ಉಗ್ರ ಸಂಹಾರದ ಯಶೋಗಾಥೆ
Team Udayavani, Jun 25, 2020, 8:27 AM IST
ಪ್ರಸಕ್ತ ವರ್ಷ ಜಮ್ಮು -ಕಾಶ್ಮೀರದಲ್ಲಿ ಸಂಪೂರ್ಣ ಉಗ್ರ ನಾಯಕತ್ವವನ್ನು ನಾಶಪಡಿಸುವ ಮೂಲಕ ಭದ್ರತಾ ಪಡೆಗಳು ಮಹತ್ವದ ಯಶಸ್ಸು ಸಾಧಿಸಿವೆ. ಕಳೆದ 4 ವರ್ಷಗಳಲ್ಲಿ ಮೊದಲ ಬಾರಿಗೆ ಉಗ್ರ ಸಂಘಟನೆಗಳಿಗೆ ಸೇರ್ಪಡೆಯಾದವರ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಉಗ್ರರು ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ. ಭದ್ರತಾ ಪಡೆಯ ಯೋಧರ ಈ ಸಾಧನೆ ಕುರಿತು ಒಂದಿಷ್ಟು ವಿವರ ಇಲ್ಲಿದೆ.
ಉಗ್ರರಿಗೀಗ ನಾಯಕರೇ ಇಲ್ಲ
ಹಿಜ್ಬುಲ್ ಮುಜಾಹಿದೀನ್, ಲಷ್ಕರ್, ಅನ್ಸಾರ್ ಸೇರಿದಂತೆ ಕಣಿವೆ ರಾಜ್ಯದಲ್ಲಿನ ಬಹುತೇಕ ಎಲ್ಲ ಉಗ್ರ ಸಂಘಟನೆಗಳಿಗೂ ಈಗ ನಾಯಕರೇ ಇಲ್ಲದ ಪರಿಸ್ಥಿತಿ ಉಂಟಾಗಿದೆ. ಅಷ್ಟೇ ಅಲ್ಲ, ಪ್ರಮುಖ ಕಮಾಂಡರ್‌ನ ನಂತರದ ಶ್ರೇಣಿಯಲ್ಲಿ ಬರುವ ವ್ಯಕ್ತಿಗಳನ್ನೂ ಭದ್ರತಾ ಪಡೆ ಸದೆಬಡಿದಿರುವ ಕಾರಣ ಉಗ್ರರಿಗೆ ತೀವ್ರ ಹಿನ್ನಡೆಯಾಗಿದೆ ಎನ್ನುತ್ತಾರೆ ಸೇನಾಧಿಕಾರಿಗಳು.
ಹತ್ಯೆಗೀಡಾದ ಪ್ರಮುಖ ಭಯೋತ್ಪಾದಕರು
ರಿಯಾಜ್ ನೈಕೂ, ಅಬ್ದುಲ್ ರೆಹಮಾನ್ ಅಲಿಯಾಸ್ ಫೌಜಿ ಭಾಯಿ, ಜುಬೈರ್, ಖಾರಿ ಯಾಸಿರ್, ಜುನೈದ್ ಸೆಹ್ರಿ, ಬುರ್ಹಾನ್ ಕೋಕಾ, ಹೈದರ್, ತಯ್ಯಬ್ ವಾಲಿದ್.
ಯಶಸ್ಸಿನ ಹಿಂದಿನ ಗುಟ್ಟೇನು?
ಪೊಲೀಸರು ಈ ಬಾರಿ ಉಗ್ರರ ಕುರಿತು ಮಾಹಿತಿ ಒದಗಿಸುತ್ತಿದ್ದುದು ಮಾತ್ರವಲ್ಲ, ಎನ್‌ಕೌಂಟರ್‌ನಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದು.
ಕೋವಿಡ್ ಲಾಕ್‌ಡೌನ್‌ನಿಂದಾಗಿ ಉಗ್ರರಿಗೆ ತಮ್ಮಿಷ್ಟದಂತೆ ಮುಕ್ತವಾಗಿ ಸಂಚರಿಸಲು ಆಗದೇ, ನಿರ್ದಿಷ್ಟ ಪ್ರದೇಶಗಳಲ್ಲೇ ಅಡಗಿಕೊಳ್ಳುವಂತೆ ಆಗಿದ್ದು.
119 ಈ ವರ್ಷ ಹತ್ಯೆಗೀಡಾದ ಉಗ್ರರು
29 ಕಾರ್ಯಾಚ ರಣೆಯಲ್ಲಿ ಹುತಾತ್ಮರಾದ ಯೋಧರು
12 ಎನ್‌ಕೌಂಟರ್ ವೇಳೆ ಮೃತಪಟ್ಟ ನಾಗರಿಕರು
ಶೇ.20 ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಇಳಿಕೆಯಾದ ಹಿಂಸಾತ್ಮಕ ಘರ್ಷಣೆಗಳ ಪ್ರಮಾಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.