ಭಯೋತ್ಪಾದನೆ ವಿರುದ್ಧ ಕಠಿನ ಕ್ರಮ
Team Udayavani, Feb 28, 2019, 12:30 AM IST
ಪಾಕಿಸ್ಥಾನ ಈಗ ಅಕ್ಷರಶಃ ಒಬ್ಬಂಟಿ. ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ವಿಧಿಯೇ ಇಲ್ಲದ ಸ್ಥಿತಿ. ಈ ಹಿನ್ನೆಲೆಯಲ್ಲೇ ಈ ವಿಶ್ಲೇಷಣೆ.
ಉಗ್ರ ನೆಲೆಗಳ ಮೇಲೆ ಮಂಗಳ ವಾರ ಭಾರತ ನಡೆಸಿದ ದಾಳಿಯನ್ನು ಒಪ್ಪಿಕೊಳ್ಳದ ಪಾಕಿಸ್ಥಾನವು ತನ್ನ ವಾಯು ಪ್ರದೇಶ ಉಲ್ಲಂ ಸಿದ್ದಕ್ಕೆ ಪಾಠ ಕಲಿಸುತ್ತೇನೆಂದು ಬುಧವಾರ ಪ್ರತಿ ದಾಳಿಯ ಪ್ರಯತ್ನ ನಡೆಸಿತಾದರೂ ಮರುಕ್ಷಣವೇ ತಣ್ಣಗಾಯಿತು. ಪ್ರಧಾನಿ ಇಮ್ರಾನ್ ಖಾನ್ ಶಾಂತಿಯ ಪ್ರಸ್ತಾವ ಮಾಡಿದರು. ಹೀಗೆ ಮಾಡಿದರೆ ಭಯೋತ್ಪಾದನೆ ಹತ್ತಿಕ್ಕುವ ಕ್ರಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಗೆ ರಕ್ಷಣಾ ಪರಿಣತರ ಲೆಕ್ಕಾಚಾರಗಳನ್ನಿಟ್ಟಿದ್ದಾರೆ.
ಭಾರತದ ವಾಯುದಾಳಿ ಪಾಕ್ ಅನ್ನು ಭಯೋ ತ್ಪಾದನೆ ವಿಷಯದಲ್ಲಿ ಒಬ್ಬಂಟಿಯನ್ನಾಗಿಸಿದೆ. ಯಾವ ರಾಷ್ಟ್ರವೂ ಅದರ ನೆರವಿಗೆ ಬಂದಿಲ್ಲ. ಚೀನವೂ ಸಂಯಮದ ಮಾತನಾಡಿರುವುದು ಒಂದು ಹಂತದಲ್ಲಿ ಜಗತ್ತಿನಾದ್ಯಂತ ಭಾರತದ ಪರ ವ್ಯಕ್ತವಾದ ಸಹಾನುಭೂತಿಯಿಂದಲೇ. ಹಾಗಾಗಿ ಇಂದಲ್ಲ, ನಾಳೆ ಭಯೋತ್ಪಾದನೆ ವಿರುದ್ಧ ಕಠಿನ ಕ್ರಮಕ್ಕೆ ಮುಂದಾಗಲೇಬೇಕಾದ ಸ್ಥಿತಿ ಪಾಕ್‌ಗೆ ಪುಲ್ವಾಮಾ ಮತ್ತು ಬಾಲಾಕೋಟ್ ದಾಳಿ ಪ್ರಕರಣ ನಿರ್ಮಿಸಿರುವುದು ಸ್ಪಷ್ಟ.
