ಮುಜಫರನಗರ : ಹುಡುಗಿಯರ ಚುಡಾವಣೆ, ಆಕ್ಷೇಪಿಸಿದವರಿಗೆ ಹಲ್ಲೆ
Team Udayavani, Oct 3, 2018, 12:14 PM IST
ಮುಜಫರನಗರ : ಶಾಲೆಯಿಂದ ಮರಳುತ್ತಿದ್ದ 12ನೇ ತರಗತಿಯ ಮೂವರು ವಿದ್ಯಾರ್ಥಿನಿಯರನ್ನು ಚುಡಾಯಿಸಿದ್ದಲ್ಲದೆ ಇದನ್ನು ಆಕ್ಷೇಪಿಸಿದ ಇಬ್ಬರನ್ನು ದುಷ್ಕರ್ಮಿ ತರುಣರು ಅಮಾನುಷವಾಗಿ ಹೊಡೆದು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಕೋತ್ವಾಲಿ ಪೊಲೀಸ್ ಠಾಣೆ ಸಮೀಪದ ಫತೇರ್‌ಶಾ ಚೌಕದಲ್ಲಿ ಈ ಘಟನೆ ನಡೆದಿದೆ. 12ನೇ ತರಗತಿಯ ಮೂವರು ವಿದ್ಯಾರ್ಥಿನಿಯರನ್ನು ಬೈಕಿನಲ್ಲಿ ಬಂದ ಇಬ್ಬರು ಕಾಮುಕ ತರುಣರು ಚುಡಾಯಿಸಿದರು. ಅಲ್ಲೇ ಸಾಗುತ್ತಿದ್ದ ಇಬ್ಬರು ವ್ಯಕ್ತಿಗಳು ಇದಕ್ಕೆ ಆಕ್ಷೇಪಿಸಿದಾಗ ಅವರ ಮೇಲೆ ಈ ತರುಣರು ಹಲ್ಲೆ ನಡೆಸಿದ್ದಲ್ಲದೇ ಹುಡುಗಿಗೆ ಕಪಾಳ ಮೋಕ್ಷ ಮಾಡಿದರು.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆಯ ಬಳಿಕ ದುಷ್ಕರ್ಮಿ ತರುಣರು ಪರಾರಿಯಾಗಿದ್ದು ಅವರಿಗಾಗಿ ಶೋಧ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.