ಸ್ಟಾಲಿನ್ ಸಂಪುಟಕ್ಕೆ ಗಾಂಧಿ, ನೆಹರೂ!
Team Udayavani, May 7, 2021, 6:50 AM IST
ಚೆನ್ನೈ/ಪುದುಚೇರಿ: ತಮಿಳುನಾಡು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಸಂಪುಟದಲ್ಲಿ ನೆಹರೂ, ಗಾಂಧಿ ಸಚಿವರಾಗಲಿದ್ದಾರೆ. ಆಶ್ಚರ್ಯಪಡುವ ಅಗತ್ಯವಿಲ್ಲ. ಶುಕ್ರವಾರ ಮುಖ್ಯ ಮಂತ್ರಿಯಾಗಿ ಪ್ರಮಾಣ ಸ್ವೀಕರಿಸಲಿರುವ ಸ್ಟಾಲಿನ್ ಜತೆಗೆ ಸಚಿವರಾಗಲಿರುವವರ ಹೆಸರುಗಳಿವು. ಚೆನ್ನೈಯ ರಾಜಭವನದಲ್ಲಿ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಪ್ರಮಾಣ ಬೋಧಿಸಲಿದ್ದಾರೆ. 34 ಮಂದಿ ಸಚಿವರಲ್ಲಿ ಡಿಎಂಕೆಯ ಹಿರಿಯ ತಲೆಯಾಳು ಗಳು, ನೂತನವಾಗಿ ಆಯ್ಕೆಯಾಗಿರುವ ಶಾಸಕರೂ ಇರಲಿದ್ದಾರೆ.
ನೂತನ ಸಚಿವರ ಹೆಸರು ಮತ್ತು ಅವರ ಖಾತೆಗಳನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ಹಣಕಾಸು ಖಾತೆಯನ್ನು ಎರಡನೇ ಬಾರಿಗೆ ಆಯ್ಕೆಯಾಗಿರುವ ಪಿ.ಟಿ.ಆರ್.ಪಳನಿವೇಲ್ ತಾಗರಾಜನ್ ನೀಡಲಾಗಿದೆ. ಮೆಸ್ಸಾಚ್ಯುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಬಿಎ, ನ್ಯೂಯಾರ್ಕ್ ಸ್ಟೇಟ್ ವಿವಿ ಯಿಂದ ಪಿಎಚ್‌ಡಿ ಪಡೆದಿದ್ದಾರೆ. ಜತೆಗೆ ಇನ್ವೆಸ್ಟ್‌ಮೆಂಟ್ ಬ್ಯಾಂಕರ್ ಕೂಡ ಆಗಿದ್ದಾರೆ. ಕೆ.ಎನ್. ನೆಹರೂ ಮುನಿಸಿಪಲ್ ವ್ಯವಹಾರಗಳು, ನಗರಾಭಿವೃದ್ಧಿ, ಆರ್.ಗಾಂಧಿ ಜವುಳಿ ಸಚಿವರಾಗಲಿದ್ದಾರೆ. ನಿಯೋಜಿತ ಸಿಎಂ ಗೃಹ ಖಾತೆಯನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಸಂಪುಟದಲ್ಲಿ ಸ್ಥಾನಪಡೆದಿಲ್ಲ.
ಇಂದು ಪ್ರಮಾಣ: ಪುದುಚೇರಿಯಲ್ಲಿ ಆಲ್ ಇಂಡಿಯಾ ಎನ್.ಆರ್.ಕಾಂಗ್ರೆಸ್ ಮುಖಂಡ ಎನ್.ರಂಗಸಾಮಿ ಶುಕ್ರವಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಬಗ್ಗೆ ಹಂಗಾಮಿ ಲೆಫ್ಟಿನೆಂಟ್ ಗವರ್ನರ್ ತಮಿಳ್‌ಸಲೈ ಸುಂದರ ರಾಜನ್ ಪತ್ರವನ್ನು ಹಸ್ತಾಂತರಿಸಿದ್ದಾರೆ. ನೂತನ ಸಚಿವರು ಅನಂತರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.