ನಿವೃತ್ತ ಸೇನಾಧಿಕಾರಿಯೊಬ್ಬರು ಟಿವಿಯೊಂದಕ್ಕೆ ತಿಳಿಸಿದಂತೆ, 15 ವರ್ಷ ಹಿಂದೆಯೇ ಬಾಲಾಕೋಟ್ ಉಗ್ರರ ಉತ್ಪಾದನಾ ಕೇಂದ್ರವೆಂಬ ಮಾಹಿತಿ ಯನ್ನು ಅಮೆರಿಕದ ಜತೆ ಹಂಚಿಕೊಳ್ಳಲಾಗಿತ್ತಂತೆ. 2000 ದಲ್ಲಿ ಮಸೂದ್ ಅಜರ್ ಜೈಷ್ ಇ ಮೊಹಮ್ಮದ್ ಸ್ಥಾಪಿಸಿದ್ದ.
ಅವೆಲ್ಲವೂ ಚರ್ಚೆಯ ಸಂಗತಿಯೇ ಅಲ್ಲ
ಭಾರತವು ತನ್ನ ವಾಯುಸೀಮೆ ಉಲ್ಲಂ ಸಿದೆ ಎಂಬ ಪಾಕ್ ವಾದಕ್ಕೆ ರಾಜತಾಂತ್ರಿಕ ವಲಯದಲ್ಲಿ ವ್ಯಕ್ತವಾದ ಉತ್ತರವೇ ಬೇರೆ. ಯಾರ ವಾಯುಸೀಮೆ ಯಾರು ಉಲ್ಲಂಘಿಸಿದರು, ಎಷ್ಟು ಬಾಂಬ್ ಹಾಕಿದರು, ಎಷ್ಟು ವಿಮಾನ ಉರುಳಿಸಿದರು? ಇವೆಲ್ಲವೂ ಈ ಹೊತ್ತಿನ ಚರ್ಚೆಯ ಸಂಗತಿಯೇ ಅಲ್ಲ.
ಬದಲಾಗಿ ಇದು ಭಯೋತ್ಪಾದನೆ ಹತ್ತಿಕ್ಕಲು ಕೈಗೊಂಡ ಕಠಿನ ಕ್ರಮವಷ್ಟೇ. ಹಾಗಾಗಿ ವಿಶ್ವಸಂಸ್ಥೆಗೆ ದೂರು ಕೊಂಡೊಯ್ದರೂ ಪಾಕ್‌ಗೆ ಲಾಭವಾಗುತ್ತದೆಂಬ ಪರಿಸ್ಥಿತಿ ಇಲ್ಲ. ಮತ್ತೂಬ್ಬ ರಕ್ಷಣಾ ಪರಿಣತರು ಹೇಳುವಂತೆ ಯಾರಿಗೂ ಯುದ್ಧ ಬೇಕಿಲ್ಲ. ಆದರೆ, ಭಾರತ ಭಯೋತ್ಪಾದನೆಯ ವಿರುದ್ಧ ಹೋರಾಟ ಕುರಿತ ತನ್ನ ಬದ್ಧತೆಯನ್ನು ಮತ್ತೂಂದು ಹಂತಕ್ಕೆ ಕೊಂಡೊಯ್ದಿದೆ. 1971 ರ ಭಾರತ ಪಾಕ್ ಯುದ್ಧದ ಬಳಿಕ ಭಯೋತ್ಪಾದನೆ ತೀವ್ರ ಗೊಂಡಿದೆ. ಪ್ರತಿ ಬಾರಿಯೂ ಭಾರತ ಜಗತ್ತಿನಲ್ಲೆಲ್ಲಾ ಪಾಕ್‌ನ ದ್ವಂದ್ವ ನೀತಿ ಕುರಿತು ಹೇಳುತ್ತಾ ಬರುತ್ತಿತ್ತು, ಕೇವಲ ರಾಜತಾಂತ್ರಿಕ ತಂತ್ರಗಳಿಂದ ಸಮಸ್ಯೆಯನ್ನು ಸರಿಪಡಿಸುವ ಲೆಕ್ಕಾಚಾರದಲ್ಲಿತ್ತು. ಆದರೀಗ ರಾಜ ತಾಂತ್ರಿಕ ತಂತ್ರಗಳೊಂದಿಗೆ, ನಿರ್ಮೂಲನ ತಂತ್ರಗಳನ್ನೂ ಬಳಸಿಯೇವು ಎಂಬುದನ್ನು ಸಾಬೀತುಪಡಿಸಿದೆ. ಅದೇ ಈ ಘಟನೆಯಿಂದ ಹೊಮ್ಮುವ ಅರ್ಥ ಎಂಬುದು ರಕ್ಷಣಾ ಪರಿಣಿತರ ಅಭಿಪ್ರಾಯ.
