ಸಾಮಾಜಿಕ ಭದ್ರತೆಯತ್ತ ಹೆಜ್ಜೆ
Team Udayavani, Mar 3, 2018, 10:35 AM IST
ಹೊಸದಿಲ್ಲಿ: ದೇಶದ ಅಸಂಘಟಿತ ಕಾರ್ಮಿಕರ ಜೀವನವನ್ನು ಸುಭದ್ರಗೊಳಿಸುವ ಹಾಗೂ ಸಂಘಟಿತ ನೌಕರರಿಗೆ ಸಿಗುವ ಸವಲತ್ತುಗಳನ್ನು ಅವರಿಗೂ ಸಿಗುವಂತೆ ಮಾಡುವ ಮಹತ್ವದ ಯೋಜನೆಯೊಂದನ್ನು ಕೇಂದ್ರ ಸರಕಾರ ಸದ್ಯದಲ್ಲೇ ಜಾರಿಗೆ ತರಲಿದೆ.
ಬಜೆಟ್ನಲ್ಲಿ ಬಡವರಿಗಾಗಿ ರಾಷ್ಟ್ರೀಯ ಆರೋಗ್ಯ ಭದ್ರತಾ ಯೋಜನೆ (ಆಯುಷ್ಮಾನ್ ಭವ) ಘೋಷಿಸಿದ ಬೆನ್ನಿಗೇ ಇದೀಗ, ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೂ ಕೇಂದ್ರ ಮುಂದಾಗಿದೆ. ಸುಮಾರು 50 ಕೋಟಿ ಅಸಂಘಟಿತ ನೌಕರರು ಇದರ ಲಾಭ ಪಡೆಯಲಿದ್ದಾರೆ. ಯೋಜನೆಯ ಮೇಲುಸ್ತುವಾರಿಗಾಗಿ ರಾಷ್ಟ್ರೀಯ ಸಾಮಾಜಿಕ ಭದ್ರತಾ ಮಂಡಳಿ ಸ್ಥಾಪಿಸಲಾಗುತ್ತದೆ. ಯೋಜನೆಯ ರೂಪುರೇಷೆಗಳಿಗಾಗಿ ತಜ್ಞರ ಅಭಿಮತ ಕೋರಲಾಗಿದ್ದು, ಅವರ ಸಲಹೆಗಳ ಆಧಾರದ ಮೇಲೆ ಯೋಜನೆಯ ಅಂತಿಮ ಕರಡು ಸಿದ್ಧಪಡಿಸಲಾಗುತ್ತದೆ. ಇದಕ್ಕೆ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಸಿಕ್ಕಮೇಲೆ, ಸಂಸತ್ತಿನಲ್ಲಿ ಇದನ್ನು ಮಂಡಿಸಲಾಗುತ್ತದೆ.
3 ಹಂತಗಳಲ್ಲಿ ಜಾರಿ: ಮುಂದಿನ ಹತ್ತು ವರ್ಷಗಳಲ್ಲಿ ಈ ಯೋಜನೆ ಮೂರು ಹಂತಗಳಲ್ಲಿ ಜಾರಿಗೊಳ್ಳಲಿದೆ. ಸದ್ಯಕ್ಕೆ 18,500 ಕೋಟಿ ರೂ.ಗಳ ವೆಚ್ಚದಲ್ಲಿ ಜಾರಿಗೊಳ್ಳಲಿರುವ ಯೋಜನೆಯ ಮೊದಲ ಹಂತದಲ್ಲಿ, ಅಸಂಘಟಿತ ನೌಕರರಿಗೆ ಆರೋಗ್ಯ ಭದ್ರತೆ,ನಿವೃತ್ತಿ ಭತ್ಯೆಗಳು ಸಿಗಲಿವೆ. 2ನೇ ಹಂತದಲ್ಲಿ, ನಿರುದ್ಯೋಗಕ್ಕೆ ತುತ್ತಾದವರಿಗೆ ಸೌಲಭ್ಯಗಳು ಹೆಚ್ಚುವರಿಯಾಗಿ ಸೇರ್ಪಡೆಗೊಳ್ಳಲಿವೆ. 3ನೇ ಹಂತದಲ್ಲಿ, ಇತರ ಕಲ್ಯಾಣ ಯೋಜನೆಗಳು ಸೇರ್ಪಡೆಗೊಳ್ಳಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.