3 ದಿನಗಳ ಬಳಿಕ ಸಂಚಾರಕ್ಕೆ ಮುಕ್ತವಾದ ಶ್ರೀನಗರ-ಜಮ್ಮು ಹೆದ್ದಾರಿ
Team Udayavani, Jan 9, 2017, 4:24 PM IST
ಹೊಸದಿಲ್ಲಿ : ಕಾಶ್ಮೀರ ಕಣಿವೆಯನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ಸರ್ವಋತು ರಸ್ತೆ ಮಾರ್ಗವಾಗಿರುವ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಕಳೆದ ಮೂರು ದಿನಗಳಿಂದ ಭಾರೀ ಹಿಮಪಾತದಿಂದಾಗಿ ಬಂದ್ ಆಗಿದ್ದು ಇಂದು ಅದನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಜಮ್ಮು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಉಂಟಾಗಿದ್ದ ಭೂಕುಸಿತವನ್ನು ಹಾಗೂ ರಾಶಿ ಬಿದ್ದಿದ್ದ ಹಿಮವನ್ನು ತೆರವುಗೊಳಿಸಲಾಗಿದ್ದು ಮೂರು ದಿನಗಳ ತರುವಾಯ ಇಂದು ಅದನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಸಾರಿಗೆ ಇಲಾಖಾಧಿಕಾರಿ ತಿಳಿಸಿದ್ದಾರೆ.
ಹೆದ್ದಾರಿ ಬಂದ್ ಆದ ಪ್ರಯುಕ್ತ ಅಲ್ಲಲ್ಲಿ ಸಾಲು ಗಟ್ಟಿ ನಿಂತಿದ್ದ ವಾಹನಗಳನ್ನು ನಿನ್ನೆ ಭಾನುವಾರವೇ ಮುಂದಕ್ಕೆ ಹೋಗಲು ಬಿಡಲಾಗಿದೆ; ಭಾರೀ ಹಿಮಪಾತದಿಂದಾಗಿ ಕಾಶ್ಮೀರ ಕಣಿವೆಯಲ್ಲಿ ಕಳೆದ ಶುಕ್ರವಾರದಿಂದಲೆ ಜನಜೀವನ ಬಹುತೇಕ ನಿಲುಗಡೆಗೆ ತಲುಪಿತ್ತು. ಇಂದು ಸೋಮವಾರ ವಾಹನ ಸಂಚಾರವನ್ನು ಸಾಧ್ಯಗೊಳಿಸಲಾಯಿತು ಎಂದು ಅಧಿಕಾರಿ ಹೇಳಿದರು.
ಕಳೆದ ಎರಡು ದಿನಗಳಿಂದ ನಿಂತು ಹೋಗಿದ್ದ ವಾಯು ಸಂಚಾರ ಕೂಡ ನಿನ್ನೆ ಭಾನುವಾರದಿಂದಲೇ ಪುನರಾರಂಭಗೊಂಡಿದೆ ಎಂದವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress;ಪೂಜಾ ಸ್ಥಳಗಳ ಕಾಯಿದೆ ಪ್ರಶ್ನಿಸುವ ಮನವಿಗಳನ್ನು ವಿರೋಧಿಸಿ ಸುಪ್ರೀಂಗೆ ಅರ್ಜಿ
Central government ನೌಕರರಿಗೆ ಗಿಫ್ಟ್; 8ನೇ ವೇತನ ಆಯೋಗ ರಚನೆಗೆ ಅನುಮೋದನೆ
ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸ್ಥಳೀಯ ಸಂಸ್ಥೆ ಚುನಾವಣೆ ಸ್ಪರ್ಧೆಗೆ ಅವಕಾಶ: ಸಿಎಂ
Sukma; ಭೀಕರ ಗುಂಡಿನ ಕಾಳಗದಲ್ಲಿ 12 ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆ
Saif Ali Khan: ನಟ ಸೈಫ್ ಅಲಿಖಾನ್ಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಶಂಕಿತನ ದೃಶ್ಯ ಸೆರೆ
MUST WATCH
ಹೊಸ ಸೇರ್ಪಡೆ
Nanjanagudu: ನಂಜುಂಡೇಶ್ವರನಿಗೆ ಹರಕೆ ಬಿಟ್ಟಿದ್ದ ಕರುವಿನ ಬಾಲ ಕತ್ತರಿಸಿದ ದುಷ್ಕರ್ಮಿಗಳು!
Congress;ಪೂಜಾ ಸ್ಥಳಗಳ ಕಾಯಿದೆ ಪ್ರಶ್ನಿಸುವ ಮನವಿಗಳನ್ನು ವಿರೋಧಿಸಿ ಸುಪ್ರೀಂಗೆ ಅರ್ಜಿ
BBK11: ಕೊನೆಗೂ ನಡೆಯಿತು ಮಿಡ್ ವೀಕ್ ಎಲಿಮಿನೇಷನ್: ವೀಕ್ಷಕರು ಊಹಿಸಿದ ಸ್ಪರ್ಧಿಯೇ ಔಟ್
Central government ನೌಕರರಿಗೆ ಗಿಫ್ಟ್; 8ನೇ ವೇತನ ಆಯೋಗ ರಚನೆಗೆ ಅನುಮೋದನೆ
ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸ್ಥಳೀಯ ಸಂಸ್ಥೆ ಚುನಾವಣೆ ಸ್ಪರ್ಧೆಗೆ ಅವಕಾಶ: ಸಿಎಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.