ಖಾಸಗಿ ಕ್ರಯೋಜನಿಕ್ ಪ್ರಯೋಗ ಯಶಸ್ವಿ
ಎಂಜಿನ್‌ಗೆ ವಿಜ್ಞಾನಿ ಸತೇಶ್ ಧವನ್ ಸ್ಮರಣಾರ್ಥ ಹೆಸರು
Team Udayavani, Nov 27, 2021, 6:20 AM IST
ನವದೆಹಲಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ಸಂಸ್ಥೆಯೊಂದು ಅಭಿವೃದ್ಧಿಪಡಿಸಿದ, ಪರಿಪೂರ್ಣ ಕ್ರಯೋಜೆನಿಕ್ ರಾಕೆಟ್ ಎಂಜಿನ್‌ನ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ನೆರವೇರಿದೆ.
ಹೈದರಾಬಾದ್ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟಪ್ ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿರುವ ಈ ಎಂಜಿನ್‌ಗೆ, ಭಾರತದ ರಾಕೆಟ್ ವಿಜ್ಞಾನಿ ಸತೀಶ್ ಧವನ್ ಗೌರವಾರ್ಥ “ಧವನ್-1′ ಎಂದು ಹೆಸರಿಡಲಾಗಿದೆ.
ಈ ಕ್ರಯೋಜೆನಿಕ್ ರಾಕೆಟ್ ಎಂಜಿನ್ ಅನ್ನು 3ಡಿ ಪ್ರಿಂಟಿಂಗ್ ಬಳಸಿ ಅಭಿವೃದ್ಧಿಪಡಿಸಲಾಗಿದ್ದು, ಶೇ.95ರಷ್ಟು ಉತ್ಪಾದನಾ ಅವಧಿ ಉಳಿತಾಯವಾಗಿದೆ. ಈ ಪ್ರಯೋಗದಿಂದಾಗಿ ಇಂಥ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿದ ಜಗತ್ತಿನ ಬೆರಳೆಣಿಕೆಯ ಕಂಪನಿಗಳಲ್ಲಿ ನಮ್ಮದೂ ಒಂದು ಎಂಬ ಹೆಗ್ಗಳಿಕೆ ಸಿಕ್ಕಿದೆ ಎಂದು ಸ್ಕೈರೂಟ್ ಏರೋಸ್ಪೇಸ್ ಸಹಸ್ಥಾಪಕ ಪವನ್ ಕುಮಾರ್ ಚಂದನಾ ಹೇಳಿದ್ದಾರೆ.
ಈ ಮೈಲುಗಲ್ಲಿನ ಮೂಲಕ ಸ್ಕೈರೂಟ್ ತನ್ನ ಎಲ್ಲ ಮೂರು ಪ್ರೊಪಲ್ಶನ್ ತಂತ್ರಜ್ಞಾನಗಳನ್ನು ಪರಿಚಯಿಸಿದಂತಾಗಿದೆ. ಇವುಗಳನ್ನು ತಮ್ಮ ಮೊದಲ ಸರಣಿಯ ಉಪಗ್ರಹ ಉಡಾವಣಾ ವಾಹನಗಳಲ್ಲಿ ಬಳಸಲು ಕಂಪನಿ ನಿರ್ಧರಿಸಿದೆ.
ಇದನ್ನೂ ಓದಿ:ನಿನ್ನೆ ಬಿಜೆಪಿ ಅಭ್ಯರ್ಥಿ, ಇಂದು ಕಾಂಗ್ರೆಸ್ ಅಭ್ಯರ್ಥಿಯಿಂದ ಸಂಸದೆ ಸುಮಲತಾ ಭೇಟಿ
ವೈಶಿಷ್ಟ್ಯವೇನು?
– ಸಂಪೂರ್ಣವಾಗಿ ಭಾರತದಲ್ಲೇ ತಯಾರಾಗಿರುವ ಎಂಜಿನ್
– 3ಡಿ ಪ್ರಿಂಟಿಂಗ್ ತಂತ್ರಜ್ಞಾನವಿರುವ ರಾಕೆಟ್ ಎಂಜಿನ್
– ಇಂಧನವಾಗಿ ದ್ರವೀಕೃತ ನೈಸರ್ಗಿಕ ಅನಿಲ ಮತ್ತು ದ್ರವೀಕೃತ ಆಮ್ಲಜನಕ ಬಳಕೆ
– ಇದು ಅತ್ಯಧಿಕ ಕ್ಷಮತೆಯುಳ್ಳ, ಅಗ್ಗದ, ಸ್ವತ್ಛ ರಾಕೆಟ್ ಇಂಧನವಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.