೀರ್ಪು ನೀಡಿದೆ.
“ಯಮುನಾ ನದಿ ಪಾತ್ರದಲ್ಲಿ ಉಂಟಾದ ಹಾನಿಗೆ ಎಓಎಲ್ ಸಂಸ್ಥೆಯೇ ಕಾರಣ ಎಂದು ಘೋಷಿಸುತ್ತಿ ದ್ದೇವೆ. ಅದಕ್ಕೆ ಸಂಬಂಧಿಸಿದ ಉನ್ನತಾಧಿಕಾರದ ಸಮಿತಿ ಸಲ್ಲಿಸಿದ ವರದಿ ಆಧರಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ನ್ಯಾಯಮಂಡಳಿ ಹೇಳಿದೆ. ಜತೆಗೆ ಉತ್ಸವದಿಂದ ಯಾವ ರೀತಿ ಹಾನಿಯಾಗಿದೆ. ಅದನ್ನು ಹೇಗೆ ಸರಿಪಡಿಸಬಹುದು ಎಂಬ ಬಗ್ಗೆ ಸಮಿತಿ ನೀಡಿದ ಶಿಫಾರಸುಗಳನ್ನು ಯಾವ ರೀತಿ ಜಾರಿ ಮಾಡಬಹುದು ಎಂಬುದನ್ನು ಅಧ್ಯಯನ ನಡೆಸುವಂತೆ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲಹೆ ನೀಡಿದೆ. ನದಿ ಪಾತ್ರಕ್ಕೆ ನಷ್ಟ ಉಂಟಾದ ಬಗ್ಗೆ ಹೆಚ್ಚುವರಿ ದಂಡ ವಿಧಿಸಬೇಕು ಎಂಬ ಸಲಹೆಯನ್ನು ತಿರಸ್ಕರಿಸಿದ ನ್ಯಾಯಮಂಡಳಿ, ಈಗಾಗಲೇ 5 ಕೋಟಿ ರೂ.ಗಳನ್ನು ಅದು ನೀಡಿದೆ. ಒಂದು ವೇಳೆ ನದಿ ಪಾತ್ರ ದುರಸ್ತಿ ಕಾರ್ಯದ ವೆಚ್ಚ 5 ಕೋಟಿ ರೂ.ಗಳಿಗಿಂತ ಹೆಚ್ಚಾದರೆ ಅದನ್ನು ಸಂಸ್ಥೆಯಿಂದಲೇ ಪಡೆದು ಕೊಳ್ಳಬೇಕು ಎಂದು ಆದೇಶ ನೀಡಿದೆ.
ತೀರ್ಪಿಗೆ ಎಓಎಲ್ ವಿಷಾದ ವ್ಯಕ್ತಪಡಿಸಿದ್ದು, ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದೆ. ಕಾರ್ಯಕ್ರಮ ಆಯೋಜನೆ ವೇಳೆ ಎಲ್ಲ ರೀತಿಯ ನಿಯಮ ಪಾಲಿಸಿದ್ದಾಗಿ ಹೇಳಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.