Delhi: ಕ್ಲಾಸ್ ತಪ್ಪಿಸಲು ಇಮೇಲ್ ಮೂಲಕ ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 14ವರ್ಷದ ವಿದ್ಯಾರ್ಥಿ
Team Udayavani, Aug 3, 2024, 12:46 PM IST
ನವದೆಹಲಿ: ದೇಶದಲ್ಲಿ ಇತ್ತೀಚೆಗೆ ಬಾಂಬ್ ಬೆದರಿಕೆ ಪ್ರಕರಣಗಳು ಹೆಚ್ಚಾಗುತ್ತಿವೆ. ಶಾಲೆ, ಆಸ್ಪತ್ರೆ, ವಿಮಾನ ನಿಲ್ದಾಣಗಳಲ್ಲಿ ಬಾಂಬ್ ಇದೆ ಎಂದು ಇಮೇಲ್ ಮೂಲಕ ಬೆದರಿಕೆ ಹಾಕುವಂತಹ ಹಲವಾರು ಘಟನೆಗಳನ್ನು ನಾವು ನೋಡಿದ್ದೇವೆ ಅದರಂತೆ ಶುಕ್ರವಾರ(ಆಗಸ್ಟ್ 2) ದಂದು ದೆಹಲಿಯ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆ ಬಂದಿರುವುದು ಗೊತ್ತೇ ಇದೆ. ದಕ್ಷಿಣ ದೆಹಲಿಯ ಸಮ್ಮರ್ ಫೀಲ್ಡ್ಸ್ ಶಾಲೆಗೆ ಗುರುವಾರ ಮಧ್ಯರಾತ್ರಿ ಬಾಂಬ್ ಬೆದರಿಕೆಯ ಇಮೇಲ್ ಬಂದಿದೆ.
ಶುಕ್ರವಾರ ಶಾಲೆಗೆ ಬಂದ ಶಾಲಾ ಆಡಳಿತ ಮಂಡಳಿ ಮೇಲ್ ಅನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ ಆದರೆ ಎಲ್ಲೂ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ
ಇದಾದ ಬಳಿಕ ಇದೊಂದು ಸುಳ್ಳು ಬೆದರಿಕೆ ಎಂಬುದು ತನಿಖೆ ನಡಿಸಿದ ಪೊಲೀಸರಿಂದ ಬೆಳಕಿಗೆ ಬಂದಿದೆ. ಅಷ್ಟು ಮಾತ್ರವಲ್ಲದೆ ಬೆದರಿಕೆ ಇಮೇಲ್ ಕಳುಹಿಸಿದ ವ್ಯಕ್ತಿ ಬೇರೆ ಯಾರೂ ಅಲ್ಲ ಇದೆ ಶಾಲೆಯಲ್ಲಿ ಕಲಿಯುತ್ತಿರುವ ಹದಿನಾಲ್ಕು ವರ್ಷದ ಬಾಲಕ ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಬಾಲಕನನ್ನು ತನಿಖೆಗೆ ಒಳಪಡಿಸಿದ ವೇಳೆ ತನಗೆ ಶಾಲೆಗೆ ಹೋಗಲು ಮನಸ್ಸಿರಲಿಲ್ಲ ಹಾಗಾಗಿ ಏನು ಮಾಡುವುದು ಎಂದು ಆಲೋಚನೆ ಮಾಡುವಾಗ ಬಾಂಬ್ ಬೆದರಿಕೆ ಹಾಕಿದರೆ ಎಂದು ಆಲೋಚಿಸಿ ಶಾಲೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಇಮೇಲ್ ಕಳುಹಿಸಿರುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ ಯಾರಿಗೂ ಅನುಮಾನ ಬರಬಾರದೆಂದು ತನ್ನ ಶಾಲೆಯ ಜೊತೆಗೆ ಇತರ ಎರಡು ಶಾಲೆಗಳ ಹೆಸರನ್ನು ಮೇಲ್‌ನಲ್ಲಿ ಉಲ್ಲೇಖಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Wayanad; 358ಕ್ಕೇರಿದ ಮೃತರ ಸಂಖ್ಯೆ, ಆಹಾರವಿಲ್ಲದೆ ಕಾಡಿನಲ್ಲಿ ಅಲೆದಾಡುತ್ತಿದ್ದ ಕುಟುಂಬ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Liquor Policy Case:ಕೇಜ್ರಿ, ಸಿಸೋಡಿಯಾ ವಿರುದ್ಧ ಪ್ರಾಸಿಕ್ಯೂಷನ್: EDಗೆ ಕೇಂದ್ರದ ಅನುಮತಿ
RSS ಮೋಹನ್ ಭಾಗವತ್ ದೇಶದ್ರೋಹದ ಹೇಳಿಕೆ ನೀಡಿದ್ದಾರೆ: ರಾಹುಲ್ ಗಾಂಧಿ ಕಿಡಿ
BJP ನಾಯಕನಿಂದ ಪಕ್ಷದ ಕಾರ್ಯಕರ್ತೆಯ ಅತ್ಯಾಚಾ*ರ;ಬಂಧನ,ಪಕ್ಷದಿಂದ ಉಚ್ಚಾಟನೆ
PoK ಇಲ್ಲದೆ ಜಮ್ಮು ಮತ್ತು ಕಾಶ್ಮೀರವು ಅಪೂರ್ಣ: ಪಾಕ್ ಗೆ ರಾಜನಾಥ್ ಎಚ್ಚರಿಕೆ
Delhi-NCR; ಶೂನ್ಯ ಗೋಚರತೆ: ವಿಮಾನಗಳು, ರೈಲು ಸೇವೆಗಳ ಮೇಲೆ ಪರಿಣಾಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.