ರಚನಾತ್ಮಕವಾಗಿ ಹೊಣೆ ನಿಭಾಯಿಸುವೆ: ಪ್ರಸೂನ್
Team Udayavani, Aug 13, 2017, 7:25 AM IST
ಹೊಸದಿಲ್ಲಿ: ತಮಗೆ ವಹಿಸಲಾಗಿರುವ ಹೊಸ ಜವಾಬ್ದಾರಿ ಯನ್ನು ರಚನಾತ್ಮಕವಾಗಿ ನಿಭಾಯಿಸುವುದಾಗಿ ಮತ್ತು ಧನಾತ್ಮಕ ಬದಲಾವಣೆ ತರಲು ಶ್ರಮಿಸುವುದಾಗಿ ಸೆನ್ಸಾರ್ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಪ್ರಸೂನ್ ಜೋಶಿ ಹೇಳಿದ್ದಾರೆ.
ಮುಂಬಯಿಯಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಅವರು, “ಉತ್ತಮ ಉದ್ದೇಶವು ಉತ್ತಮ ಆರಂಭವಾಗಿರುತ್ತದೆ. ಜವಾ ಬ್ದಾರಿ ಹೊರುವುದು ಮತ್ತು ಉತ್ತಮವಾದುದನ್ನೇ ಕೊಡು ವುದು ನನ್ನ ಯಾವತ್ತಿನ ಪ್ರಯತ್ನ. ಅಧಿಕಾರ ಮತ್ತು ಜವಾ ಬ್ದಾರಿ ಎರಡೂ ಇದ್ದರೆ ರಚನಾತ್ಮಕವಾದ ಕೊಡುಗೆ ಕೊಡಲು ಸಾಧ್ಯ ಎಂದು ನಾನು ನಂಬಿದ್ದೇನೆ’ ಎಂದು ಹೇಳಿದರು.
ಜೋಶಿ ನೇಮಿಸುವುದರ ಜತೆಗೆ ಈಗಿರುವ ಮಂಡಳಿಗೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಿ ಸರಕಾರ ಮಂಡಳಿ ಯನ್ನು ಪುನಾರಚಿಸಿದೆ. ಕನ್ನಡ ಚಿತ್ರನಿರ್ದೇಶಕ ಟಿ.ಎಸ್. ನಾಗಾಭರಣ, ನಟಿ ವಿದ್ಯಾ ಬಾಲನ್, ವಿವೇಕ್ ಅಗ್ನಿಹೋತ್ರಿ, ಗೌತಮಿ ತಾಡಿಮಲ್ಲ ಮುಂತಾದ ಸದಸ್ಯರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಶುಕ್ರವಾರವಷ್ಟೇ ಪಹ್ಲಾಜ್ ನಿಹಲಾನಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.