ಸುಷ್ಮಾ ಪ್ರಸ್ತಾವ
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಹ ಭಾರತ, ಚೀನ ಹಾಗೂ ರಷ್ಯಾದೊಂದಿಗಿನ ಸಭೆಯಲ್ಲಿ ಬುಧವಾರ ಈ ವಿಷಯ ಪ್ರಸ್ತಾಪಿಸಿ ಮಂಗಳವಾರದ ಪ್ರಹಾರ ಯಾರ ವಿರುದ್ಧವೂ ಅಲ್ಲ; ಕೇವಲ ಭಯೋತ್ಪಾದನೆಯ ವಿರುದ್ಧ. ಯಾವುದೇ ನಾಗರಿಕರಿಗೆ ಹಾನಿ ಮಾಡಬಾರದೆಂದೇ ಈ ಮಾರ್ಗವನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದು ಸ್ಪಷ್ಟಪಡಿಸಿದರು.
ಪ್ರಸ್ತುತ ಪಾಕ್‌ನಿಂದ ಎಲ್ಲರೂ ದೂರವಾಗಿದ್ದಾರೆ. ಚೀನಾ ಮಾತ್ರ ಪರಮಾಪ್ತವಾಗಿದೆ. ಇರಾನ್ ಹಾಗೂ ಅಫ್ಘಾನಿಸ್ತಾನ ಯಾವಾಗಲೋ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ಥಾನದ ಮೇಲೆ ತೀವ್ರ ಒತ್ತಡ ಹೇರಿವೆ. ಬ್ರಿಟನ್, ರಷ್ಯಾ, ಅಮೆರಿಕ ಪಾಕ್ ಪರ ಸೊಲ್ಲೆತ್ತುತ್ತಿಲ್ಲ. ಇವೆಲ್ಲವೂ ಪಾಕಿಸ್ಥಾನಕ್ಕೆ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಲೇಬೇಕಾದ ಸ್ಥಿತಿಯನ್ನು ನಿರ್ಮಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pune: ಪಿಜ್ಜಾ ಆರ್ಡರ್ ಮಾಡುವ ಮುನ್ನ ಎಚ್ಚರ.. ಪಿಜ್ಜಾದಲ್ಲಿತ್ತು ಚಾಕುವಿನ ತುಂಡು
Kerala: ದೇಗುಲ ಸಂಪ್ರದಾಯ ಬದಲು ಹಕ್ಕು ತಂತ್ರಿಗಳದ್ದು, ಸರ್ಕಾರದಲ್ಲ: ಕೇರಳ ಸಚಿವ
Abujhmad: ಗುಂಡಿನ ಕಾಳಗದಲ್ಲಿ ನಾಲ್ವರು ನಕ್ಸಲೀಯರ ಹತ್ಯೆ; ಓರ್ವ ಪೊಲೀಸ್ ಹುತಾತ್ಮ
UP: ವಿವಾಹದ ಮಧ್ಯೆ ಬಾತ್‌ರೂಮ್ ಹೋಗಿ ಬರುವುದಾಗಿ ಹೇಳಿ ಚಿನ್ನ – ನಗದು ಜತೆ ವಧು ಪರಾರಿ
ISRO: ಅಂತರಿಕ್ಷದಲ್ಲಿ ಅಲಸಂದೆ ಬೀಜ ಮೊಳಕೆ: ಇಸ್ರೋ ಪ್ರಯೋಗಕ್ಕೆ ಯಶಸ್ಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.