EVM ಕುರಿತು ಜನರ ದಿಕ್ಕುತಪ್ಪಿಸಬೇಡಿ, ತೀರ್ಪು ಒಪ್ಪಿ ಸಹಕರಿಸಿ: ವಿಪಕ್ಷಗಳಿಗೆ ಡಿಸಿಎಂ ಶಿಂಧೆ
ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಇವಿಎಂ ಹಗರಣ ನಡೆದಿಲ್ಲವೇ?
Team Udayavani, Dec 8, 2024, 3:47 PM IST
ಮುಂಬಯಿ: ಇವಿಎಂ ಕುರಿತು ತಪ್ಪು ಸಂದೇಶ ರವಾನಿಸಿ ಜನರ ದಿಕ್ಕು ತಪ್ಪಿಸುವುದನ್ನು ಬಿಟ್ಟು ಜನರ ತೀರ್ಪನ್ನು ಒಪ್ಪಿಕೊಳ್ಳಿ ಎಂದು ಮಹಾರಾಷ್ಟ ಡಿಸಿಎಂ ಏಕನಾಥ್ ಶಿಂಧೆ ರವಿವಾರ(ಡಿ) ವಿಪಕ್ಷಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಸುದ್ದಿಗಂಗರೊಂದಿಗೆ ಮಾತನಾಡಿದ ಶಿಂಧೆ ‘ ಮಾಹಾಯುತಿಯು ತನ್ನ ಕೆಲಸದಿಂದ ಜನರ ವಿಶ್ವಾಸ ಪಡೆದು ಸರಕಾರ ರಚಿಸಿದೆ, ವಿಪಕ್ಷಗಳು ತೀರ್ಪನ್ನು ಒಪ್ಪಿ ಸರಕಾರದ ಅಭಿವೃದ್ಧಿ ಕೆಲಸಗಳಿಗೆ ಸಹಕಾರಿಯಾಗಬೇಕು ಎಂದು ಸಲಹೆ ನೀಡಿದರು.
“ನೀವು ಗೆದ್ದಾಗ, ಯಾವುದೇ ಇವಿಎಂ ಹಗರಣವಿಲ್ಲ, ಆದರೆ ನೀವು ಸೋತಾಗ ಮತ ಯಂತ್ರವು ಕೆಟ್ಟದಾಗುತ್ತದೆ. ಇದು ರಾಜಕೀಯ ಮಾಡುವ ಸರಿಯಾದ ವಿಧಾನವಲ್ಲ” ಎಂದು ಶಿಂಧೆ ಹೇಳಿದರು.
ಜನರು ಪ್ರತಿಪಕ್ಷಗಳಿಗೆ ತಮ್ಮ ಸ್ಥಾನ ಯಾವುದು ಎಂದು ತೋರಿಸಿದ್ದಾರೆ ಮತ್ತು ಮನೆಯಲ್ಲಿ ಕುಳಿತುಕೊಳ್ಳುವವರಿಗೆ ಮತ ಹಾಕುವುದಿಲ್ಲ ಎಂದು ಸಾಬೀತುಪಡಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಶಿಂಧೆ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಮಹಾಯುತಿಗೆ 2.48 ಕೋಟಿ ಮತಗಳು(ಶೇ.43.55) ಬಂದಿದ್ದು, ಮಹಾವಿಕಾಶ್ ಅಜಿಹಾದಿಗೆ 2.5 ಕೋಟಿ ಮತಗಳನ್ನು(43.71 ಶೇಕಡಾ) ಪಡೆದಿದೆ, ಆದರೂ, ವಿರೋಧ ಪಕ್ಷ ಮೈತ್ರಿಕೂಟ 31 ಸ್ಥಾನಗಳನ್ನು ಪಡೆದುಕೊಂಡಿತು ಮತ್ತು ಮಹಾಯುತಿ 17 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತು. ಜಾರ್ಖಂಡ್ ವಿಧಾನಸಭಾ ಚುನಾವಣೆ ಮತ್ತು ನಾಂದೇಡ್ (ಮಹಾರಾಷ್ಟ್ರ) ಮತ್ತು ವಯನಾಡ್ ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ವಿರೋಧ ಪಕ್ಷ ಜಯಗಳಿಸಿದೆ. ನಾವು ಇವಿಎಂ ನಲ್ಲಿ ಹಗರಣ ನಡೆದಿದೆ ಎಂದು ಹೇಳಬೇಕೇ?” ಎಂದು ಡಿಸಿಎಂ ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.