ವಿದ್ಯಾರ್ಥಿಗೆ ಥಳಿಸಿ, ಐರನ್ ಬಾಕ್ಸ್ ನಿಂದ ಸುಟ್ಟು ಹಾಕಿದ ಸಹಪಾಠಿಗಳು: ವಿಡಿಯೋ ವೈರಲ್
Team Udayavani, Nov 5, 2022, 11:57 AM IST
ಹೈದರಾಬಾದ್: ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಸೇರಿ ಓರ್ವನನ್ನು ಹಾಸ್ಟೆಲ್ ಕೊಠಡಿಯೊಳಗೆ ಕರುಣೆಯಿಲ್ಲದೆ ಥಳಿಸಿದ ವಿಡಿಯೋ ವೈರಲ್ ಆಗಿದೆ. ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಹಲ್ಲೆಕೋರರು ಆತನನ್ನು ದೊಣ್ಣೆಗಳಿಂದ ಹೊಡೆಯುತ್ತಲೇ ಇರುವಾಗ ಕ್ಷಮೆ ಯಾಚಿಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.
ಸಂತ್ರಸ್ತೆ ಮತ್ತು ಎಲ್ಲಾ ಆರೋಪಿಗಳು ಎಸ್ಆರ್ಕೆಆರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದು, ಘಟನೆ ಒಂದೆರಡು ದಿನಗಳ ಹಿಂದೆ ನಡೆದಿದೆ ಎಂದು ವರದಿಯಾಗಿದೆ.
ಸಂತ್ರಸ್ತ ವಿದ್ಯಾರ್ಥಿ ಅಂಕಿತ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ದೇಹದ ತುಂಬಾ ಗಾಯಗಳಾಗಿವೆ. ಅವರ ಎದೆ ಮತ್ತು ಕೈಗಳ ಮೇಲೆ ತರಚಿದ ಗಾಯಗಳಿವೆ.
ನಾಲ್ವರು ಆರೋಪಿಗಳು ಅಂಕಿತ್ ನಿಗೆ ಇಸ್ತ್ರಿ ಪೆಟ್ಟಿಗೆಯನ್ನು ಬಳಸಿ ಹಲ್ಲೆ ಮಾಡಿದ್ದಾರೆ. ದೊಣ್ಣೆ ಮತ್ತು ಪಿವಿಸಿ ಪೈಪ್ ಗಳಿಂದ ಹೊಡೆದಿದ್ದಾರೆ ಎಂದು ಶಂಕಿಸಲಾಗಿದೆ.
Four engineering students studying in #SRKR #Engineering College #Bhimavaram #WestGodavari #AP have been arrested for assaulting fellow student inside hostel room with sticks, PVC pipes & branding him on chest with hot iron box even as he is pleading to be spared #AndhraPradesh pic.twitter.com/QeMubMkt7i
— rejected guy (@Brother31952713) November 5, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.