Srinagar: ಉಸಿರುಗಟ್ಟಿ ಒಂದೆ ಕುಟುಂಬದ 5 ಮಂದಿ ಸಾವು
Team Udayavani, Jan 7, 2025, 1:25 AM IST
ಹೊಸದಿಲ್ಲಿ: ದೇಶಾದ್ಯಂತ ಚಳಿಯ ತೀವ್ರತೆ ದಿನೇದಿನೇ ಹೆಚ್ಚುತ್ತಿದ್ದು, ಜಮ್ಮು -ಕಾಶ್ಮೀರದ ಶ್ರೀನಗರದಲ್ಲಿ ಉಸಿರುಗಟ್ಟಿ ಒಂದೇ ಕುಟುಂಬದ 5 ಮಂದಿ ಮೃತಪಟ್ಟ ಘಟನೆ ನಡೆದಿದೆ. ತೀವ್ರ ಚಳಿಯ ಹಿನ್ನೆಲೆಯಲ್ಲಿ ಕುಟುಂಬವು ಮನೆಯೊಳಗೆ ಬ್ಲೋವರ್ ಬಳಸುತ್ತಿತ್ತು. ಅದರಿಂದ ಹೊರಬಂದ ಕಾರ್ಬನ್ ಮೋನಾಕ್ಸೆ„ಡ್‌ನಿಂದಾಗಿ ತಂದೆ, ತಾಯಿ, 3 ಮಕ್ಕಳು ಅಸುನೀಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ, ಕಾಶ್ಮೀರದಲ್ಲಿ ರಾತ್ರಿಯ ಕನಿಷ್ಠ ತಾಪಮಾನ ರವಿವಾರ ರಾತ್ರಿ ಹಿಮ ವರ್ಷದಿಂದಾಗಿ ಮತ್ತಷ್ಟು ಏರಿಕೆಯಾಗಿದೆ. ಶ್ರೀನಗರದಲ್ಲಿ ಮೈನಸ್ 0.5 ಡಿ.ಸೆ., ಗುಲ್ಮಾರ್ಗ್‌ನಲ್ಲಿ ಮೈನಸ್ 4.5 ಡಿಗ್ರಿ, ಪಹಲ್ಗಾಂನಲ್ಲಿ ಮೈನಸ್ 1.4 ಡಿಗ್ರಿ ತಲುಪಿದೆ. ಇನ್ನು, ದಿಲ್ಲಿಯಲ್ಲೂ ಚಳಿ ಮುಂದುವರಿದಿದ್ದು, 9.6 ಡಿ.ಸೆ. ತಾಪಮಾನ ದಾಖಲಾಗಿದೆ. ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಸಣ್ಣಮಟ್ಟಿಗೆ ಮಳೆಯೂ ಆಗಿದೆ.
60 ವಿಮಾನ ಸಂಚಾರ ವಿಳಂಬ: ಪಶ್ಚಿಮ ಬಂಗಾಲದಲ್ಲೂ ದಟ್ಟ ಮಂಜು ಆವರಿಸಿದ್ದು, ಗೋಚರತೆ ಕ್ಷೀಣಿಸಿದ ಕಾರಣ ಕೋಲ್ಕತಾ ಏರ್‌ಪೋರ್ಟ್‌ನಲ್ಲಿ 60 ವಿಮಾನಗಳ ಸಂಚಾರ ವಿಳಂಬವಾಗಿದೆ. ಕೋಲ್ಕತಾಗೆ ಬರಬೇಕಿದ್ದ ಹಲವು ವಿಮಾನಗಳ ಮಾರ್ಗ ಬದಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Earthquakes: ಹಿಮಾಲಯದ ತಪ್ಪಲಲ್ಲಿ ಅತೀ ಹೆಚ್ಚು ಭೂಕಂಪ ಸಂಭವಿಸುವುದೇಕೆ?
Bharatpol: ಅಂತಾರಾಷ್ಟ್ರೀಯ ಪೊಲೀಸ್ ಸಹಕಾರಕ್ಕೆ “ಭಾರತ್‌ಪೋಲ್’
Kerala: 20 ವರ್ಷದಿಂದ ಪಾಳು ಬಿದಿದ್ದ ಮನೆಯ ಫ್ರಿಡ್ಜಲ್ಲಿ ತಲೆಬುರುಡೆ ಪತ್ತೆ!
Galaxy: ಹೊಸ ಗ್ಯಾಲಕ್ಸಿ ಸೃಷ್ಟಿಯನ್ನು ಕಂಡುಹಿಡಿದ ಭಾರತದ ಖಗೋಳ ವಿಜ್ಞಾನಿಗಳು!
AI: ಶಾರುಖ್ ಪತ್ನಿ ಗೌರಿ ಮತಾಂತರ?: ಡೀಪ್ ಫೇಕ್ ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Yakshagana: ಕಾಲಮಿತಿ, ಕಾಲಗತಿಯ ಕಾಲದ ಯಕ್ಷಗಾನ-ಚಿಂತನೆ
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
Dinner Politics: ಡಿಸಿಎಂ ಡಿಕೆಶಿ ದೂರು; ಕಾಂಗ್ರೆಸ್ ಡಿನ್ನರ್‌ಗೆ ಹೈ ಕಮಾಂಡ್ ತಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.