ಐಸಿಸ್ಗೆ ಎಂಟೆಕ್ ವಿದ್ಯಾರ್ಥಿ
Team Udayavani, Sep 25, 2017, 6:45 AM IST
ತಿರುವನಂತಪುರಂ: ಕೇರಳದ ಮಳಪ್ಪುರಂನ ಎಂಟೆಕ್ ವಿದ್ಯಾರ್ಥಿಯೊಬ್ಬ ಐಸಿಸ್ ಉಗ್ರ ಸಂಘಟನೆಗೆ ಸೇರಿರುವ ಶಂಕೆ ವ್ಯಕ್ತವಾಗಿದೆ. ವಿಐಟಿ ವೆಲ್ಲೂರ್ನಲ್ಲಿ ವ್ಯಾಸಂಗ ಮಾಡುತ್ತಿದ್ದ 23 ವರ್ಷದ ನಜೀಬ್ ಆಗಸ್ಟ್ 15ರಿಂದ ನಾಪತ್ತೆಯಾಗಿದ್ದು, ಆತ ತನ್ನ ತಾಯಿಗೆ ಕಳುಹಿಸಿರುವ ಟೆಲಿಗ್ರಾಂ ಸಂದೇಶವು ಆತ ಐಸಿಸ್ಗೆ ಸೇರ್ಪಡೆಯಾಗಿದ್ದಾನೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಮಗನ ನಾಪತ್ತೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದ ನಜೀಬ್ ತಾಯಿ, ಮಗ ಕಳುಹಿಸಿರುವ ಸಂದೇಶದ ಕುರಿತೂ ಮಾಹಿತಿ ನೀಡಿದ್ದಾರೆ. “ನನ್ನನ್ನು ಹುಡುಕಬೇಕಾದ ಅಗತ್ಯವಿಲ್ಲ. ನಾನು ನನ್ನ ಗುರಿಯನ್ನು ತಲುಪಿದ್ದೇನೆ. ಈ ಜಾಗಕ್ಕಿಂತ ಅತ್ಯುತ್ತಮ ಪ್ರದೇಶ ಇನ್ನೊಂದಿಲ್ಲ. ಪೊಲೀಸರ ಬಳಿ ಹೋಗಬೇಡಿ. ಅದರಿಂದ ನಿಮಗೇ ತೊಂದರೆ. ಇದು ನನ್ನ ಕೊನೆಯ ಸಂದೇಶ. ಇನ್ಶಾ ಅಲ್ಲಾಹ್’ ಎಂದು ನಜೀಬ್ ಸಂದೇಶ ಕಳುಹಿಸಿದ್ದಾನೆ. ಆತ ಐಸಿಸ್ ಸೇರ್ಪಡೆಯಾಗಿರುವ ಸಾಧ್ಯತೆಯಿದೆ ಎಂದು ತಾಯಿಯೇ ಪೊಲೀಸರಿಗೆ ತಿಳಿಸಿರುವುದಾಗಿ ಮಳಪ್ಪುರಂ ಎಸ್ಐ ಬಿನು ಬಿ.ಶ್ರೀಧರನ್ ತಿಳಿಸಿದ್ದಾರೆ.
ಅಬು ಬಶೀರ್ ಎಂಬ ಹೆಸರಿನಲ್ಲಿ ನಜೀಬ್ ತನ್ನ ತಾಯಿಗೆ ಸಂದೇಶ ಕಳುಹಿಸಿದ್ದ. ಇದು ಐಸಿಸ್ಗೆ ಸೇರ್ಪಡೆಗೊಳ್ಳುವವರಿಗೆ ಉಗ್ರ ಸಂಘಟನೆ ನೀಡುವ ಹೆಸರು. ಈ ಹಿಂದೆ ಕೇರಳದಿಂದ ಹೋಗಿ ಐಸಿಸ್ಗೆ ಸೇರ್ಪಡೆ ಯಾದವರು ಕಳುಹಿಸಿದ್ದ ಸಂದೇಶದ ಮಾದರಿಯಲ್ಲೇ ನಜೀಬ್ ಸಂದೇಶವೂ ಇರುವ ಕಾರಣ, ಆತ ಐಸಿಸ್ ಸೇರಿರುವ ಶಂಕೆ ಬಲವಾಗಿದೆ ಎಂದಿದ್ದಾರೆ ಶ್ರೀಧರನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Borewell Tragedy: ಹತ್ತು ದಿನಗಳ ಕಾರ್ಯಾಚರಣೆ… ಕೊನೆಗೂ ಬದುಕಿ ಉಳಿಯಲಿಲ್ಲ ಚೇತನಾ
Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು
Navy: ಜ.15ಕ್ಕೆ ನೌಕಾಪಡೆಗೆ 2 ಯುದ್ಧ ನೌಕೆ, 1 ಸಬ್ಮರೀನ್ ಸೇರ್ಪಡೆ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
Viral: ಫೇಸ್ಬುಕ್ ಪ್ರೇಯಸಿ ಭೇಟಿಗೆ ಅಕ್ರಮವಾಗಿ ಪಾಕ್ಗೆ ತೆರಳಿ ಸಿಕ್ಕಿಬಿದ್ದ ಭಾರತೀಯ ಯುವಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.