ಸಬ್‌ಮರಿನ್ ಪ್ರಾಜೆಕ್ಟ್ ಸಿದ್ಧ : 45 ಸಾವಿರ ಕೋಟಿ ರೂ. ವೆಚ್ಚದ ಯೋಜನೆ
Team Udayavani, Jun 21, 2019, 5:55 AM IST
ಹೊಸದಿಲ್ಲಿ: ಕೇಂದ್ರ ಸರಕಾರವು ಈಗಾಗಲೇ ಯೋಜಿಸಿದ 45 ಸಾವಿರ ಕೋಟಿ ರೂ. ವೆಚ್ಚದಲ್ಲಿ ಆರು ಸಬ್‌ಮರೀನ್ ನಿರ್ಮಾಣ ಯೋಜನೆ ಅಡಿ ಮಹತ್ವದ ಹೆಜ್ಜೆ ಇಟ್ಟಿದ್ದು, ಇನ್ನೊಂದು ಜಲಾಂತರ್ಗಾಮಿ ಉತ್ಪಾದನ ಘಟಕ ಸ್ಥಾಪಿಸಲು ನಿರ್ಧರಿಸಿದೆ. ಸದ್ಯ ಮುಂಬಯಿನ ಮಡಗಾಂವ್ ಡಾಕ್‌ಯಾರ್ಡ್ ನಲ್ಲಿ ಮೊದಲ ಹಂತದಲ್ಲಿ ಫ್ರೆಂಚ್ ಸಹಭಾಗಿತ್ವದಲ್ಲಿ ಸ್ಕಾಪೀìನ್ ಶ್ರೇಣಿಯ ಸಬ್‌ಮರೀನ್ ನಿರ್ಮಾಣ ಮಾಡಲಾಗುತ್ತಿದೆ.
ಕೇಂದ್ರ ಸರಕಾರ ಈಗ ಪ್ರಸ್ತಾವಿಸಿರುವ 2ನೇ ಹಂತದಲ್ಲಿ ವಿದೇಶಿ ಕಂಪೆನಿಗಳು ಭಾರತದ ಕಂಪೆನಿಯ ಸಹಭಾಗಿತ್ವದಲ್ಲಿ ಸಬ್‌ಮರೀನ್ ನಿರ್ಮಿಸಲಿವೆ. ಈ ಯೋಜನೆಯು ದೇಶೀ ವಿನ್ಯಾಸ ಮತ್ತು ನಿರ್ಮಾಣ ಸಾಮ ರ್ಥ್ಯಕ್ಕೆ ಮಹತ್ವದ ಉತ್ತೇಜನ ನೀಡಲಿದೆ. ಈ ಯೋಜನೆ ಯಶಸ್ವಿಯಾದರೆ ಜಗತ್ತಿನಲ್ಲೇ ಭಾರತವು ಸಬ್‌ಮರೀನ್ ನಿರ್ಮಾಣದ ಕೇಂದ್ರವಾಗಿ ಹೊರ ಹೊಮ್ಮ ಲಿದೆ. ಈಗಾಗಲೇ ಮೊದಲ ಹಂತದಲ್ಲಿ 6 ಜಲಾಂತ ರ್ಗಾಮಿಗಳನ್ನು ನಿರ್ಮಿ ಸಲಾಗುತ್ತಿದ್ದು, 2ನೇ ಹಂತದಲ್ಲಿ ಇನ್ನೂ 6 ಸಬ್‌ಮರೀನ್‌ಗಳ ನಿರ್ಮಾಣಕ್ಕೆ ಆರ್ಡರ್ ನೀಡುವ ಸಾಧ್ಯತೆಯಿದೆ.
ಸದ್ಯ ಈ ಯೋಜನೆಯಲ್ಲಿ ಆಸಕ್ತಿ ಹೊಂದಿರುವ ಭಾರತೀಯ ಕಂಪೆನಿಗಳನ್ನು ಗುರುತಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ಆಹ್ವಾನಿಸಲಾಗಿದೆ. ಮುಂದಿನ 2 ತಿಂಗಳಲ್ಲಿ ಆಸಕ್ತ ಕಂಪೆನಿಗಳು ತಮ್ಮ ಆಸಕ್ತಿ ಪ್ರಕಟಿಸಲು ಅವಕಾಶವಿದೆ. ಅನಂತರದ ಹಂತದಲ್ಲಿ ಸರಕಾರ ಬಿಡ್ ಕರೆಯಲಿದೆ. ಈ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಿದ್ದು, ಈ ಪ್ರಾಜೆಕ್ಟ್ ಅಡಿ ಸಬ್‌ಮರೀನ್ ನಿರ್ಮಾಣವಾಗಲು 5 ವರ್ಷಕ್ಕೂ ಹೆಚ್ಚಿನ ಅವಧಿ ತೆಗೆದುಕೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
MUST WATCH
ಹೊಸ ಸೇರ್ಪಡೆ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
ನ.8 ರಂದು ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಸಮಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.