ಒತ್ತಡಕ್ಕೆ ಮಣಿದ ಪಾಕ್
Team Udayavani, Jul 14, 2019, 5:00 AM IST
ಹೊಸದಿಲ್ಲಿ: ಕರ್ತಾರ್ಪುರ ಕಾರಿಡಾರ್ ವಿಚಾರದಲ್ಲಿ ಭಾರತದ ಒತ್ತಡಕ್ಕೆ ಮಣಿದ ಪಾಕಿಸ್ಥಾನ, ಪಾಕ್‌ನ ಕರ್ತಾರ್ಪುರ ಕಾರಿಡಾರ್ ಸಮಿತಿಯಲ್ಲಿದ್ದ ಖಲಿಸ್ತಾನ್ ಪರ ಸದಸ್ಯರನ್ನು ತೆಗೆದುಹಾಕಿದೆ. ರವಿವಾರ ಎರಡನೇ ಸುತ್ತಿನ ಮಾತುಕತೆಗೂ ಮುನ್ನವೇ ಪಾಕ್ ಈ ಕ್ರಮ ಕೈಗೊಂಡಿದ್ದು ಅತ್ಯಂತ ಮಹತ್ವದ್ದಾಗಿದೆ.
ಪಾಕಿಸ್ಥಾನದಲ್ಲಿರುವ ಗುರುದ್ವಾರಗಳ ಅಭಿವೃದ್ಧಿಗಾಗಿ ಸಿಕ್ಖ್ ಗುರುದ್ವಾರ ಪ್ರಬಂಧಕ ಸಮಿತಿಯನ್ನು ರಚಿಸಲಾಗಿದ್ದು, ಇದರಲ್ಲಿ ಖಲಿಸ್ತಾನ್ ಪರ ಮುಖಂಡ ಗೋಪಾಲ್ ಸಿಂಗ್ ಚಾವ್ಲಾರನ್ನೂ ಸೇರಿಸಲಾಗಿತ್ತು. ಭಾರತದಲ್ಲಿ ಖಲಿಸ್ತಾನ್ ಪರ ಸಂಘಟನೆಗಳು ಹಿಂಸಾಚಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮೊದಲಿನಿಂದಲೂ ಗೋಪಾಲ್ ಸಿಂಗ್ ಸೇರ್ಪಡೆಗೆ ಭಾರತ ಆಕ್ಷೇಪಿಸಿತ್ತು. ಅಷ್ಟೇ ಅಲ್ಲ, ಇದೇ ಗೋಪಾಲ್ ಸಿಂಗ್ ಕಳೆದ ವರ್ಷ ಭಾರತದ ಅಧಿಕಾರಿಗಳು ಲಾಹೋರ್‌ನಲ್ಲಿನ ಗುರುದ್ವಾರವೊಂದಕ್ಕೆ ಭಾರತದ ಅಧಿಕಾರಿಗಳು ತೆರಳದಂತೆ ತಡೆದಿದ್ದರು. ಇದು ವಿವಾದಕ್ಕೂ ಕಾರಣವಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.